ಸೋನಮ್ ವಾಂಗ್ಚುಕ್ ಮೇಲೆ ಸರ್ಕಾರ ಕಣ್ಣು…..!

ಲೆಹ್: 

    ಲಡಾಖ್‌ಗೆ  ರಾಜ್ಯ ಸ್ಥಾನ ನೀಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ  ಸೆಪ್ಟೆಂಬರ್ 24ರಂದು ಹಿಂಸಾತ್ಮಕ ರೂಪ ಪಡೆದು, ಘಟನೆಯಲ್ಲಿ 4 ಜನ ಮೃತಪಟ್ಟು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಲೆಹ್‌ನಲ್ಲಿ   ಪ್ರತಿಭಟನೆ ವೇಳೆ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ.

   ಪರಿಸ್ಥಿತಿಯನ್ನರಿತ ಕೇಂದ್ರ ಸರ್ಕಾರ, ಇನ್ನೋವೇಟರ್ ಸೋನಾಂ ವಾಂಗ್‌ಚುಕ್   ಈ ಅವಾಂತರಕ್ಕೆ ಕಾರಣವೆಂದು ಹೇಳಿದ್ದು, ಜನರನ್ನು ಪ್ರಚೋದಿಸಿದರು ಎಂದು ಆರೋಪಿಸಿದೆ. ವಾಂಗ್‌ಚುಕ್ ತಮ್ಮ 15 ದಿನದ ಉಪವಾಸವನ್ನು ನಿಲ್ಲಿಸಿ, “ಶಾಂತಿಯ ಮಾರ್ಗ ವಿಫಲವಾಯಿತು” ಎಂದು ಹೇಳಿದ್ದಾರೆ. 

  ವಾಂಗ್‌ಚುಕ್ ಲಡಾಕ್‌ಗೆ ರಾಜ್ಯ ಸ್ಥಾನ ನೀಡುವುದರ ಜತೆ, 6ನೇ ಅನುಸೂಚಿ, ಉದ್ಯೋಗ ಮೀಸಲಾತಿ ಮತ್ತು ಎರಡು ಸಂಸತ್ ಸೀಟುಗಳನ್ನು ನೀಡುವಂತೆ ಆಗ್ರಹಿಸಿ ಉಪವಾಸ ಮಾಡುತ್ತಿದ್ದರು. 2019ರಲ್ಲಿ ಲಡಾಖ್ ಯೂನಿಯನ್ ಟೆರಿಟರಿಯಾಗಿ, ಸ್ವಾಯತ್ತತೆ ಕಳೆದುಕೊಂಡಿತು. ಇದರಿಂದ ಯುವಕರಲ್ಲಿ ಅಸಮಾಧಾನ ಹೆಚ್ಚಾಯಿತು. “5 ವರ್ಷಗಳಿಂದ ಉದ್ಯೋಗವಿಲ್ಲ, ಇದು Zen-Z ಕ್ರಾಂತಿಯಾಯಿತು” ಎಂದು ವಾಂಗ್‌ಚುಕ್ ಹೇಳಿದರು. ಪ್ರತಿಭಟನೆಯಲ್ಲಿ ಶಾಲಾ ಬಾಲಕಿಯರು, ಕಾಲೇಜು ವಿದ್ಯಾರ್ಥಿಗಳು, ಸಾಧುಗಳು ಭಾಗವಹಿಸಿದ್ದರು. 

