ಬೆಂಗಳೂರು/ ತುಮಕೂರು :
2020-21ನೇ ಸಾಲಿನ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ಚಿತ್ರ ನಟ ದೇವರಾಜ್, ಹಾಸ್ಯ ಹರಟೆ ಕಲಾವಿದ ಗಂಗಾವತಿ ಪ್ರಾಣೇಶ್ , ಶಿಲ್ಪಕಲಾವಿದ ಡಾ.ಜಿ.ಜ್ಞಾನಾನಂದ ಹಾಗೂ ತುಮಕೂರು ಜಿಲ್ಲೆಯ ಅಮ್ಮನಘಟ್ಟದ ಸಾವಯವ ಕೃಷಿಕ ಎಸ್.ಶಂಕರಪ್ಪ, ಸೇರಿದಂತೆ ವಿವಿಧ ಕ್ಷೇತ್ರದ 63 ಸಾಧಕರಿಗೆ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಲ್ಲಿ ರಾಜಧಾನಿಯವರೇ ಅಧಿಕ ಮಂದಿಯಿದ್ದು, ಬೆಂಗಳೂರು ನಗರದ 9 ಮಂದಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಮೂವರನ್ನು ಪ್ರಶಸ್ತಿಗೆ ಪರಿಗಣಿಸುವ ಮೂಲಕ ಸಿಎಂ ಬಸವರಾಜಬೊಮ್ಮಾಯಿ ತವರು ಪ್ರೇಮ ಮೆರೆದಿದ್ದಾರೆ.
ಪ್ರಶಸ್ತಿ ಪುರಸ್ಕೃತರು:
ಸಾಹಿತ್ಯ:
ಮಹಾದೇವ ಶಂಕನಪುರ(ಚಾಮರಾಜನಗರ), ಪ್ರೊ.ಡಿ.ಟಿ.ರಂಗಸ್ವಾಮಿ(ಚಿತ್ರದುರ್ಗ), ಜಯಲಕ್ಷ್ಮೀ ಮಂಗಳಮೂರ್ತಿ(ರಾಯಚೂರು), ಅಜ್ಜಂಪುರ ಮಂಜುನಾಥ್(ಚಿಕ್ಕಮಗಳೂರು), ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ (ವಿಜಯಪುರ), ಸಿದ್ದಪ್ಪ ಬಿದರಿ(ಬಾಗಲಕೋಟೆ).
ರಂಗಭೂಮಿ:
ಫಕೀರಪ್ಪ ರಾಮಪ್ಪಕೊಡಾಯಿ(ಹಾವೇರಿ), ಪ್ರಕಾಶ್ ಬೆಳವಾಡಿ(ಚಿಕ್ಕಮಗಳೂರು), ರಮೇಶ್‍ಗೌಡ ಪಾಟೀಲ(ಬಳ್ಳಾರಿ), ಎನ್.ಮಲ್ಲೇಶಯ್ಯ(ರಾಮನಗರ),ಸಾವಿತ್ರಿ ಗೌಡರು(ಗದಗ).
ಜಾನಪದ:
ಆರ್.ಬಿ.ನಾಯಕ(ವಿಜಯಪುರ),ಗೌರಮ್ಮ ಹುಚ್ಚಪ್ಪ, ಮಾಸ್ತರ್(ಶಿವಮೊಗ್ಗ), ದುರ್ಗಪ್ಪ ಚೆನ್ನದಾಸರ(ಬಳ್ಳಾರಿ), ಬನ್ನಂಜೆ ಬಾಬು ಅಮೀನ್, ಮಲ್ಲಿಕಾರ್ಜುನ ರಾಚಪ್ಪ ಮುದಕವಿ(ಬಾಗಲಕೋಟೆ), ವೆಂಕಪ್ಪ ಗೋವಿಂದಪ್ಪ ಭಜಂತ್ರಿ(ಧಾರವಾಡ), ಮಹಾರುದ್ರಪ್ಪ ವೀರಪ್ಪ ಇಟಗಿ(ಹಾವೇರಿ).
