ರಾಜ್ಯದಲ್ಲಿ ಸಚಿವರ ಆಪ್ತರ ಮನೆಗಳ ಮೇಲೆ ಇಡಿ ದಾಳಿ

ಬೆಂಗಳೂರು

    ಒಂದೆಡೆ ರಾಜ್ಯದಲ್ಲಿ ಸಿಎಂ ಕುರ್ಚಿ ಹಾಗೂ ಕ್ಯಾಬಿನೆಟ್‌ ವಿಸ್ತರಣೆ ಸಂಬಂಧಿಸಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಬೆಂಗಳೂರಿನಲ್ಲಿ  ಸಚಿವರ ಆಪ್ತರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ  ಮಾಡಿದ್ದಾರೆ. ದೆಹಲಿಯಿಂದ ಆಗಮಿಸಿರುವ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

    ಐಟಿ ಇಲಾಖೆ ವರದಿ ಮೇಲೆ ಇಡಿ ಪ್ರತ್ಯೇಕ ಕೇಸ್ ದಾಖಲಿಸಿಕೊಂಡಿತ್ತು. ಇದರ ಆಧಾರದ ಮೇಲೆ ನವದೆಹಲಿಯಿಂದ ಇಡಿ ಅಧಿಕಾರಿಗಳ ತಂಡಗಳು ನಿನ್ನೆ  ಬೆಂಗಳೂರಿನ ವಿವಿಧೆಡೆ ಪ್ರತಿಷ್ಟಿತ ಬಿಲ್ಡರ್ , ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಸಚಿವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿವೆ, ದಾಖಲೆ ಪರಿಶೀಲನೆ ನಡೆಸಿದೆ.

    ಪ್ರತಿಷ್ಠಿತ ಬಿಲ್ಡರ್ಸ್, ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ಕೆಲ ಸಚಿವರ ಆಪ್ತರ ನಿವಾಸಗಳ ಮೇಲೂ ಸಹ ಇಡಿ ದಾಳಿಯಾಗಿದೆ ಎಂದು ತಿಳಿದುಬಂದಿದ್ದು, ಯಾವ್ಯಾವ ಸಚಿವರ ಆಪ್ತರ ಮೇಲೆ ದಾಳಿಯಾಗಿದೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ. 

    ನಿನ್ನೆ ಮುಂಜಾನೆ ಭ್ರಷ್ಟಾಚಾರದ  ಆರೋಪ ಹೊತ್ತ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ಹಲವು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ  ಅಧಿಕಾರಿಗಳು, ಆಸ್ತಿ ಹಾಗೂ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮ ಆಸ್ತಿ ಶೇಖರಣೆ, ಲಂಚ ಕೇಳಿದ ದೂರು, ಲಂಚಕ್ಕಾಗಿ ಕಡತಕ್ಕೆ ಸಹಿ ಹಾಕದೆ ಸತಾಯಿಸುತ್ತಿರುವುದು ಇತ್ಯಾದಿ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

Recent Articles

spot_img

Related Stories

Share via
Copy link