ಹಂಪಿ ಧಾರ್ಮಿಕ ಪ್ರವಾಸ ಕ್ಷೇತ್ರವಾಗಿ ಹೊರಹೊಮ್ಮಲು ಬೇಕಾಗುವ ಎಲ್ಲಾ ಅಗತ್ಯತೆಗಳನ್ನು ಎಲ್ಲಾ ಪೂರೈಸುವೆ : ಗಜೇಂದ್ರ ಸಿಂಗ್ ಶಿಕಾವತ್.

 ವಿಜಯನಗರ / ಹೊಸಪೇಟೆ

     ವಿಜಯನಗರ ಸಾಮ್ರಾಜ್ಯವಾಗಿದ್ದ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿಗೆ ಬೇಕಾಗುವಂತಹ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಆದರೆ ರಾಜ್ಯ ಸರ್ಕಾರದ ಸಹಭಾಗಿತ್ವದ ಪಾತ್ರ ಬಹಳ ಮುಖ್ಯವಾಗಿದೆ ಎಂದು ಗಜೇಂದ್ರ ಸಿಂಗ್ ಶಿಖಾವತ್, ರವರು ಹಂಪಿ ಹೆರಿಟೇಜ್ ಹೋಟೆಲ್ ನಲ್ಲಿ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.

    ವಿಜಯನಗರ ಕ್ಷೇತ್ರದ ಶಾಸಕರಾದ ಗವಿಯಪ್ಪನವರು ಏರ್ಪಡಿಸಿದ್ದ ವಿಶೇಷ ಹಂಪಿ ಅಭಿವೃದ್ಧಿ ಕುರಿತಾದ ಪಕ್ಷಿ ನೋಟವನ್ನು ಉದ್ಘಾಟಿಸಿ ಮಾತನಾಡಿದರು.

     ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಸಿದ್ಧ ಆರ್ಕಿಟೆಕ್ಟ್ ಒಂದು ಪಿಪಿಟಿ ಪ್ರೆಸೆಂಟೇಷನನ್ನ ನೀಡಿದರು ಅದನ್ನು ವೀಕ್ಷಿಸಿ ಅತ್ಯಂತ ಹರ್ಷಿತರಾದ ಗಜೇಂದ್ರ ಸಿಂಗ್ ಶಿಖಾವತ್ ಹಂಪಿಯ ಧಾರ್ಮಿಕ ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮದ ಸಂಬಂಧದಲ್ಲಿ ಹಂಪಿಯ ಮೂಲ ಅಸ್ತಿತ್ವವನ್ನು ಉಳಿಸಿಕೊಂಡು ಅಭಿವೃದ್ಧಿ ಕೈಗೊಳ್ಳಬಹುದಾಗಿದೆ, ಈ ಅದ್ಭುತ ಯೋಜನೆಯು ಸಾಕಾರಗೊಳ್ಳಬೇಕಾದಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವವು ಪ್ರಮುಖವಾಗಿದೆ ಎಂದು ತಿಳಿಸಿದರು.

  ಮುಂದುವರೆದು ಮಾತನಾಡಿ ಅವರು ಕೇಂದ್ರ ಸರ್ಕಾರವು ಅಭಿವೃದ್ಧಿಗೆ ಪಣತೊಟ್ಟಿದ್ದು ಈಗಾಗಲೇ ಹಣಕಾಸು ಸಚಿವರು ಸೇರಿದಂತೆ ಅನೇಕರು ಬಂದು ಹೋಗಿದ್ದು ಸಮಗ್ರ ಯೋಜನೆಯನ್ನು ರೂಪಿಸಲು ಕೇಂದ್ರ ಸರ್ಕಾರವು ಸಿದ್ಧವಾಗಿದೆ ಹಂಪಿ ಸ್ವಚ್ಛತೆ ಮತ್ತು ಮೂಲಭೂತ ಅಭಿವೃದ್ಧಿಗೆ ಪೂರಕವಾಗಿರುವಂತಹ ಅಂಶಗಳನ್ನು ಅಳವಡಿಸಿಕೊಂಡು ಹಂಪಿಯ ಸಮಗ್ರತೆಯನ್ನು ಕಲ್ಪಿಸಬೇಕಾದ ಹೊಣೆಗಾರಿಕೆಯನ್ನು ಸ್ಥಳಿಯ ಅಧಿಕಾರಿಗಳಿಗೆ ನೀಡಿದ್ದೇನೆ ಎಂದು ಹೇಳಿದರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಚುನಾಯಿತ ಶಾಸಕರು ಒಳಗೊಂಡಂತೆ ಸಮಿತಿಯನ್ನು ರಚಿಸಿದ್ದು ಆ ಸಮಿತಿಯು ಪೂರ್ವಕವಾದ ಅಂಶವನ್ನು ಪಟ್ಟಿಯನ್ನು ಮಾಡಿ ರಾಜ್ಯ ಸರ್ಕಾರದ ಪ್ರಸ್ತಾವನೆಯೂ ಅನುಮೋದನೆಗೊಂಡಲ್ಲಿ ನೇತೃತ್ವದಲ್ಲಿ ಅಭಿವೃದ್ಧಿಗೆ ಸಹಕಾರಗೊಳ್ಳುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಿದ್ದನಿದ್ದೇನೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ವಿಜಯನಗರ ಕ್ಷೇತ್ರ ಹೊಸಪೇಟೆ ಹಂಪಿ ಕುರಿತಾಗಿ ಬೇಕಾಗುವಂತಹ ಮೂಲಭೂತ ಅವಶ್ಯಕತೆಗಳ ಪೂರ್ವಕ್ಕಾಗಿ ಶಾಸಕರು ಮನವಿ ಪತ್ರ ನೀಡಿದರು, ಮನವಿ ಪತ್ರವನ್ನು ಸ್ವೀಕರಿಸಿ ಎಲ್ಲಾ ಕಾಮಗಾರಿಯನ್ನು ಕೈಗೊಳ್ಳಲು ಸಮಯ ಅವಕಾಶವನ್ನು ಸೂಕ್ತ ಸಮಯದಲ್ಲಿ ಪೂರೈಸ್ತೇನೆ ಎಂದು ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಕವಿತಾ ಮನಿಕೇರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಲಿ ಅಕ್ರಮ್ ಶಾ ಉಪಯುಕ್ತರು ವಿವೇಕಾನಂದ, ತಾಲೂಕು ದಂಡಾಧಿಕಾರಿ ಶ್ರುತಿ ಮಲ್ಲಪ್ಪ ಗೌಡ್ರು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಅಧಿಕಾರಿಗಳು ಸಂಬಂಧಪಟ್ಟಂತ ಅನೇಕ ಹಿರಿಯರು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link