ಟ್ರಾಫಿಕ್ ನಡುವೆ ಹಸುವಿನ ಮೇಲೆ ಸವಾರಿ ಮಾಡಿದ ಬಾಲಕ

ನವದೆಹಲಿ

    ನಗರದ ಜನರನ್ನು ಹೈರಾಣಾಗಿಸುವ ಸಮಸ್ಯೆಗಳಲ್ಲಿ ಟ್ರಾಫಿಕ್‌ ಕೂಡ ಒಂದಾಗಿದೆ. ಅದರಲ್ಲೂ ಬೆಂಗಳೂರು, ಮುಂಬೈ, ದೆಹಲಿಯಂತಹ ನಗರ ಪ್ರದೇಶದದಲ್ಲಿ ಈ ಸಮಸ್ಯೆ ದುಪ್ಪಟ್ಟಾಗಿದೆ.‌ ಇಂತಹ ಬಿಡುವಿಲ್ಲದ ರಸ್ತೆ ಮಧ್ಯದಲ್ಲಿ‌ ಒಂದು ಅಚ್ಚರಿಯ ದೃಶ್ಯ ಎಲ್ಲರ ಗಮನ ಸೆಳೆದಿದೆ. ಹೌದು, ಹೈದರಾಬಾದ್‌ನಲ್ಲಿ ಕಂಡು ಬಂದ ಈ ದೃಶ್ಯ ಗಮನ ಸೆಳೆದಿದೆ. ತೀವ್ರ ವಾಹನಗಳ ದಟ್ಟಣೆ ನಡುವೆಯೂ ಒಬ್ಬ ಬಾಲಕ ಹಸುವಿನ ಮೇಲೆ ಕೂತು ಬಹಳ ಸಲೀಸಾಗಿ ಸವಾರಿ ಮಾಡಿದ್ದಾನೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ .

   ಇಂತಹ ದೃಶ್ಯಗಳು ಸಾಮಾನ್ಯವಾಗಿ ಹಳ್ಳಿ ಪ್ರದೇಶದಲ್ಲಿ ಕಂಡುಬರುತ್ತವೆ. ಆದರೆ ನಗರದ ರಸ್ತೆಗಳಲ್ಲಿ ಇಂತಹ ದೃಶ್ಯ ನೋಡುವುದು ಜನರನ್ನು ಅಚ್ಚರಿಗೆ ದೂಡಿದೆ. ಸುತ್ತಲೂ ಚಲಿಸುತ್ತಿರುವ ಬಸ್, ಕಾರು ಮತ್ತು ಪಾದಚಾರಿಗಳ ನಡುವೆಯೂ ಈ ಬಾಲಕ ಹಸುವಿನ ಮೇಲೆ ವಿಶ್ವಾಸದಿಂದ ಕುಳಿತು ಮುಂದೆ‌ ಸಾಗಿದ್ದಾನೆ‌. ವಿಡಿಯೊದಲ್ಲಿ ಕಾಣುವಂತೆ ಯುವಕ ಯಾವುದೇ ಭಯವಿಲ್ಲದೆ ಸವಾರಿಯನ್ನು ಖುಷಿ ಪಟ್ಟಿದ್ದಾನೆ. ಬಾಲಕನ ತಾಯಿ ಹಗ್ಗದಿಂದ ಹಸುವನ್ನು ಮುನ್ನಡೆಸುತ್ತಿರುವುದು ಕಂಡುಬಂದಿದೆ.

   ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಶೇರ್ ಮಾಡಲಾಗಿದ್ದು”ಆಧುನಿಕ ನಗರ, ಸಾಂಪ್ರದಾಯಿಕ ಸವಾರಿ ಎಂದು ಕ್ಯಾಪ್ಶನ್‌ ನೀಡಲಾಗಿದೆ.‌ ಇಂತಹ ವಾಹನಗಳ ಮಧ್ಯೆ ಯುವಕನೊಬ್ಬ ಗೂಳಿಯ ಮೇಲೆ ಆಕಸ್ಮಿಕವಾಗಿ ಸವಾರಿ ಮಾಡುತ್ತಾನೆ. ಇದು ಸಂಪ್ರದಾಯ ಮತ್ತು ನಗರ ಜೀವನದ ಅಪ ರೂಪದ ದೃಶ್ಯʼʼ ಎಂದು ಬರೆಯಲಾಗಿದೆ. ಸದ್ಯ ಈ ಅನಿರೀಕ್ಷಿತ ವಿಡಿಯೊ ಹೈದರಾಬಾದ್‌ನ ರಸ್ತೆಗಳಲ್ಲಿ ಒಂದು ಕ್ಷಣ ಎಲ್ಲರನ್ನು ಆಶ್ಚರ್ಯಗೊಳಿಸಿ ಜನರಲ್ಲಿ ನಗು ಮತ್ತು ಆಶ್ಚರ್ಯವನ್ನು ಮೂಡಿಸಿದೆ.

     ಈ ವಿಡಿಯೊ ನೋಡಿ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಹೈದರಾಬಾದ್‌ನಲ್ಲಿ ಕಂಡುಬಂದ ಅಪರೂಪದ ದೃಶ್ಯ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ನಗರ ಪ್ರದೇಶದಲ್ಲೂ ಇಂತಹ ಅದ್ಭುತ ದೃಶ್ಯ ಕಂಡು ಬರುತ್ತವೆ ಎಂದು ಕಮೆಂಟ್ ಮಾಡಿದ್ದಾರೆ. ಈ ದೃಶ್ಯದೊಂದಿಗೆ ಮತ್ತೊಂದು ವಿಡಿಯೊವನ್ನು ಶೇರ್ ಮಾಡಲಾಗಿದೆ. ಒಬ್ಬ ಯುವಕ ಇದ್ದಕ್ಕಿದ್ದಂತೆ ಹಸುವಿನ ಮೇಲೆ ಕೂರಲು ಪ್ರಯತ್ನಿಸಿದಾಗ ಅದು ಗಾಬರಿಯಾಗಿ ಆತನನ್ನು ಸಮೀಪದ ರಸ್ತೆ ಮೇಲೆ ಎಸೆದಿದೆ. ಪ್ರಾಣಿಗಳೊಂದಿಗೆ ತಮಾಷೆ ಮಾಡುವುದು ಅಥವಾ ಇಂತಹ ಸಾಹಸಗಳಿಗೆ ಮುಂದಾಗುವುದು ಅಪಾಯಕಾರಿ ಎಂಬುದನ್ನು ಈ ಘಟನೆ ಎತ್ತಿ ಹಿಡಿದಿದೆ. ಈ ಘಟನೆ ಬಗ್ಗೆಯೂ ಬಳಕೆದಾರರು ಕೆಲವು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

Recent Articles

spot_img

Related Stories

Share via
Copy link