ಶಕ್ತಿದೇವತೆ ಹಾಸನಾಂಬೆ ದೇಗುಲ ಗರ್ಭಗುಡಿಗೆ ಇಂದು ತೆರೆ, ಈ ವರ್ಷ 26 ಲಕ್ಷ ಮಂದಿ ದರ್ಶನ

ಹಾಸನ :

     ಶಕ್ತಿದೇವತೆ, ಐತಿಹಾಸಿಕ ಹಾಸನಾಂಬೆ ದೇವಿಯ ದೇವಾಲಯದಲ್ಲಿ  ಸಾರ್ವಜನಿಕ ದರ್ಶನಕ್ಕೆ ಇದೀಗ ಅಧಿಕೃತವಾಗಿ ತೆರೆ ಬಿದ್ದಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಕಳೆದ 13 ದಿನಗಳಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಂದು ಮಧ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿ ಬಾಗಿಲು ಬಂದ್‌ ಆಗಲಿದೆ. ಕೊನೆ ದಿನವಾದ ಬುಧವಾರ ಲಕ್ಷಾಂತರ ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆದುಕೊಂಡರು.

    ಕಳೆದ 13 ದಿನಗಳಿಂದ ಇದುವರೆಗೂ 26 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ ಈ ವರ್ಷ ದಾಖಲೆ 22 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಪ್ರತಿ ವರ್ಷ ಒಂದು ಬಾರಿ ಮಾತ್ರ ಭಕ್ತರಿಗೆ ದರ್ಶನ ಕೊಡುವ ಈ ಹಾಸನಾಂಬೆ ದೇವಿ ದೇಗುಲದ ಬಾಗಿಲು ಇಂದು ಬಂದ್ ಮಾಡಿದರೆ ಮುಂದಿನ ವರ್ಷ ಇದೇ ಸಮಯದಲ್ಲಿ ಬಾಗಿಲು ತೆಗೆಯಲಾಗುತ್ತದೆ ಹಾಗೂ ಇಲ್ಲಿ ಹಚ್ಚಿದ ದೀಪ ಆರದೇ ಇರುತ್ತದೆ ಎಂದು ನಂಬಲಾಗುತ್ತದೆ.

   ಕಳೆದ 13 ದಿನಗಳಿಂದ ಸಿಎಂ, ಡಿಸಿಎಂ, ರಿಷಬ್‌ ಶೆಟ್ಟಿ, ಶಿವರಾಜ್‌ಕುಮಾರ್‌ ಅನೇಕ ರಾಜಕೀಯ ನಾಯಕರು, ಸಿನಿಮಾ ತಾರೆಯರು ಸೇರಿದಂತೆ ಹಲವರು ದೇವರ ದರ್ಶನ ಪಡೆದಿದ್ದಾರೆ. ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರು ಸ್ವತಃ ಇಲ್ಲಿನ ಕಾನೂನು ಸುವ್ಯವಸ್ಥೆಗೆ ಫೀಲ್ಡಿಗಿಳಿದು ನೋಡಿಕೊಂಡಿದ್ದರು. 2025ನೇ ಸಾಲಿನಲ್ಲಿ ಹಾಸನಾಂಬೆ ದೇವಿಯನ್ನು ಬರೋಬ್ಬರಿ ಒಟ್ಟು 26,06,691 ಭಕ್ತರು ದರ್ಶನವನ್ನು ಪಡೆದಿದ್ದಾರೆ. 2024ರಲ್ಲಿ 17,47,240 ಭಕ್ತರು ಹಾಸನಾಂಬೆ ದೇವಿಯ ದರ್ಶನವನ್ನು ಪಡೆದಿದ್ದರು.

Recent Articles

spot_img

Related Stories

Share via
Copy link