ಮುಂಬೈ:
ಭಾರತದ ಸರಕು ರಫ್ತು ಏಪ್ರಿಲ್ ತಿಂಗಳಲ್ಲಿ 34 .99 ಬಿಲಿಯನ್ ಗೆ ಏರಿಕೆಯಾಗಿದೆ. ವರ್ಷದ ಹಿಂದೆ ಇದೇ ತಿಂಗಳಲ್ಲಿ 34 .62 ಬಿಲಿಯನ್ ಡಾಲರ್ ನಷ್ಟಿತ್ತು.
ಸರ್ಕಾರ ಇಂದು ಈ ಸಂಬಂಧ ಅಧಿಕೃತ ಅಂಕಿ- ಅಂಶಗಳನ್ನು ಪ್ರಕಟಿಸಿದೆ. ಕೇವಲ ರಫ್ತು ಮಾತ್ರವಲ್ಲದೆ ಆಮದು ಸಹ 54 .09 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. 2023 ರ ಏಪ್ರಿಲ್ ತಿಂಗಳಲ್ಲಿ 49.06 ಬಿಲಿಯನ್ ಡಾಲರ್ ನಷ್ಟಿತ್ತು.
ಆಮದು ಮತ್ತು ರಫ್ತು ನಡುವಿನ ವ್ಯಾಪಾರದ ಕೊರತೆ 19 .1 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಹೊಸ ಆರ್ಥಿಕ ವರ್ಷವು ಉತ್ತಮವಾಗಿ ಪ್ರಾರಂಭವಾಗಿದ್ದು ಅದು ಮುಂದುವರಿಯುತ್ತದೆ ಎಂಬ ನಿರೀಕ್ಷೆ ಇದೆ.ಮಾರ್ಚ್ 2024 ರಲ್ಲಿ, ಹೊರಹೋಗುವ ಸಾಗಣೆಗಳು ವರ್ಷದ ಹಿಂದೆ $41.96 ಶತಕೋಟಿಯಿಂದ $41.68 ಶತಕೋಟಿಗೆ ಇಳಿದಿದೆ.
![](https://prajapragathi.com/wp-content/uploads/2024/05/export.gif)