ನವದೆಹಲಿ:
ಉತ್ತರ ಪ್ರದೇಶದಲ್ಲಿ ಅಕ್ಕ ಎಂದರೆ ಜನ ಹೇಳುವ ಹೆಸರು ಮಾಯಾವತಿ ಆದರೆ ಅಪರಿಗೆ ಇಂದಿನ ದಿನ ಯಾಕೋ ಸರಿ ಬಂದಿಲ್ಲದಂತೆ ಕಾಣುತ್ತಿದೆ ಯಾಕೆಂದರೆ ಅವರಿಗೆ ಸುಪ್ರೀಂ ಕೋರ್ಟ್ ದೊಡ್ಡದೊಂದು ಶಾಕ್ ನೀಡಿದೆ.
ಮಾಯಾವತಿ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ತಮ್ಮ ಪಕ್ಷದ ಚಿಹ್ನೆಯಾದ ಆನೆಯ ಪ್ರತಿಮೆ ನಿರ್ಮಾಣಕ್ಕೆ ಮಾಡಿದ್ದ ಸಂಪೂರ್ಣ ವೆಚ್ಚವನ್ನು ಹಿಂದಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೋರಡಿಸಿದೆ.
ಉತ್ತರ ಪ್ರದೇಶದ ಲಖನೌ ಹಾಗೂ ನೋಯ್ಡಾದಲ್ಲಿ ತಮ್ಮ ಪಕ್ಷದ ಚಿಹ್ನೆ ಆನೆಯ ಪುತ್ಥಳಿಗಳನ್ನು ಸಾರ್ವಜನಿಕ ಹಣದಲ್ಲಿ ಸ್ಥಾಪನೆ ಮಾಡಿದ್ದು ಅದಕ್ಕೆ ಖರ್ಚಾಗಿರುವ ಸಂಪೂರ್ಣ ಹಣವನ್ನು ಹಿಂತಿರುಗಿಸಬೇಕು ಎಂದು ಇಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ತಮ್ಮ ಸ್ವಂತ ಪುತ್ಥಳಿ ಹಾಗೂ ಯಾವುದೇ ಪಕ್ಷದ ಚಿಹ್ನೆಯನ್ನು ಸಾರ್ವಜನಿಕ ಹಣದಲ್ಲಿ ನಿರ್ಮಿಸಬಾರದು ಎಂದು ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು.
ಈ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ‘ನಮ್ಮ ಸದ್ಯದ ದೃಷ್ಟಿಕೋನದ ಪ್ರಕಾರ ಮಾಯಾವತಿ ತಮ್ಮ ಹಾಗೂ ಪಕ್ಷದ ಚಿಹ್ನೆಯ ಪುತ್ಥಳಿಯನ್ನು ನಿರ್ಮಿಸಿ, ರಾಜ್ಯ ಸರ್ಕಾರಕ್ಕೆ ಹೊರೆಯಾಗುವಂತೆ ಮಾಡಿದ್ದಾರೆ. ಆ ಸಾರ್ವಜನಿಕ ಹಣವನ್ನು ಅವರೇ ವಾಪಸ್ ನೀಡಬೇಕು ಎಂದು ಆದೇಶ ನೀಡಿದ್ದಾರೆ.