ಹೊಸ ವರ್ಷಕ್ಕೆ ಬಿಗ್ ಶಾಕ್; ಫೆಬ್ರವರಿ 1ರಿಂದ ದುಬಾರಿಯಾಗಲಿದೆ ಸಿಗರೇಟ್, ಬೀಡಿ, ಪಾನ್ ಮಸಾಲ

ನವದೆಹಲಿ:

     ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ಜನರಿಗೆ ಬಿಗ್ ಶಾಕ್ ನೀಡಿದೆ. ಫೆಬ್ರವರಿ 1ರಿಂದ ತಂಬಾಕು  ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ  ಮತ್ತು ಪಾನ್ ಮಸಾಲದ ಮೇಲೆ ಹೊಸ ಸೆಸ್  ಅನ್ನು ವಿಧಿಸಿ ಬುಧವಾರವೇ ಅಧಿಸೂಚನೆ ಹೊರಡಿಸಿದೆ. ಇದರಿಂದ ಸಿಗರೇಟ್, ಬೀಡಿ, ಪಾನ್ ಮಸಾಲಗಳ ಬೆಲೆ ಫೆಬ್ರವರಿ 1ರಿಂದ ಹೆಚ್ಚಳವಾಗಲಿದೆ. ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲದ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಾಗಿರುತ್ತದೆ. ಇದು ಇವುಗಳ ಮೇಲೆ ವಿಧಿಸುವ ಪರಿಹಾರ ಸೆಸ್ ಅನ್ನು ಬದಲಾಯಿಸುತ್ತವೆ.

   ಧೂಮಪಾನ, ಮದ್ಯಪಾನ ಆರೋಗ್ಯಗಕ್ಕೆ ಹಾನಿಕಾರಕ ಎಂಬುದು ತಿಳಿದಿದ್ದರೂ ಇದನ್ನು ಬಳಸುವವರು ದಿನೇ ದಿನೇ ಹೆಚ್ಚಾಗುತ್ತಲೇ ಇದ್ದಾರೆ. ಅನೇಕರು ಇದನ್ನು ವ್ಯಸನವನ್ನಾಗಿ ಮಾಡಿಕೊಂಡಿದ್ದಾರೆ. ಇವರಿಗೆ ಈಗ ಬಿಗ್ ಶಾಕ್ ನೀಡಿದೆ ಕೇಂದ್ರ ಸರ್ಕಾರ. ಇವುಗಳ ಮೇಲಿನ ಜಿಎಸ್‌ಟಿ ಏರಿಕೆ ಮಾಡಲಾಗಿದ್ದು, ಇದರಿಂದ ಮುಂದಿನ ಫೆಬ್ರವರಿಯಿಂದ ಇವುಗಳು ದುಬಾರಿಯಾಗಲಿವೆ. 

   ಪಾನ್ ಮಸಾಲ, ಸಿಗರೇಟ್, ತಂಬಾಕು ಇಂತಹ ವಸ್ತುಗಳ ಮೇಲೆ ಫೆಬ್ರವರಿ 1 ರಿಂದ ಶೇ. 40 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇದರಲ್ಲಿ ಬೀಡಿಗಳಿಗೆ ಶೇ. 18 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಒಳಗೊಂಡಿದೆ. ಇವುಗಳ ಜೊತೆಗೆ ಪಾನ್ ಮಸಾಲದ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದು. ಅಲ್ಲದೆ ತಂಬಾಕು ಸಂಬಂಧಿತ ಉತ್ಪನ್ನಗಳಿಗೆ ಹೆಚ್ಚುವರಿ ಅಬಕಾರಿ ಸುಂಕವನ್ನು ಕೂಡ ವಿಧಿಸಲಾಗುತ್ತದೆ.

   ಈ ಕುರಿತು ಹಣಕಾಸು ಸಚಿವಾಲಯವು ಬುಧವಾರ ಅಧಿಸೂಚನೆಯನ್ನು ಹೊರಡಿಸಿದ್ದು, ಚೂಯಿಂಗ್ ತಂಬಾಕು, ಜರ್ದಾ ಪರಿಮಳಯುಕ್ತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ ನಿಯಮಗಳ ಅನುಸಾರ ಜಿಎಸ್ ಟಿ ವಿಧಿಸಿರುವುದಾಗಿ ಹೇಳಿದೆ. 

   ಕೆಲವು ಉತ್ಪನ್ನಗಳ ಮೇಲೆ ಗರಿಷ್ಠ ಶೇ.40ರಷ್ಟು ಜಿಎಸ್‌ಟಿ ದರ ವಿಧಿಸಲು ಅನುಮೋದಿಸಲಾಗಿದೆ. ತಂಬಾಕು ಉತ್ನನ್ನಗಳಾದ ಪಾನ್ ಮಸಾಲ, ಗುಟ್ಕಾ, ಬೀಡಿ, ಸಿಗರೇಟ್, ಜರ್ದಾದಂತಹ ತಂಬಾಕು ಉತ್ಪನ್ನಗಳು, ಮೇಲಿನ ಜಿಎಸ್‌ಟಿ ಶೇ. 28ರಿಂದ 40ಕ್ಕೆ ಏರಿಕೆ ಮಾಡಲಾಗಿದೆ. ದೈನಂದಿನ ಬಳಕೆಯ ವಸ್ತುಗಳನ್ನು ಈ ಶೇ. 40ರ ತೆರಿಗೆ ಸ್ಲ್ಯಾಬ್‌ನಿಂದ ಹೊರಗಿಡಲಾಗಿದೆ.

   ತಂಬಾಕು ಉತ್ಪನ್ನಗಳ ಮೇಲಿನ ಹೊಸ ಸುಂಕ ಹಾಗೂ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಸಂಸತ್ತು ಕಳೆದ ಡಿಸೆಂಬರ್‌ನಲ್ಲಿ ಅನುಮೋದಿಸಿತ್ತು. ಇದೀಗ ಇದನ್ನು ಫೆಬ್ರವರಿ 1ರಿಂದ ಅನುಷ್ಠಾನಕ್ಕೆ ತರುವುದಾಗಿ ಸರ್ಕಾರ ಪ್ರಕಟಿಸಿದೆ.

Recent Articles

spot_img

Related Stories

Share via
Copy link