ಸಂಗೀತ: ಸಿ.ತ್ಯಾಗರಾಜು (ಕೋಲಾರ). ಹೆರಾಲ್ಡ್ ಸಿರಿಲ್ ಡಿಸೋಜಾ(ದಕ್ಷಿಣ ಕನ್ನಡ).
ಶಿಲ್ಪಕಲೆ: ಡಾ.ಜಿ.ಜ್ಞಾನಾನಂದ (ಚಿಕ್ಕಬಳ್ಳಾಪುರ), ವೆಂಕಣ್ಣ ಚಿತ್ರಗಾರ(ಕೊಪ್ಪಳ).
ಸಮಾಜಸೇವೆ: ಸೂಲಗಿತ್ತಿ ಯಮುನವ್ವ (ಬಾಗಲಕೋಟೆ), ಮದಲಿ ಮಾದಯ್ಯ(ಮೈಸೂರು), ಮುನಿಯಪ್ಪ ದೊಮ್ಮಲೂರು (ಬೆಂಗಳೂರು ನಗರ), ಬಿ.ಎಲ್.ಪಾಟೀಲ್(ಬೆಳಗಾವಿ), ಡಾ.ಜಿ.ಎನ್.ರಾಮಕೃಷ್ಣೇಗೌಡ(ಮಂಡ್ಯ).
ವೈದ್ಯಕೀಯ: ಡಾ.ಬಿ.ಸುಲ್ತಾನ್(ದಾವಣಗೆರೆ), ಡಾ.ವ್ಯಾಸದೇಶಪಾಂಡೆ(ಧಾರವಾಡ),ಡಾ.ಎ.ಆರ್.ಪ್ರದೀಪ್(ದಂತ ವೈದ್ಯಕೀಯ), ಡಾ.ಸುರೇಶ್‍ರಾವ್(ದಕ್ಷಿಣಕನ್ನಡ), ಡಾ.ಸುದರ್ಶನ್ (ಬೆಂಗಳೂರು), ಡಾ.ಶಿವನಗೌಡ, ರುದ್ರನಗೌಡ ರಾಮನಗೌಡರ್(ಧಾರವಾಡ).
ಕ್ರೀಡೆ: ರೋಹನ್ ಬೊಪ್ಪಣ್ಣ(ಕೊಡಗು), ಕೆ.ಗೋಪಿನಾಥ್(ವಿಶೇಚ ಚೇತನ), ರೋಹಿತ್ ಕುಮಾರ್ ಕಟೀಲ್(ಉಡುಪಿ), ಎ.ನಾಗರಾಜ್ ಕಬ್ಬಡಿ( ಬೆಂಗಳೂರು ನಗರ).
ಸಿನಿಮಾ: ದೇವರಾಜ್ (ಬೆಂಗಳೂರುನಗರ),
ಶಿಕ್ಷಣ: ಸ್ವಾಮಿ ಲಿಂಗಪ್ಪ (ಮೈಸೂರು),ಶ್ರೀಧರ್ ಚಕ್ರವರ್ತಿ(ಧಾರವಾಡ), ಪ್ರೊ.ಪಿ.ವಿ.ಕೃಷ್ಣಭಟ್(ಶಿವಮೊಗ್ಗ).
ಸಂಕೀರ್ಣ: ಡಾ.ಬಿ.ಅಂಬಣ್ಣ(ವಿಜಯನಗರ), ಕ್ಯಾಪ್ಟನ್ ರಾಜರಾವ್(ಬಳ್ಳಾರಿ), ಗಂಗಾವತಿ ಪ್ರಾಣೇಶ್(ಕೊಪ್ಪಳ).
ವಿಜ್ಞಾನ/ತಂತ್ರಜ್ಞಾನ: ಡಾ.ಎಚ್.ಎಸ್.ಸಾವಿತ್ರಿ(ಬೆಂಗಳೂರು ನಗರ), ಪ್ರೊ.ಜಿ.ಯು .ಕುಲಕರ್ಣಿ (ಬೆಂಗಳೂರು).
