ದ್ವಿತೀಯ ಪಿಯು ಫಲಿತಾಂಶ: 18ಸ್ಥಾನಕ್ಕೇರಿದ ತುಮಕೂರು

ಶೇ.72.08 ಫಲಿತಾಂಶ:  ಜಿಲ್ಲೆಯ ವಾಣಿಜ್ಯ ಟಾಪರ್ ಶ್ರೀ ಲಕ್ಷ್ಮಿ ರಾಜ್ಯಕ್ಕೆ 4ನೇಸ್ಥಾನ 

ತುಮಕೂರು : ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ 20 ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 18 ಸ್ಥಾನಕ್ಕೆ ಜಿಗಿದಿದ್ದು ಶೇ.72.08ರಷ್ಟು. ಫಲಿತಾಂಶ ದಾಖಲಾಗಿದೆ.
ಹೊಸದಾಗಿ ಪರೀಕ್ಷೆ ಬರೆದ 22956 ವಿದ್ಯಾರ್ಥಿಗಳ ಪೈಕಿ 16534 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 14226 ಬಾಲಕಿಯರ ಪೈಕಿ 12054 ಬಾಲಕಿಯರು ಉತ್ತೀರ್ಣರಾಗಿದ್ದು ಶೇ.72.39 ಫಲಿತಾಂಶ ಬಂದಿದೆ. 10,090 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.75.74 ಫಲಿತಾಂಶ ದೊರೆತಿದೆ.
ಕಲಾ ವಿಭಾಗದಲ್ಲಿ 4318 ವಿದ್ಯಾರ್ಥಿಗಳಿಗೆ 2476(ಶೇ.57.34), ವಿಜ್ಞಾನ ವಿಭಾಗದಲ್ಲಿ 10051 ವಿದ್ಯಾರ್ಥಿಗಳಿಗೆ 7784(ಶೇ.77.45), ಹಾಗು ವಾಣಿಜ್ಯ ವಿಭಾಗದಲ್ಲಿ 8587ವಿದ್ಯಾರ್ಥಿಗಳಿಗೆ 6274 ವಿದ್ಯಾರ್ಥಿಗಳು(ಶೇ.73.06)ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ರಾಜ್ಯಕ್ಕೆ 4ನೇಸ್ಥಾನ: ವಾಣಿಜ್ಯ ವಿಭಾಗದಲ್ಲಿ 596 ಅಂಕಗಳೊAದಿಗೆ ಜಿಲ್ಲೆಗೆ ಟಾಪರ್ ಆಗಿರುವ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಶ್ರೀ ಲಕ್ಷಿ÷್ಮ ಆರ್ 596 ಅಂಕಗಳನ್ನು ಪಡೆದು ರಾಜ್ಯಕ್ಕೆ 4 ನೇ ಸ್ಥಾನ ಗಳಿಸಿದ್ದಾರೆ. ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿನಿ ಸಾಧನೆಯನ್ನು ಡಿಸಿ ಶುಭಕಲ್ಯಾಣ್, ಸಿಇಓ ಜಿ.ಪ್ರಭು, ಪಿಯು ಉಪನಿರ್ದೇಶಕ ಬಾಲಗುರುಮೂರ್ತಿ, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್ ಹಾಗೂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಬಿ.ಜಯಣ್ಣ ಅಭಿನಂದಿಸಿದ್ದಾರೆ. ಇದೇ ಕಾಲೇಜಿನ ಎಸ್ ಎನ್ ಲಕ್ಷಿ÷್ಮ 593 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದರೆ, , ಇದೇ ಕಾಲೇಜಿನ ಎಚ್ ಎನ್ ಭುವನ್ ಹಾಗೂ ಜಮುನಾ ಎಸ್ ಜೆ 592ಅಂಕಗಳನ್ನು ಪಡೆದು ತೃತೀಯ ಸ್ಥಾನ ಹಂಚಿಕೊAಡಿದ್ದಾರೆ.
ಕಲಾ ವಿಭಾಗದಲ್ಲಿ: ತುಮಕೂರು ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅದಿತಿ ಎಚ್ 584 ಅಂಕಗಳು ಪ್ರಥಮ ಸ್ಥಾನ, ತಿಪಟೂರು ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಗಣೇಶ್ 580 ಅಂಕಗಳು ದ್ವಿತೀಯ ಸ್ಥಾನ, ಹಾಗೂ ಇದೇ ಕಾಲೇಜಿನ ಚೇತನ್ ಬಿ ಆರ್ 579 ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ : ಚಿಕ್ಕನಾಯಕನಹಳ್ಳಿ ವಿದ್ಯಾ ವಾರಿಧಿ ಪದವಿ ಪೂರ್ವ ಕಾಲೇಜಿನ ಆದಿತ್ಯ ಎಚ್ ಎಸ್ 594 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದು, ಶಾರದಾಂಬ ಪದವಿ ಪೂರ್ವ ಕಾಲೇಜಿನ ಕೀರ್ತನಾ ಎಂ ಎಸ್ ಹಾಗು ವಿಧ್ಯಾನಿಧಿ ಕಾಲೇಜಿನ ಶಿವಾನಿ ಎಸ್ ರೈ 593 ಅಂಕಗಳನ್ನು ಪಡೆದ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೂ ತಿಪಟೂರಿನ ಎಸ್ ಎಸ್ ಪದವಿ ಪೂರ್ವ ಕಾಲೇಜಿನ ಹರ್ ಪ್ರೀತ್. ಏ ಹಾಗು ವಿಧ್ಯಾನಿಧಿ ಕಾಲೇಜಿನ ನಿತೀಶ್ ಕೆ. ಪಿ 591 ಅಂಕಗಳನ್ನು ಪಡೆದು ತೃತೀಯ ಸ್ಥಾನ ಹಂಚಿಕೊAಡಿದ್ದಾರೆ.
ಇನ್ನೂ ಖಾಸಗಿಯಾಗಿ ಪರೀಕ್ಷೆ ಬರೆದ 297 ವಿದ್ಯಾರ್ಥಿಗಳ ಪೈಕಿ 96 ವಿದ್ಯಾರ್ಥಿಗಳು(ಶೇ.32.32) ಉತ್ತೀರ್ಣರಾಗಿದ್ದು, 1063 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 139 ವಿದ್ಯಾರ್ಥಿಗಳು ತೇರ್ಗಡೆಗೊಂದಿದ್ದು, ಶೇ.13.08 ಫಲಿತಾಂಶ ದೊರೆತಿದೆ.
ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಶೇ.75.24 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದರೆ, ಕನ್ನಡ ಮಾಧ್ಯಮದಲ್ಲಿ ಶೇ.56.84 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಪ್ರವರ್ಗವಾರು ಶೇಕಡವಾರು ಫಲಿತಾಂಶ

  • ಸಾಮಾನ್ಯ ವರ್ಗದ ವಿದ್ಯಾರ್ಥಿಗಳು: ಶೇ.83.31
  • ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು: ಶೇ.57.33
  • ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು: ಶೇ.61.85
  • ಪ್ರವರ್ಗ 1ರ ವಿದ್ಯಾರ್ಥಿಗಳು: ಶೇ.65.61
  • ಪ್ರವರ್ಗ 2ಎ ವಿದ್ಯಾರ್ಥಿಗಳು: ಶೇ.71.93
  • ಪ್ರವರ್ಗ 2ಬಿ ವಿದ್ಯಾರ್ಥಿಗಳು: ಶೇ.65.36
  • ಪ್ರವರ್ಗ 3ಎ ವಿದ್ಯಾರ್ಥಿಗಳು: ಶೇ.76.71
  • ಪ್ರವರ್ಗ 3 ಬಿ ವಿದ್ಯಾರ್ಥಿಗಳು ಶೇ.76.98

ನಗರ ಫಲಿತಾಂಶವೇ ಅಧಿಕ 

ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಪೈಕಿ, ಪರೀಕ್ಷೆಗೆ ಹಾಜರಾದ 18174 ನಗರ ವಿದ್ಯಾರ್ಥಿಗಳ ಪೈಕಿ 13204 ವಿದ್ಯಾರ್ಥಿಗಳು ಉತ್ತೀರ್ಣರಾಗಿ 72.65 ಪ್ರತಿಶತ ಫಲಿತಾಂಶ ಬಂದಿದೆ. ಇದೇ ರೀತಿ ಗ್ರಾಮೀಣ ಭಾಗದ 4782 ವಿದ್ಯಾರ್ಥಿಗಳ ಪೈಕಿ 3330 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.69.64 ರಷ್ಟು ಫಲಿತಾಂಶ ಬಂದಿರುವುದು ಗಮನಸೆಳೆದಿದೆ.

ಜಿಲ್ಲೆಯಲ್ಲಿ ಪ್ರಾಂಶುಪಾಲರು, ಉಪನ್ಯಾಸಕರ ಶ್ರಮ ಹಾಗೂ ಇಲಾಖೆಯ ಕಾರ್ಯವೈಖರಿಯಿಂದ ಈ ವರ್ಷ ಉತ್ತಮ ಫಲಿತಾಂಶ ಬರಲು ಸಾಧ್ಯವಾಗಿದೆ. ಫೆಬ್ರವರಿಯಲ್ಲಿ ಇಂಗ್ಲೀಷ್ ಭಾಷೆಯ ಕ್ಲಿಸ್ಟತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಸು.6 ಶನಿವಾರ ವಿಶೇಷ ಉಪನ್ಯಾಸಕರು ಒಳಗೊಂಡAತೆ ಜಿಲ್ಲೆಯಾದ್ಯಂತ ನೋಡಲ್ ಕೇಂದ್ರಗಳಲ್ಲಿ ವಿಶೇಷ ಉಪನ್ಯಾಸ ನಡೆದವು. ಉನ್ನತ ಶ್ರೇಣಿಯ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ ನಡೆಸಿದ್ದು ಜಿಲ್ಲೆ ರಾಜ್ಯವಾರು ಕ್ರಮಾಂಕದಲ್ಲಿ ಏರಿಕೆಯಾಗಿರುವುದು ಫಲಿತಾಂಶ ತೃಪ್ತಿದಾಯಕವಾಗಿದೆ.

-ಬಾಲಗುರುಮೂರ್ತಿ ಪಿಯು ಉಪನಿರ್ದೇಶಕ.

Recent Articles

spot_img

Related Stories

Share via
Copy link