ದೆಹಲಿಯಲ್ಲಿ ಪೊಲೀಸ್ ಎನ್‌ಕೌಂಟರ್‌ : ನಾಲ್ವರು ಕುಖ್ಯಾತ ಗ್ಯಾಂಗ್‌ಸ್ಟರ್‌ಗಳ ಹತ್ಯೆ

ನವದೆಹಲಿ:

    ಗುರುವಾರ ಬೆಳಗಿನ ಜಾವ ದೆಹಲಿಯಲ್ಲಿ  ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ದೆಹಲಿಯ ರೋಹಿಣಿಯಲ್ಲಿ ಪೊಲೀಸರು ಎನ್ಕೌಂಟರ್  ನಡೆಸಿದ್ದು, ಬಿಹಾರದ ಸಿಗ್ಮಾ ಗ್ಯಾಂಗ್‌ನ ನಾಲ್ವರು ಮೋಸ್ಟ್ ವಾಂಟೆಡ್ ದರೋಡೆಕೋರರನ್ನು  ಹೊಡೆದುರುಳಿಸಿದ್ದಾರೆ. ಮೃತರಲ್ಲಿ ಬಿಹಾರದ ಸೀತಾಮರ್ಹಿ ನಿವಾಸಿ ಸಿಗ್ಮಾ ಗ್ಯಾಂಗ್ ನಾಯಕ ರಂಜನ್ ಪಾಠಕ್ ಕೂಡ ಸೇರಿದ್ದಾನೆ. ದೆಹಲಿ ಪೊಲೀಸರು ಮತ್ತು ಬಿಹಾರ ಪೊಲೀಸರು ಈ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

   ಎನ್‌ಕೌಂಟರ್‌ನಲ್ಲಿ ಬಿಹಾರ ಮೂಲದ ಮೂವರು ದರೋಡೆಕೋರರು ಸೇರಿದಂತೆ ಒಟ್ಟು ನಾಲ್ವರು ಅಪರಾಧಿಗಳು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 22ರ ರಾತ್ರಿ ಸುಮಾರು 2:20 ರ ಜಾವ, ಬಿಹಾರ ಪೊಲೀಸ್ ಮತ್ತು ದೆಹಲಿ ಪೊಲೀಸ್ ಅಪರಾಧ ವಿಭಾಗದ ಜಂಟಿ ತಂಡ ದೆಹಲಿಯ ರೋಹಿಣಿ ಪ್ರದೇಶದ ಡಾಕ್ಟರ್ ಅಂಬೇಡ್ಕರ್ ಚೌಕ್ ಮತ್ತು ಪನ್ಸಾಲಿ ಚೌಕ್ ನಡುವಿನ ಬಹದ್ದೂರ್ ಶಾ ಮಾರ್ಗದಲ್ಲಿ ನಾಲ್ವರು ಶಂಕಿತ ಅಪರಾಧಿಗಳನ್ನು ಸುತ್ತುವರಿಯಿತು. ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯಿತು.ಈ ನಾಲ್ವರು ದರೋಡೆಕೋರರು ದೆಹಲಿ ಪೊಲೀಸರ ಗುಂಡಿಗೆ ಬಲಿಯಾದರು.

   ಮೃತರ ಗುರುತುಗಳು ಹೀಗಿವೆ: ಬಿಹಾರದ ಸೀತಾಮರ್ಹಿ ಜಿಲ್ಲೆಯ ರಂಜನ್ ಪಾಠಕ್ (25), ಬಿಮ್ಲೇಶ್ ಮಹತೋ ಅಲಿಯಾಸ್ ಬಿಮ್ಲೇಶ್ ಸಾಹ್ನಿ (25), ಮನೀಶ್ ಪಾಠಕ್ (33), ದೆಹಲಿಯ ಅಮನ್ ಠಾಕೂರ್ (21). ಆರೋಪಿಗಳು ಬಿಹಾರದಲ್ಲಿ ಹಲವಾರು ಘೋರ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು.

Recent Articles

spot_img

Related Stories

Share via
Copy link