ಕೃಷಿ: ಡಾ.ಸಿ.ನಾಗರಾಜ್ (ಬೆಂಗಳೂರು ಗ್ರಾಮಾಂತರ), ಗುರುಲಿಂಗಪ್ಪಮೇಲ್ದೊಡ್ಡಿ(ಬೀದರ್), ಶಂಕರಪ್ಪ ಅಮ್ಮನಘಟ್ಟ (ತುಮಕೂರು).
ಪರಿಸರ: ಮಹಾದೇವ ವೇಳಿಪಾ(ಉತ್ತರ ಕನ್ನಡ), ಬೈಕಂಪಾಡಿ ರಾಮಚಂದ್ರ(ದಕ್ಷಿಣಕನ್ನಡ).
ಪತ್ರಿಕೋದ್ಯಮ: ಪಟ್ಟಂ ಅನಂತ ಪದ್ಮನಾಭ (ಮೈಸೂರು), ಯು.ಬಿ.ರಾಜಲಕ್ಷ್ಮೀ (ಉಡುಪಿ.)
ನ್ಯಾಯಾಂಗ:ಸಿ.ಎ.ಕೇಶವಮೂರ್ತಿ(ಮೈಸೂರು.)
ಆಡಳಿತ: ಎಚ್.ಆರ್.ಕಸ್ತೂರಿರಂಗನ್ (ಹಾಸನ).
ಸೈನಿಕ:ನವೀನ್ ನಾಗಪ್ಪ
ಯಕ್ಷಗಾನ: ಗೋಪಾಲ್ ಆಚಾರ್ಯ(ಶಿವಮೊಗ್ಗ).
ಹೊರನಾಡು ಕನ್ನಡಿಗ: ಡಾ.ಸುನೀತಾಶೆಟ್ಟಿ(ಮುಂಬೈ), ಚಂದ್ರಶೇಖರ್ ಪಾಲ್ತಾಡಿ(ಮುಂಬೈ), ಡಾ.ಸಿದ್ದರಾಮೇಶ್ವರ ಕಂಟಿಕರ್, ಪ್ರವೀಣ್‍ಶೆಟ್ಟಿ(ದುಬೈ).
ಪೌರಕಾರ್ಮಿಕ: ರತ್ನಮ್ಮ ಶಿವಪ್ಪ ಬಬಲದ(ಯಾದಗಿರಿ).
ಏಕೀಕರಣ ಹೋರಾಟ: ಮಹದೇವಪ್ಪ ಕಡೆಚೂರು(ಕಲ್ಬುರ್ಗಿ).
ಉದ್ಯಮ: ಶ್ಯಾಮರಾಜು (ಬೆಂಗಳೂರು.)
ಅದಮ್ಯ ಚೇತನ, ವೀರೇಶ್ವರ ಪುಣ್ಯಾಶ್ರಮ ಸೇರಿ 10ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ವಿಶೇಷ ಪ್ರಶಸ್ತಿ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ 10 ಸಂಘ ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿಯನ್ನು ಘೋಷಿಸಿದ್ದು, ತೇಜಸ್ವಿನಿ ಅನಂತ್‍ಕುಮಾರ್ ಅವರು ಮುನ್ನೆಡೆಸುತ್ತಿರುವ ಬೆಂಗಳೂರಿನ ಅದಮ್ಯ ಚೇತನ, ಗದಗಿನ ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ, ದಾವಣಗೆರೆಯ ಹಿಮೋಫೀಲಿಯಾ ಸೊಸೈಟಿ,ಕಲಬುರಗಿಯ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ದಕ್ಷಿಣ ಕನ್ನಡದ ಶ್ರೀರಾಮಕೃಷ್ಣಾಶ್ರಮ,ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್ ಹುಬ್ಬಳ್ಳಿ, ವಿಜಯಪುರ ಅನುಗ್ರಜ ಕಣ್ಣಿನ ಆಸ್ಪತ್ರೆ, ಸ್ಟೆಪ್ ಒನ್ ಹಾಗೂ ಬನಶಂಕರಿ ಮಹಿಳಾ ಸಮಾಜ ಬೆಂಗಳೂರು ಪ್ರಶಸ್ತಿಗೆ ಭಾಜನವಾದ ಸಂಘ ಸಂಸ್ಥೆಗಳಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