ಬೆಂಗಳೂರು
ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಲಾಲ್ ಬಾಗ್ ಮಾದರಿಯಲ್ಲೇ ರಾಜಧಾನಿಯ ಕಬ್ಬನ್ ಉದ್ಯಾನದಲ್ಲಿ ನ.27ರ ಇಂದಿನಿಂದ ಡಿಸೆಂಬರ್ 7ರವರೆಗೆ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರದರ್ಶನವು ಡಿಸೆಂಬರ್ 7ರವರೆಗೆ ನಡೆಯಲಿದೆ.
ಪ್ರದರ್ಶನದಲ್ಲಿ ಹೈಡ್ರಾಂಜಿ, ಕ್ಯಾಲಲಿಲಿ, ಆರ್ಕಿಟ್ಸ್, ಟ್ಯೂಬ್ರೆಟ್ಸ್ ಬೆಗೆನಿಯಾ ಸೇರಿದಂತೆ 105ಕ್ಕೂ ವಿಶೇಷವಾದ ವಾರ್ಷಿಕ ಹೂವುಗಳ ಬಳಕೆ ಮಾಡಲಾಗಿದೆ. ಆ.7ರಿಂದ 18ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಪುಷ್ಪ ಪ್ರದರ್ಶನದಲ್ಲಿ ಬೋನ್ಸಾಯಿ ಗಿಡಗಳ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಕಾರ್ಯಕ್ರಮ, ಸೇನಾ ಶಸ್ತ್ರಾಸ್ತ್ರ ಹಾಗೂ ಉಪಕರಣಗಳ ಪ್ರದರ್ಶನ, ಇಕೆಬಾನ ಪ್ರದರ್ಶನ ಮತ್ತು ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ತೋಟಗಾರಿಕೆ ಇಲಾಖೆ ವತಿಯಿಂದ ಸುಮಾರು 25ರಿಂದ 30 ಸಾವಿರ ಹೂಕುಂಡಗಳನ್ನು ಬಳಸಿ ಪ್ರದರ್ಶನವನ್ನು ಆಕರ್ಷಣೀಯಗೊಳಿಸಲು ಯೋಜಿಸಲಾಗಿದೆ.
ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ರಜಾ ದಿನಗಳಲ್ಲಿ ವಯಸ್ಕರಿಗೆ 100 ರೂ., ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.
ಆರ್ಸಿಬಿ ಮತ್ತು ಕೆಎಸ್ಸಿಎ ವಿರುದ್ಧ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲು ಏರಿದೆ. ಆರ್ಸಿಬಿ ಸಂಭ್ರಮಾಚರಣೆ ವೇಳೆ ಅಭಿಮಾನಿಗಳ ಕಾಲ್ತುಳಿತದಿಂದ ಆದ ಹಾನಿಯನ್ನು ತುಂಬಿಕೊಡಬೇಕು ಎಂದು ಪ್ರಕರಣ ದಾಖಲಿಸಿದೆ. ಆರ್ಸಿಬಿ ಆಟಗಾರರನ್ನು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ನಲ್ಲಿ ಸರ್ಕಾರ ಸನ್ಮಾನಿಸಿತ್ತು. ಆರ್ಸಿಬಿ ಆಟಗಾರರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳು ವಿಧಾನಸೌಧದ ಪಕ್ಕದಲ್ಲಿ ಇದ್ದ ಕಬ್ಬನ್ ಪಾರ್ಕ್ನಲ್ಲಿನ ಮರಗಳ ಮೇಲೆ ಹತ್ತಿದ್ದರು. ಅಭಿಮಾನಿಗಳ ಕಾಲ್ತುಳಿತದಿಂದ ಸಾಕಷ್ಟು ಸಸಿಗಳು ಹಾಳಾಗಿವೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಆರೋಪಿಸಿ, ಕೋರ್ಟ್ ಮೆಟ್ಟಿಲು ಏರಿದೆ.
ಕಬ್ಬನ್ ಪಾರ್ಕ್ನಲ್ಲಿದ್ದ ಸಸಿಗಳು, ಮರಗಳಿಗೆ ಮತ್ತು ಉದ್ಯಾನವನಕ್ಕೆ ಹಾನಿಯಾಗಿದೆ. ಹಾಗೇ ವಿಧಾನಸೌಧದ ಮುಂಭಾಗದ ಗಾರ್ಡನ್ನಲ್ಲೂ ಹಾನಿಯಾಗಿದೆ. ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಲಾನ್ ಅಳವಡಿಸಿತ್ತು. ಈ ಲಾನ್ ಕೂಡ ಕಾಲ್ತುತುಳಿತದಲ್ಲಿ ಹಾನಿಯಾಗಿದೆ. ಕಬ್ಬನ್ ಪಾರ್ಕ್ಗೆ ಹಾನಿಯಾದರೆ ನೀವೇ ಹೊಣೆಗಾರರು ಅಂತ ಆರ್ಸಿಬಿ ಮತ್ತು ಕೆಎಸ್ಸಿಎಗೆ ಮೊದಲೇ ಷರತ್ತು ಹಾಕಲಾಗಿತ್ತು.








