ವಾಯು ಮಾಲಿನ್ಯ : ಸ್ವ- ನಿಯಂತ್ರವಿದ್ದರೆ ಒಳ್ಳಯದು: ಜಾವ್ಡೇಕರ್

ನವದೆಹಲಿ

    ರಾಷ್ಟ್ರೀಯ ರಾಜಧಾನಿಯಲ್ಲಿ ಮಾಲಿನ್ಯ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ ನಡುವೆಯೇ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ವಾಯ ಮಾಲಿನ್ಯ ನಿವಾರಣೆಗೆ ಸ್ವಯಂ – ನಿಯಂತ್ರಣ ವಿಧಿಸಿಕೊಳ್ಳುವ ಕುರಿತು ಸೋಮವಾರ ಒತ್ತಿ ಹೇಳಿದ್ದಾರೆ.

   2019ರ ಐಸಿಸಿ ಸುಸ್ಥಿರ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಚಿವರು, ಈ ಬಾರಿ ದೀಪಾವಳಿಯಲ್ಲಿ ದೇಶಾದ್ಯಂತ ಮಕ್ಕಳು ಪಟಾಕಿ ಬಳಸದಿರಲು ನಿರ್ಧರಿಸಿದ ಕಾರಣ ಪಟಾಕಿ ಬಳಕೆ ಶೇ. 75ರಷ್ಟು ಇಳಿಕೆಯಾಗಿದೆ. ಇದು ಸ್ವಯಂ – ನಿಯಂತ್ರಣದ ಫಲಶೃತಿಯಾಗಿದೆ ಎಂದು ಸಚಿವರು ಹೇಳಿದ್ದಾರೆ

   ಪ್ರತಿಯೊಂದರ ಮೇಲೂ ಸರ್ಕಾರ ನಿಯಂತ್ರಣ ಹೇರಬೇಕು ಎಂದು ಪ್ರತಿಪಾದಿಸುವವರ ಪರವಾಗಿ ನಾನಿಲ್ಲ. ನಿಯಂತ್ರಣ, ನಿರ್ಬಂಧ ಹೇರಿಕೊಳ್ಳುವ ಅಧಿಕಾರವನ್ನು ಭಾಗಿದಾರರಿಗೆ ನಿಯೋಜಿಸಲು ನಾನು ಸಿದ್ಧ. ಆದರೆ ಭಾಗಿದಾರರು ಈ ನಿಯಂತ್ರಣಗಳನ್ನು ಜವಬ್ದಾರಿಯುತವಾಗಿ ಬಳಸಬೇಕು ಎಂದು ಕಿವಿಮಾತು ಹೇಳಿದರು.ವಾಯು ಮಾಲಿನ್ಯ ಸಮಸ್ಯೆ ನಿಭಾಯಿಸಲು ಜನರು ಜವಾಬ್ದಾರಿಯುತ ವರ್ತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap