ದೆಹಲಿ ಸ್ಫೋಟದ ಸಂಚು; ವೈದ್ಯರಿಗೆ ತರಬೇತಿ ಕೊಡುತ್ತಿದ್ದ ಮಾಸ್ಟರ್‌ ಮೈಂಡ್‌ ಬಂಧನ

ಶ್ರೀನಗರ:

    ಫರಿದಾಬಾದ್ ಸ್ಫೋಟಕಗಳ ವಶಪಡಿಸಿಕೊಳ್ಳುವಿಕೆ ಮತ್ತು ದೆಹಲಿಯ  ಕೆಂಪು ಕೋಟೆ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ, ಜಮ್ಮು ಮತ್ತು ಕಾಶ್ಮೀರದ  ಶೋಪಿಯಾನ್‌ನಲ್ಲಿ ಇರ್ಫಾನ್ ಅಹ್ಮದ್ ವಾಘಾ ಎಂದು ಗುರುತಿಸಲಾದ ಇಮಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಶ್ಮೀರದ ಗುಪ್ತಚರ ನಿಗ್ರಹ ದಳ  ಮತ್ತು ಶ್ರೀನಗರ ಪೊಲೀಸರು ಜಂಟಿಯಾಗಿ ಅಹ್ಮದ್ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿದೆ ಎಂದು ತಿಳಿದು ಬಂದಿದೆ.

    ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ  ಮಾಜಿ ಪ್ಯಾರಾಮೆಡಿಕಲ್ ಉದ್ಯೋಗಿಯಾಗಿದ್ದ ಅಹ್ಮದ್, ನೌಗಮ್‌ನಲ್ಲಿ ಇಮಾಮ್ ಆಗಿಯೂ ಸೇವೆ ಸಲ್ಲಿಸಿದ್ದ. ವೈದ್ಯರು ಮತ್ತು ಇತರ ವಿದ್ಯಾವಂತ ಯುವಕರನ್ನು ಉಗ್ರಗಾಮಿ ಸಿದ್ಧಾಂತಗಳ ಕಡೆಗೆ ಸೆಳೆಯುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ.ಆತನ ಪತ್ನಿ ಫರಿದಾಬಾದ್ ಮಾಡ್ಯೂಲ್‌ಗೆ ಸಂಬಂಧಿಸಿದ ವೈದ್ಯ ಡಾ. ಶಾಹೀನ್‌ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾಳೆಂದು ಶಂಕಿಸಲಾಗಿದೆ. ಈಕೆ ನಿಷೇಧಿತ ಗುಂಪು ಜೈಶ್-ಎ-ಮೊಹಮ್ಮದ್  ಅಡಿಯಲ್ಲಿ ಮಹಿಳಾ ವಿಭಾಗವನ್ನು ರಚಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ತನಿಖಾಧಿಕಾರಿಗಳು ಅಹ್ಮದ್‌ನ ಜಾಲವನ್ನು ಡಾ. ಮುಜಮ್ಮಿಲ್ ಶಕೀಲ್ ಮೂಲಕ ಪತ್ತೆಹಚ್ಚಿದ್ದಾರೆ. ಈತ ಕೆಂಪು ಕೋಟೆ ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಡಾ. ಮೊಹಮ್ಮದ್ ಉಮರ್ ಸಹಚರ.

    ಫರಿದಾಬಾದ್‌ನ ಧೌಜ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಶಕೀಲ್, ಇಮಾಮ್ ಒಡೆತನದ ಕೊಠಡಿಗಳಿಂದ ಕಾರ್ಯನಿರ್ವಹಿಸುತ್ತಿದ್ದ. ಅಹ್ಮದ್ ಮುಜಮ್ಮಿಲ್ ಮತ್ತು ಉಮರ್ ಇಬ್ಬರೊಂದಿಗೂ ನಿಕಟ ಸಂಪರ್ಕವನ್ನು ಹೊಂದಿದ್ದ ಎಂದು ತಿಳಿದು ಬಂದಿದೆ. ಅಕ್ಟೋಬರ್ 19 ರಂದು ನೌಗಮ್‌ನ ಬನ್‌ಪೋರಾದಲ್ಲಿ ಜೈಶ್-ಎ-ಮೊಹಮ್ಮದ್‌ನ ಚಿಹ್ನೆಯನ್ನು ಹೊಂದಿರುವ ಪೋಸ್ಟರ್‌ಗಳು ಕಾಣಿಸಿಕೊಂಡ ನಂತರ ಈತನ ವಿಷಯ ಬೆಳಕಿಗೆ ಬಂದಿತ್ತು. 

    ದೆಹಲಿಯಲ್ಲಿ ನಡೆದ ಸ್ಫೋಟವನ್ನು ತನಿಖಾಧಿಕಾರಿಗಳು ಇದು ಆತ್ಮಹುತಿ ಕಾರ್ಯಾಚರಣೆಯಲ್ಲ, ಆಕಸ್ಮಿಕ ಸ್ಫೋಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಫೋಟದ ಸಮಯದಲ್ಲಿ ವಾಹನವು ಚಲಿಸುತ್ತಿದ್ದುದರಿಂದ ಇದು ಆಕಸ್ಮಿಕ ಸ್ಫೋಟ ಎಂದು ಹೇಳಿದ್ದಾರೆ. ಶಂಕಿತನು ಆತ್ಮಹತ್ಯಾ ಕಾರ್ ಬಾಂಬ್ ದಾಳಿಯ ಸಾಮಾನ್ಯ ಮಾದರಿಯನ್ನು ಅನುಸರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಅವನು ಕಾರನ್ನು ಗುರಿಗೆ ಡಿಕ್ಕಿ ಹೊಡೆಸಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ. ಆತ್ಮಾಹುತಿ ದಾಳಿ ಮಾಡುವ ಉದ್ದೇಶವಿದ್ದರೆ ಆತ್ಮಹತ್ಯಾ ಬಾಂಬರ್‌ಗಳ ರೀತಿ ಕಾರ್ಯಾಚರಣೆ ನಡೆಯುತಿತ್ತು ಎಂದು ಅಧಿಕಾರಿಗಳು ತಿಳಿಸಿದರು. i20 ಬಂಪರ್-ಟು-ಬಂಪರ್ ಟ್ರಾಫಿಕ್‌ನಲ್ಲಿ ತೆವಳುತ್ತಾ ಹೋಗುತ್ತಿದ್ದಾಗ ಅದು ಸ್ಫೋಟಗೊಂಡಿತು ಎಂದು ಮೂಲಗಳು ತಿಳಿಸಿವೆ.

Recent Articles

spot_img

Related Stories

Share via
Copy link