ಹಳೆ ಲವ್ ಸ್ಟೋರಿ ರಿವಿಲ್ ಮಾಡಿದ ನಟಿ ಅನುಷ್ಕಾ ಶೆಟ್ಟಿ

ನವದೆಹಲಿ:

    ಬಾಹುಬಲಿ, ಅರುಧಂತಿ, ಸಿಂಗಂ ಸಿನಿಮಾ ಖ್ಯಾತಿಯ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ  ಅವರು ತಮ್ಮ ಅದ್ಭುತ ಅಭಿನಯದಿಂದ ಅಪಾರ ಅಭಿಮಾನಿಗಳ ಮನಗೆದ್ದ ನಟಿಯಾಗಿದ್ದಾರೆ. ಸ್ಲಿಮ್‌ ಆ್ಯಂಡ್‌ ಫಿಟ್‌ ಆಗಿದ್ದ ಅನುಷ್ಕಾ ಜೀರೋ ಸೈಜ್‌ ಸಿನಿಮಾಗಾಗಿ ತನ್ನ ದೇಹದ ತೂಕವನ್ನು ನೈಸರ್ಗಿಕ ರೀತಿಯಲ್ಲೇ ಹೆಚ್ಚಿಸಿಕೊಂಡಿದ್ದು ಈ ಹಿಂದೆ ದೊಡ್ಡ ಸುದ್ದಿ ಯಾಗಿತ್ತು. ಹೀಗಾಗಿ ಅವರ ತೂಕ ಇಳಿಕೆ ಕಷ್ಟವಾಗಿದ್ದು ಅದೆ ಕಾರಣಕ್ಕೆ ಅವರಿಗೆ ಸಿನಿಮಾ ಅವಕಾಶ ಅಷ್ಟಾಗಿ ಸಿಗುತ್ತಿಲ್ಲ ಎಂಬ ಮಾತು ಕೂಡ ಕೇಳಿ ಬಂದಿತ್ತು.

     ಆದರೆ ನಟಿ ಅನುಷ್ಕಾ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಾಮಾಜಿಕ ಜಾಲತಾಣದಿಂದಲೂ ಅಂತರ ಕಾಯ್ದು ಜೀವನ ನಡೆಸುತ್ತಿದ್ದಾರೆ. ಅವರಿಗೆ 43ವರ್ಷ ವಯಸ್ಸಾಗಿದ್ದರೂ ಇನ್ನು ಯಾಕೆ ಮದುವೆಯಾಗಿಲ್ಲ? , ಅವರು ನಟ ಪ್ರಭಾಸ್  ಅವರನ್ನು ಲವ್ ಮಾಡುತ್ತಿರಬೇಕು ಎಂಬೆಲ್ಲ ವದಂತಿ ಹರಿದಾಡಿತ್ತು.ಇದರ ಬೆನ್ನಲ್ಲೆ ನಟಿ ಅನುಷ್ಕಾ ಅವರು ತಮ್ಮ ಹಳೆ ಲವ್ ಸ್ಟೋರಿ ಒಂದನ್ನು ರಿವಿಲ್ ಮಾಡಿದ್ದಾರೆ.

        ನಟಿ ಅನುಷ್ಕಾ ಅವರು ಈ ಹಿಂದೆ ನಟ ಪ್ರಭಾಸ್, ಗೋಪಿಚಂದ್, ನಾಗಾರ್ಜುನರ ಜೊತೆ ಪ್ರೀತಿಯಲ್ಲಿದ್ದಾರೆಂಬ ವದಂತಿಗಳು ಅನೇಕ ವರ್ಷದಿಂದ ಹರಿದಾಡಿದ್ದವು. ಆದರೆ ಈ ಎಲ್ಲ ವಿಚಾರಕ್ಕೆ ಅವರು ಸ್ಪಷ್ಟನೆ ನೀಡಿರಲಿಲ್ಲ. ಅದರ ಬದಲು ತಮ್ಮ ಶಾಲಾ ದಿನಗಳಲ್ಲೇ ಪ್ರೀತಿಯಲ್ಲಿ ಬಿದ್ದಿದ್ದ ವಿಚಾರವನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. ಶಾಲಾ ಅವಧಿಯಲ್ಲಿ ಮಾಡಿದ್ದ ಆ ಪ್ರಪೋಸ್ ಅನ್ನು ತಾನು ಒಪ್ಪಿಕೊಂಡಿರುವುದಾಗಿ ಅವರು ಹೇಳಿದ್ದಾರೆ. 

