ಕೊನೆಗೂ ರಿಲೀಸ್‌ ಆಯ್ತು ಕಾಂತಾರ-1 ಟ್ರೈಲರ್‌…..!

ಬೆಂಗಳೂರು :

     ಬಹುನಿರೀಕ್ಷಿತ ಕಾಂತಾರ ಚಿತ್ರದ ಟ್ರೈಲರ್‌ ಇಂದು ಬಿಡುಗಡೆಯಾಗಿದೆ. ಇಂದು ಮಧ್ಯಾಹ್ನ ಸರಿಯಾಗಿ 12: 45 ನಿಮಿಷಕ್ಕೆ ಕಾಂತಾರ-1 ಮೂವಿಯ ಟ್ರೈಲರ್ ರಿಲೀಸ್ ಆಗಿದೆ. ರಿಷಬ್‌ ಶೆಟ್ಟಿ ಭಿರ್ಮೆ ಎಂಬ ಬುಡಕಟ್ಟು ಪಾತ್ರದಲ್ಲಿ ಮಿಂಚಿದ್ದಾರೆ. ಕಾಡಿನ ಮಧ್ಯೆ ಕಥೆ ಶುರುವಾಗುತ್ತದೆ. ರಿಷಬ್ ಶೆಟ್ಟಿ ಮತ್ತೊಮ್ಮೆ ಕಾಂತಾರ ಚಾಪ್ಟರ್ 1ನಲ್ಲಿ ಡಿವೈನ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಗ್ಲಿಂಪ್ಸ್, ವಿಡಿಯೋ, ಫೋಟೋಗಳು ಬಿಡುಗಡೆಯಾಗಿದ್ದು, ಬಹಳಷ್ಟು ಕುತೂಹಲವನ್ನು ಮೂಡಿಸಿದ್ದವು. ಇದೀಗ ಟ್ರೈಲರ್‌ ಕೂಡ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

    ಕಾಂತಾರ 1 ರಲ್ಲಿ ರುಕ್ಮಿಣಿ ವಸಂತ್‌ ರಿಷಬ್‌ಗೆ ನಾಯಕಿಯಾಗಿದ್ದಾರೆ. ಭಿರ್ಮೆ  (ರಿಷಬ್‌ ಶೆಟ್ಟಿ) ಕಾಡಿನಲ್ಲಿ ಬದುಕುವ ಜನರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಾಡಿನ ಜನರ ಆಚರಣೆ, ನಂಬಿಕೆ, ಸಂಪ್ರದಾಯವನ್ನು ಚಿತ್ರದಲ್ಲಿ ತೋರಿಸಲಾಗಿದೆ. ನಾಯಕನ ಸ್ಥಾನಕ್ಕೆ ಹೋರಾಡುವ ಕಥೆಯ ರೀತಿಯಲ್ಲಿ ಕಾಂತಾರಾ ಟ್ರೈಲರ್‌ ಕಾಣಿಸಿದ್ದರೂ, ಚಿತ್ರದ ಒಳಗೆ ಏನಿದೆ ಎಂಬುದು ಅ. 2 ರಂದೇ ರಿವೀಲ್‌ ಆಗಬೇಕಿದೆ.

    ಈ ಚಿತ್ರದಲ್ಲಿಯೂ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಮೊದಲಾದವರು ನಟಿಸಿದ್ದಾರೆ. ಕನ್ನಡದವರೇ ಆದ ಗುಲ್ಶನ್ ದೇವಯ್ಯ ರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಅರವಿಂದ್ ಎಸ್. ಕಶ್ಯಪ್ ಅವ ಛಾಯಾಗ್ರಹಣ ಹಾಗೂ ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ “ಕಾಂತಾರ-1 ಚಿತ್ರಕ್ಕಿದೆ.

Recent Articles

spot_img

Related Stories

Share via
Copy link