ಗುಬ್ಬಿ:
ಕಳೆದ ಎರಡು ಮೂರು ದಿನಗಳ ಹಿಂದೆ ಎನ್ ಡಿ ಎ ನಾಯಕರುಗಳು ತು ಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮೇಲೆ ಅಧಿಕಾರ ದುರುಪಯೋಗ ಹಾಗೂ ಸ್ವಪಕ್ಷವಾದ ಆರೋಪ ಮಾಡಿದ್ದರು,ಈ ಸಂಬಂಧ ಇಂದು ಗುಬ್ಬಿಯ ನಂದಿನಿ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು
So called ಸಮಾಜಸೇವಕರೇ ಕಳೆದ ಇಪ್ಪತೈದು ವರ್ಷಗಳಿಂದ ನಮ್ಮ ತಾಕತ್ತು ಏನು ಎಂಬುದನ್ನು ತೋರೋಸುತ್ತಲೇ ಬಂದಿದ್ದೀವಿ ನಿಮ್ಮ ಎಲ್ಲಾ ಪ್ರಯೋಗಗಳು ವಿಫಲವಾಗಿವೆ ಇನ್ನು ತಾಕತ್ತಿನಿ ಮಾತನಾಡುತ್ತಲೇ ಇದ್ದೀರಾ ಎಂದರು
ಕೆ ಎಂ ಎಫ್ ಗೆ ಸಂಬಂದಿಸಿದಂತೆ ಪುರಾವೆ ರಹಿತ ಆರೋಪಗಳನ್ನು ಮಾಡುವುದು ಬಿಡಿ ಎಂದು ದಿಲೀಪ್ ಕುಮಾರ್ ಗೆ ನೇರವಾಗಿ ಜಾಡಿಸಿದ ಅವರು ನಿಮ್ಮೂರಿನ ಡೈರಿಗೆ ಸ್ವಂತ ಕಟ್ಟಡ (ಶಿವಸಂದ್ರ) ಮಾಡಿಸಿಕೊಳ್ಳಲು ನಿಮಗೆ ಆಗಿಲ್ಲ ಇನ್ನು ನೀವು ಏನು ಮಾಡಬಲ್ಲಿರಿ ಎಂದು ಆರೋಪಿಸಿ ದರು ಇಲ್ಲಿನ ದಲಿತರಿಗೆ ಇದುವರೆಗೂ ಷೇರು ವಿತರಿಸಿಲ್ಲ ಇಲ್ಲಿನ ಡೈರಿಗೆ ನಿಮ್ಮ ತಾಯಿಯೇ ಅಧ್ಯಕ್ಷರು ಎಂದು ಹೇಳಿದ ಅವರು ನೀವು ಈ ಹಿಂದೆ ಡೈರಿ ಚುನಾವಣೆಗೆ ನಿಲ್ಲುತ್ತೀರ ಎಂದು ಮಾಜಿ ನಿರ್ದೇಶಕ ಚಂದ್ರಶೇಖರ್ ನಿಮ್ಮೂರಿನ ಡೈರಿಯನ್ನು ಸಿ ದರ್ಜೆಗೆ ಇಳಿಸಿದ್ದಾರೆ ಆದರೆ ಇಂದು ಅವರ ಜೊತೆಯಲ್ಲಿ ನನ್ನ ವಿರುದ್ಧ ಪತ್ರಿಕಾಗೋಷ್ಠಿ ನೆಡೆಸುತ್ತಿದ್ದೀರಾ,
ಮಾಜಿ ನಿರ್ದೇಶಕರೇ ಅಧಿಕಾರಿಗಳಿಗೆ ಪ್ರಮೋಶನ್ ಕೊಡಿಸುತ್ತಿನಿ ಎಂದು 12 ಲಕ್ಷ ಕಬಳಿಸಿದ್ದರಲ್ಲ ಇದರ ಬಗ್ಗೆ ಏನು ಹೇಳುತ್ತೀರಾ ಎಂದರು
So called ಸಮಾಜ ಸೇವಕ ಬಿ ಎಸ್ ನಾಗರಾಜು ರವರೇ ನಿಮ್ಮ ಹಳ್ಳಿಯಿಂದ ನಾಲ್ಕು ಕಿಮೀ ದೂರ ಡೈರಿ ಗೆ ಹೋಗಿ ರೈತರು ಹಾಲು ಹಾಕುತ್ತಿದ್ದಾರೆ ನಿಮ್ಮರಲ್ಲಿ ಡೈರಿ ಮಾಡಿ ಸಿ ಕೊಳ್ಳೋ ಅರ್ಹತೆ ನಿಮಗಿಲ್ಲವೇ ಎಂದು ಪ್ರಶ್ನಿಸಿದರು
ಒಂದು ಗಂಟೆಗಳ ಕಾಲ ಸುದ್ದಿ ಗೋಷ್ಠಿ ನೆಡೆಸಿದ ಅವರು ಗುಬ್ಬಿಯ ಪಶು ಆಹಾರ ಘಟಕದಲ್ಲಿ ಕಳಪೆ ಗುಣ ಮಟ್ಟದ ಆಹಾರ ತಯಾರಾಗುತ್ತಿದೆ ಎಂದು ದೂರು ನೀಡಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲಾ ಯಾಕೆಂದರೆ ಕಾಣದ ಕೈ ಯೊಂದು ಇಲ್ಲಿ ಕೆಲಸ ಮಾಡುತ್ತಿದೆ ಎಂದರು
ಸುದ್ದಿ ಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಸಮೀತಿಯ ಅಧ್ಯಕ್ಷ ಕೆ ಆರ್ ವೆಂಕಟೇಶ್,ಮುಖಂಡ ನರಸಿಂಹಯ್ಯ ಹಾಗೂ ಇತರರು ಇದ್ದರು








