ಮುಂಡಗೋಡ :
ಮುಂಡಗೋಡ ನಗರದ ಶಾಸಕರ ಮಾದರಿ ಶಾಲೆಯ ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಕುರಿತಂತೆ ಮಕ್ಕಳು ಬಳಸಿದ್ದ ಆಹಾರ ಪದಾರ್ಥ ಹಾಗೂ ಅಡುಗೆಗೆ ಬಳಸಿದ ದಿನಸಿ ಪದಾರ್ಥಗಳನ್ನು ಪರೀಕ್ಷೆಗಾಗಿ ಬೆಳಗಾವಿಯ ಡಿವಿಜನಲ್ ಫುಡ್ ಲ್ಯಾಬೋರೇಟರಿ ಗೆ ಕಳುಹಿಸಿಕೊಡಲಾಗಿತ್ತು. ವಾರದ ಬಳಿಕ ಬಂದ ಲ್ಯಾಬ್ ರಿಪೋರ್ಟ್ ಬೆಚ್ಚಿ ಬೀಳಿಸುವಂತಿದ್ದು, ನಿಜಕ್ಕೂ ಮಕ್ಕಳ ವಿಷಯದಲ್ಲಿ ಸಂಬಂಧಪಟ್ಟವರ ನಿರ್ಲಕ್ಷಕ್ಕೆ ಪೋಷಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ನೂರಾರು ಮಕ್ಕಳು ಪ್ರತಿನಿತ್ಯ ಸೇವಿಸುವಂತ ಬಿಸಿಯೂಟ ತಯಾರಿಕೆಗೆ ಬಳಸುತ್ತಿದ್ದ ತೊಗರಿ ಬೆಳೆಯು ಕಳಪೆ ಗುಣಮಟ್ಟದಿಂದ ಕೂಡಿದ್ದು ಹಾಗೂ ಮಕ್ಕಳು ಅಸ್ವಸ್ಥಗೊಂಡ ದಿನದಂದು ಊಟಕ್ಕೆ ಬಳಸಿದ ಸಾಂಬಾರಿನಲ್ಲಿ ಇ ಕೋಲಿ ಎಂಟರೊ ಬ್ಯಾಕ್ಟೀರಿಯಸ್ ಎಂಬ ಬ್ಯಾಕ್ಟೀರಿಯ ಸಾಂಬಾರಿನಲ್ಲಿ ಕಂಡಿದ್ದು ತಿನ್ನಲು ಯೋಗ್ಯವಲ್ಲವೆಂದು ಹಾಗೂ ಕುಡಿಯುವ ನೀರು ಕೂಡ ಪರೀಕ್ಷೆಗೊಳಪಟ್ಟಿದ್ದು ನೀರಿನ ಗುಣಮಟ್ಟ ಉತ್ತಮವಾಗಿದೆ ಎಂದು ಉಲ್ಲೇಖಿತವಾಗಿದೆ. ಮುಂದುವರೆದಂತೆ ಅಡುಗೆ ಸಾಮಗ್ರಿಗಳ ದಾಸ್ತಾನು ಕೊಠಡಿ ,ಅಡುಗೆ ಪರಿಕರ ಸ್ವಚ್ಟೆ ಹಾಗೂ ಆಹಾರ ತಯಾರಕರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ವರದಿಯಲ್ಲಿ ತಿಳಿಸಲಾಗಿದೆ .
ಮುಖ್ಯೋಪಾಧ್ಯಾಯರ ಮೇಲಿಲ್ಲ ಕ್ರಮ…?
ಕಳೆದ ಎರಡು ವರ್ಷಗಳ ಅವಧಿಯಲ್ಲೇ ಎರಡನೇ ಬಾರಿಗೆ ಬಿಸಿಯೂಟದಿಂದ ಮಕ್ಕಳು ಅಸ್ವಸ್ಥ ಗೊಂಡ ಪ್ರಕರಣ ವರದಿಯಾಗಿದ್ದು,
ನೂರಾರು ಮಕ್ಕಳು ಪ್ರತಿನಿತ್ಯ ಸೇವಿಸುವಂತ ಬಿಸಿಯೂಟ ವಿಷಯದಲ್ಲಿ ಕಳಪೆ ಗುಣಮಟ್ಟದ ಬೆಳೆ ಪೂರೈಕೆಯಾಗುತ್ತಿದ್ದರು, ಮೇಲಧಿಕಾರಿಗಳಿಗೆ ತಿಳಿಸದೇ ಹಾಗೂ ಈ ವಿಷಯದಲ್ಲಿ ನಿರ್ಲಕ್ಷ ವಹಿಸಿದ ಶಾಲೆಯ ಮುಖ್ಯೋಪಾಧ್ಯಾಯರ ಮೇಲೆ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಮುಂದಾಗಿ ಮಕ್ಕಳ ಹಿತಾಸಕ್ತಿ ಕಾಯಬೇಕು ಎಂದು ಪೋಷಕರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.








