ಅಕ್ರಮ ಸಂಬಂಧದ ಸಂಶಯದಲ್ಲಿ ಯುವಕನ ಹೊಡೆದು ಕೊಲೆ

ಬೆಂಗಳೂರು

    ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಕಿಡ್‌ನ್ಯಾಪ್‌ ಮಾಡಿ ನಡುರಸ್ತೆಯಲ್ಲಿ ಮನಬಂದಂತೆ ಥಳಿಸಿ ಕೊಲೆ  ಮಾಡಿರುವ ಘಟನೆ ಬೆಂಗಳೂರಿನಲ್ಲಿ  ನಡೆದಿದೆ. ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ಘಟನೆ ನಡೆದಿದ್ದು, ಅಕ್ರಮ ಸಂಬಂಧದಲ್ಲಿ ಭಾಗಿಯಾಗಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಹಿನ್ನಲೆಯಲ್ಲಿ ಥಳಿಸಿ ಕೊಲೆ ಮಾಡಿದ್ದಾರೆ. ಕಳೆದ ಶನಿವಾರ ಈ ಘಟನೆ ನಡೆದಿದೆ.

    32 ವರ್ಷದ ನರಸಿಂಹರಾಜು ಕೊಲೆಯಾದ ಯುವಕ. ಮದುವೆಯಾಗಿದ್ದ ಮಹಿಳೆಯೊಬ್ಬರ ಜೊತೆ ನರಸಿಂಹರಾಜುಗೆ ಅಕ್ರಮ ಸಂಬಂಧ ಇತ್ತು. ಆ ಮಹಿಳೆಯೂ ಆಗಾಗ ನರಸಿಂಹರಾಜು ಮನೆಗೆ ಬರುತ್ತಿದ್ದರು. ಶನಿವಾರ ಆ ಮಹಿಳೆ ನರಸಿಂಹರಾಜು ಮನೆ ಬಳಿ ಬಂದಿದ್ದರು. ಇದನ್ನು ತಿಳಿದ ಮಹಿಳೆಯ ಮನೆಯವರು ನರಸಿಂಹರಾಜು ಮನೆಗೆ ಬಂದಿದ್ದಾರೆ.

    ಮನೆಯಲ್ಲಿದ್ದ ನರಸಿಂಹರಾಜುವನ್ನು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದಿದ್ದು, ರಸ್ತೆಯಲ್ಲಿ ನಾಲ್ಕೈದು ಜನರು ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ರಸ್ತೆಯುದ್ದಕ್ಕೂ ಮನಬಂದಂತೆ ಮಹಿಳೆಯ ಮನೆಯವರು ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಬಂದ ನರಸಿಂಹರಾಜು ತಾಯಿಯ ಮೇಲೂ ಹಲ್ಲೆ ಮಾಡಲಾಗಿದೆ. 

    ಹಲ್ಲೆಯಿಂದಾಗಿ ನರಸಿಂಹರಾಜು ತೀವ್ರವಾಗಿ ಅಸ್ವಸ್ಥನಾಗಿದ್ದು, ಕೂಡಲೇ ನರಸಿಂಹರಾಜುನ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆಗೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಸಾವಿಗೆ ಮಹಿಳೆ ಹಾಗೂ ಕುಟುಂಬಸ್ಥರು ಕಾರಣ ಅಂತ ದೂರು ನೀಡಲಾಗಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ.ಹಲ್ಲೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ನರಸಿಂಹರಾಜುವನ್ನು ಕೆಳಗೆ ಬೀಳಿಸಿ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಮನೆಯಿಂದ ಕರೆದೊಯ್ಯುವ ಹಾಗೂ ಹಲ್ಲೆ ಮಾಡುವ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ.

Recent Articles

spot_img

Related Stories

Share via
Copy link