ಕೂಡ್ಲಿಗಿ:
ಕೂಡ್ಲಿಗಿ ಪಟ್ಟಣಕ್ಕೆ ಉಸ್ತುವಾರಿ ಸಚಿವರಾದ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ರವರು ಭೇಟಿ ನೀಡಿದ ವೇಳೆ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವರಾದ ಎನ್.ಎಮ್.ನಬಿ ರವರನ್ನ ಭೇಟಿಯಾಗದ ಹಿನ್ನಲೆಯಲ್ಲಿ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ನಮ್ಮ ಪತ್ರಿಕೆಯೊಂದಿಗೆ ಅಸಮಾಧಾನವನ್ನ ಹಂಚಿಕೊಂಡ ಎನ್.ಎಮ್.ನಬಿ ಅವರ ಪುತ್ರ ಎನ್.ಎಮ್ ನೂರ್ ಅಹಮದ್ ಅವರು ನಮ್ಮ ತಂದೆ ಮುಸ್ಲಿಂ ಸಮಾಜದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಏಕೈಕ ಮೊಟ್ಟಮೊದಲ ಅಲ್ಪಸಂಖ್ಯಾತರ ಸಚಿವರಾಗಿ ಸಮಾಜದ ಹಾಗೂ ಕೂಡ್ಲಿಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದವರು,ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ. ಝೆಡ್.ಜಮೀರ್ ಅಹಮದ್ ರವರು ಕೂಡ್ಲಿಗಿ ಪ್ರವಾಸದ ವೇಳೆ ನಮ್ಮ ಕ್ಷೇತ್ರಕ್ಕೆ ಬಂದು ನಮ್ಮ ತಂದೆಯವರ ಯೋಗಕ್ಷೇಮ ವಿಚಾರಿಸದೆ, ಸಮಾಜದ ಹಿರಿಯರಿಗೆ ಅಗೌರವವನ್ನು ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.








