ಡೆಹ್ರಾಡೂನ್:
ಮಿಟ್ರನ್ ಆಂಡ್ರಾಯ್ಡ್ ಅಪ್ಲಿಕೇಶನ್ ನ್ನು ಇಲ್ಲಿಯವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.ಟಿಕ್ ಟಾಕ್ ಮಾದರಿಯಲ್ಲಿಯೇ ಮಿಟ್ರನ್ ಅಪ್ಲಿಕೇಶನ್ ಇದ್ದು ಐಐಟಿ ರೂರ್ಕೆಲಾದ ಐವರು ಹಳೆಯ ವಿದ್ಯಾರ್ಥಿಗಳು ಇದನ್ನು ಕಂಡುಹಿಡಿದಿದ್ದಾರೆ.
2011ನೇ ಸಾಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಿವಾಂಕ್ ಅಗರ್ವಾಲ್ ತಮ್ಮ ನಾಲ್ವರು ಸಹಪಾಠಿ ಗಳೊಂದಿಗೆ ಈ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸಿದ್ದಾರೆ. ವಿದೇಶದ ಅಪ್ಲಿಕೇಶನ್ ನ್ನು ಅವಲಂಬಿಸುವ ಬದಲಿಗೆ ಭಾರತದಲ್ಲಿಯೇ ಅಭಿವೃದ್ಧಿಪಡಿಸಿದರೆ ಉತ್ತಮವೆಂದು ಯೋಚಿಸಿ ತಯಾರಿಸಿದೆವು. ಜನರಿಂದ ಸಿಕ್ಕಿದ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಟಿಕ್ ಟಾಕ್ ಚೀನಾ ಮೂಲದ್ದಾಗಿದ್ದು ಕೋವಿಡ್-19 ಸಮಯದಲ್ಲಿ ಅದರ ಬಳಕೆಯನ್ನು ನಿಷೇಧಿಸಬೇಕೆಂಬ ಮಾತು, ಅಭಿಪ್ರಾಯಗಳು ಎಲ್ಲೆಡೆ ಕೇಳಿಬರುತ್ತಿವೆ. ಇಂತಹ ಸಂದರ್ಭದಲ್ಲಿ ಮಿಟ್ರನ್ ಆಪ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ಕಳೆದ ಏಪ್ರಿಲ್ 11ರಂದು ಆರಂಭಗೊಂಡಿತ್ತು.