   59 ವರ್ಷದ ವಾಂಗ್‌ಚುಕ್ ಲೆಹ್ ಬಳಿಯ ಉಲೇಟೊಕ್ಪೊ ಗ್ರಾಮದವರು. 9 ವರ್ಷದವರೆಗೆ ಮನೆಯಲ್ಲಿ ಓದಿದರು. 1975ರಲ್ಲಿ ತಂದೆ ಸಚಿವರಾದಾಗ ಶ್ರೀನಗರಕ್ಕೆ ತೆರಳಿದರು. ಶಾಲೆಯಲ್ಲಿ ಇಂಗ್ಲಿಷ್, ಹಿಂದಿ, ಉರ್ದು ತಿಳಿಯದೇ ಅವಮಾನ ಎದುರಿಸಿದರು. 12ನೇ ವಯಸ್ಸಿನಲ್ಲಿ ದೆಹಲಿಯ ಶಾಲೆಗೆ ಸೇರಿದರು. ನಂತರ NIT ಶ್ರೀನಗರದಲ್ಲಿ ಎಂಜಿನಿಯರಿಂಗ್ ಮಾಡಿದರು. ‘3 ಐಡಿಯಟ್ಸ್’ ಸಿನಿಮಾದ ಫುನ್ಸುಕ್ ವಾಂಗ್‌ಡು ಪಾತ್ರಕ್ಕೆ ಇವರೇ ಸ್ಫೂರ್ತಿಯಾಗಿದ್ದರು. 

   1988ರಲ್ಲಿ ವಾಂಗ್‌ಚುಕ್ ಸ್ಟುಡೆಂಟ್ಸ್ ಎಜುಕೇಷನಲ್ ಅಂಡ್ ಕಲ್ಚರಲ್ ಮೂವ್‌ಮೆಂಟ್ ಆಫ್ ಲಡಾಖ್ SECMOL ಸ್ಥಾಪಿಸಿ, ಚಟುವಟಿಕೆ ಆಧಾರಿತ ಶಿಕ್ಷಣವನ್ನು ಜಾರಿಗೆ ತಂದರು. ಲಡಾಖಿ ಸಂಸ್ಕೃತಿಗೆ ಸಂಬಂಧಿತ ಪಠ್ಯಕ್ರಮ, ಇಂಗ್ಲಿಷ್ ಶಿಕ್ಷಣವನ್ನು ಒತ್ತಾಯಿಸಿದರು. 2016ರಲ್ಲಿ SECMOL ಕ್ಯಾಂಪಸ್ ಟೆರಾ ಅವಾರ್ಡ್ ಪಡೆಯಿತು. ವ್ಯಾಂಗ್‌ಚುಕ್ ಐಸ್ ಸ್ತೂಪಾ (ಕೃತ್ರಿಮ ಬೆಟ್ಟದ ಗ್ಲೇಷಿಯರ್) ಸಂಶೋಧಿಸಿ, ನೀರು ಸಂಕಷ್ಟಕ್ಕೆ ಪರಿಹಾರ ತಂದರು. ಅವರಿಗೆ 2018ರಲ್ಲಿ ರಮನ್ ಮ್ಯಾಗ್‌ಸೇಸೆ ಅವಾರ್ಡ್ ಸಿಕ್ಕಿತು. 

   ಗೃಹ ಸಚಿವಾಲಯ, “ವಾಂಗ್‌ಚುಕ್‌ರ ಹೇಳಿಕೆಗಳು ಜನರನ್ನು ಉತ್ತೇಜಿಸಿದವು” ಎಂದು ಆರೋಪಿಸಿತು. CBI, ವಾಂಗ್‌ಚುಕ್ ಸ್ಥಾಪಿಸಿದ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಅಲ್ಟರ್ನೇಟಿವ್ ಲರ್ನಿಂಗ್ (HIAL) ವಿರುದ್ಧ FCRA ಉಲ್ಲಂಘನೆ ತನಿಖೆ ನಡೆಸುತ್ತಿದೆ. ಲಡಾಖ್ ಆಡಳಿತ HIALಗೆ ಜಾಗ ರದ್ದು ಮಾಡಿದೆ. ವಾಂಗ್‌ಚುಕ್‌ ಅವರ ಪಾಕಿಸ್ತಾನ ಭೇಟಿಯೂ ತನಿಖೆಯಲ್ಲಿದೆ. “ನನ್ನನ್ನು ಜೈಲಿಗೆ ಹಾಕಿದರೆ ಹೆಚ್ಚಿನ ಸಮಸ್ಯೆಯಾಗಬಹುದು” ಎಂದು ಅವರು ಎಚ್ಚರಿಸಿದ್ದಾರೆ.

Recent Articles

spot_img

Related Stories

Share via
Copy link