       ಅನುಷ್ಕಾ ತಮ್ಮ ಮೊದಲ ಪ್ರೇಮ ನಿವೇದನೆ ಬಗ್ಗೆ ಮಾತನಾಡಿ, ನನ್ನ ಮೊದಲ ಪ್ರೀತಿ ನನಗೆ ಬಹಳ ಕ್ರೇಜಿ ಫೀಲ್ ಕೊಟ್ಟಿದೆ ಅದನ್ನು ಈಗಿನ ಜನರೇಶನ್ ಕ್ರಶ್ ಎಂದು ಸಹ ಹೇಳುತ್ತಾರೆ. ಶಾಲೆಯಲ್ಲಿ ನಾನು ಆರನೇ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ಕ್ಲಾಸ್ ಮೇಟ್ ಒಬ್ಬರು ತಮ್ಮನ್ನು ಪ್ರೀತಿಸುತ್ತಿದ್ದರಂತೆ. ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಒಂದು ದಿನ ನನ್ನ ಬಳಿ ಬಂದು `ನೀನು ನನಗೆ ಇಷ್ಟ, ಅಂತ ಹೇಳಿದ್ರು. ನಾನು ಇದಕ್ಕೆ ಒಂದು ಮಾತೂ ಆಡದೆ ಓಕೆ ಅಂದೆ.

    ಆದರೆ ಅದು ಪ್ರೇಮ ನಿವೇದನೆ ಅಂತ ಆಗ ತನಗೆ ಗೊತ್ತಿರಲಿಲ್ಲ, ಅದಕ್ಕೇ ಓಕೆ ಅಂದಿದ್ದು. ಬಳಿಕ ಗೊತ್ತಾದ ಮೇಲೆ ನನಗೆ ತುಂಬಾ ನಗು ಬಂತು. ಹೀಗಾಗಿ ಆ ಸಿಹಿ ನೆನಪು ಈಗಲೂ ನನಗೆ ಅದ್ಭುತ ಅನುಭವವಾಗೆ ಉಳಿದಿದೆ. ಈಗ ಅವರು ಎಲ್ಲಿದ್ದಾರೆ ಎಂದೆಲ್ಲ ನನಗೆ ಗೊತ್ತಿಲ್ಲ.. ಆ ದಿನಗಳು ಚೈಲ್ಡ್ ವುಡ್ ಲವ್ ಸ್ಟೋರಿ ಆಗಾಗ ನಡೆಯುತ್ತಿತ್ತು. ಹೀಗೆ ನನ್ನ ಬದುಕಲ್ಲಿಯೂ ಒಂದು ಪುಟ್ಟ ಲವ್ ಸ್ಟೋರಿ ಪ್ರಪೋಸಲ್ ಸಿಚುವೆಶನ್ ಬಂದಿತ್ತು ಎಂದು ಅವರು ಹೇಳಿದ್ದಾರೆ.

   ನಟಿಯಾಗುವ ಮೊದಲು ಅನುಷ್ಕಾ ಯೋಗ ತರಬೇತಿ ನೀಡುವ ಶಿಕ್ಷಕಿಯಾಗಿದ್ದರು. ಅವರು ಮುಂಬೈನಲ್ಲಿ ತಮ್ಮ ತರಗತಿಗಳನ್ನು ನಡೆಸುತ್ತಿದ್ದರು. ಬಳಿಕ ಸಿನಿಮಾ ರಂಗದಲ್ಲಿ ಅವಕಾಶ ಸಿಕ್ಕಿ ರಜನಿಕಾಂತ್ ಜೊತೆ ಲಿಂಗಾ, ವಿಜಯ್ ಜೊತೆ ವೆಟ್ಟೈಕಾರನ್ ಮತ್ತು ಸೂರ್ಯ ಜೊತೆ ಸಿಂಗಂ ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ. ಇತ್ತೀಚಿನ ಅವರ ಅಭಿನ ಯದ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಸಾಧಾರಣ ಯಶಸ್ಸು ಕಂಡಿತು. ಅನಂತರ ತೆರೆಕಂಡ ಘಾಟಿ ಸಿನಿಮಾ ಕೂಡ ಅಂದುಕೊಂಡ ಮಟ್ಟಕ್ಕೆ ದೊಡ್ಡ ಯಶಸ್ಸು ಕೂಡ ಪಡೆಯಲಿಲ್ಲ.

Recent Articles

spot_img

Related Stories

Share via
Copy link