ಒಕ್ಕಲಿಗರ ಸಂಘಕ್ಕೆ ಬಿರುಸಿನ ಚುನಾವಣೆ

ತುಮಕೂರು:


ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕಾಗಿ ಭಾನುವಾರ ಬಿರುಸಿನ ಚುನಾವಣೆ ನಡೆಯಿತು. ತುಮಕೂರಿನ ಕಾಳಿದಾಸ ಕಾಲೇಜಿನಲ್ಲಿ ಬೆಳಗ್ಗೆ 7ರಿಂದ ಸಂಜೆ 5ರ ತನಕ ಮತದಾನ ನಡೆಯಿತು.

ಕಳೆದ ಬಾರಿಯ ಚುನಾವಣೆಗಿಂತ ಈ ಬಾರಿ ಅತ್ಯಂತ ಜಿದ್ದಾಜಿದ್ದಿನ ಹಾಗೂ ಪ್ರತಿಷ್ಠಿತ ಕಣವಾಗಿ ಒಕ್ಕಲಿಗರ ಸಂಘದ ಚುನಾವಣೆ ಮಾರ್ಪಟ್ಟಿತು. ಕಳೆದ 15 ದಿನಗಳಿಂದ ಕಾವು ಏರುತ್ತಲೇ ಬಂದ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳ ಮತ ಪ್ರಚಾರ ಕೊನೆಯ ಘಳಿಗೆಯಲ್ಲಿ ಮತ್ತಷ್ಟು ಪ್ರಖರತೆ ಪಡೆದುಕೊಂಡಿತು.

ಜಿಲ್ಲೆಯ ಎರಡು ನಿರ್ದೇಶಕ ಸ್ಥಾನಗಳಿಗೆ 7 ಮಂದಿ ಕಣದಲ್ಲಿದ್ದು, ಪ್ರತಿಯೊಬ್ಬರೂ ತಮ್ಮದೇ ಆದ ಹಂತಗಳಲ್ಲಿ ಪೈಪೋಟಿ ನಡೆಸಿದ್ದಾರೆ. ಮಾಜಿ ಸಚಿವ ಡಿ.ನಾಗರಾಜಯ್ಯ ಅವರ ಪುತ್ರ ಲೋಕೇಶ್, ಏಕೈಕ ಮಹಿಳಾ ಅಭ್ಯರ್ಥಿ ಸುಜಾತ ನಂಜೇಗೌಡ, ಯುವ ಮುಖಂಡ ಬೆಳ್ಳಿ ಲೋಕೇಶ್, ಹಿರಿಯ ಮುಖಂಡ ಆರ್.ಹನುಮಂತರಾಯಪ್ಪ, ಡಾ.ಸಿ.ಕೆ.ಎಂ.ಗೌಡ, ಕಪನಿಗೌಡ, ಶಿವರಾಮಯ್ಯ ಅವರುಗಳು ಸ್ಪರ್ಧೆಯಲ್ಲಿದ್ದು, ಭಾರಿ ಪೈಪೋಟಿ ಎದುರಿಸಿದ್ದಾರೆ.

ಚಿ.ನಾ.ಹಳ್ಳಿ ಹಾಗೂ ಪಾವಗಡ ಹೊರತುಪಡಿಸಿ ಉಳಿದೆಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap