ಕೊಪ್ಪಳ
ಜಿಲ್ಲೆಯಲ್ಲಿ ಬಹುದೊಡ್ಡ ಕರ್ಮಕಾಂಡ ಒಂದು ಬಯಲಾಗಿದೆ. ಎಂಬಿಬಿಎಸ್ ಸೀಟ್ಗಾಗಿ ನಕಲಿ ಅಂಗವಿಕಲ ಪ್ರಮಾಣ ಪತ್ರವನ್ನು ಸೃಷ್ಟಿಸಿರುವಂತಹ ಘಟನೆ ನಡೆದಿದೆ. ಸದ್ಯ ಜಿಲ್ಲೆಯ ಕುಕನೂರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರ ತಪಸಾಣಾ ಅಧಿಕಾರಿಯನ್ನ ಪೊಲೀಸರು ಬಂಧಿಸಿದ್ದಾರೆ. ಸುಧಾಕರ್ ಬಂಧಿತ ಅಧಿಕಾರಿ. ಸುಮಾರು 21 ವಿದ್ಯಾರ್ಥಿಗಳಿಗೆ ಸುಧಾಕರ್ ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿರುವ ಆರೋಪ ಕೇಳಿಬಂದಿದೆ.
