ಚೆನ್ನೈ:
ನಟ-ರಾಜಕಾರಣಿ ಮತ್ತು ಮಕ್ಕಳ್ ನೀಧಿ ಮೈಯಮ್ (ಎಂಎನ್‌ಎಂ) ಸ್ಥಾಪಕ ಕಮಲ್ ಹಾಸನ್ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಬಲಗಾಲಿನ ಕಸಿ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
2016ರಲ್ಲಿ ಕಮಲ್ ಹಾಸನ್ ಅವರ ಬಲಗಾಲಿನ ಮೂಳೆ ಮುರಿದಿತ್ತು. ಈ ಸಂದರ್ಭದಲ್ಲಿ ಕಾಲಿಗೆ ಕಸಿ(ಪಟ್ಟು)ಹಾಕಲಾಗಿತ್ತು. ರಾಜಕೀಯ ಮತ್ತು ಚಲನಚಿತ್ರಗಳಲ್ಲಿ ಕಾರ್ಯಬಾಹುಳ್ಯದ ಕಾರಣ, ಕಸಿ ತೆಗೆಯುವ ಚಿಕಿತ್ಸೆಯನ್ನು ಮುಂದೂಡಲಾಗಿತ್ತು. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗುವುದು ಎಂದು ಎಂಎನ್ಎಂ ಉಪಾಧ್ಯಕ್ಷ ಡಾ. ಆರ್ ಮಹೇಂದ್ರನ್ ತಿಳಿಸಿದ್ದಾರೆ.
ವೈದ್ಯರ ಸಲಹೆಯ ಮೇರೆಗೆ ಕಮಲ್ ಹಾಸನ್ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದು, ಇಂದು (ಶುಕ್ರವಾರ) ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಒಂದೆರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಮಹೇಂದ್ರನ್ ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
