ಇಸ್ಲಾಮಾಬಾದ್
ಆಪರೇಷನ್ ಸಿಂಧೂರ್ಗೆ ತಕ್ಕ ಪ್ರತೀಕಾರವನ್ನು ನಾವು ತೀರಿಸಿಕೊಳ್ಳುತ್ತೇವೆ ಎಂದು ಲಷ್ಕರ್ ಎ ತೊಯ್ಬಾ ಮುಖ್ಯಸ್ಥ ಸೈಫುಲ್ಲಾ ಕಸೂರಿ ಭಾರತಕ್ಕೆ ಬಹಿರಂಗ ಬೆದರಿಕೆ ಹಾಕಿದ್ದಾನೆ. ಪ್ರಧಾನಿ ಮೋದಿಯವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿ, ನಮ್ಮ ಸಂಕಲ್ಪ ಇನ್ನೂ ಬಲವಾಗಿದೆ ಎಂದು ಹೇಳಿದ್ದಾನೆ.ಜಮ್ಮು ಮತ್ತು ಕಾಶ್ಮೀರದ ನದಿಗಳು ಮತ್ತು ಅಣೆಕಟ್ಟುಗಳು ನಮಗೆ ಸೇರುತ್ತವೆ.ಇದು ಕಠಿಣ ಸಮಯ ಆದರೆ ನಾವು ನಮ್ಮ ಸಹೋದರರ ರಕ್ತದ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹೇಳುತ್ತಿರುವುದನ್ನು ಕಾಣಬಹುದು. ಲಷ್ಕರ್ನ ಹಿರಿಯ ಕಮಾಂಡರ್ ಕಸೂರಿ ಟಿಆರ್ಎಫ್ ಕಾರ್ಯಕರ್ತನಾಗಿದ್ದು, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ.








