
ಸಾ.ಚಿ. ರಾಜಕುಮಾರ
ತುಮಕೂರು: ತುಮಕೂರು ಹೊರವಲಯ ಬಟವಾಡಿಯಿಂದ ಶಿರಾ ಮಾರ್ಗದ ಕಡೆಗೆ ಹೋಗುವ ರಾಷ್ಟಿಯ ಹೆದ್ದಾರಿ 48ರ ಸರ್ವೀಸ್ ರಸ್ತೆಗಳು ಇನ್ನೂ ಅಪೂರ್ಣವಾಗಿಯೇ ತೆವಳುತ್ತಿವೆ.
ತುಮಕೂರು ನಗರ ಈಗ ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿದೆ. ಆದರೆ ಅದಕ್ಕೆ ತಕ್ಕಂತಹ ವಾತಾವರಣ ಎಲ್ಲ ಕಡೆ ನಿರ್ಮಾಣವಾಗಬೇಕು. ಒಂದು ರಾಷ್ಟಿಯ ಹೆದ್ದಾರಿ ಸ್ಮಾರ್ಟ್ ಸಿಟಿಯ ಪಕ್ಕದಲ್ಲೇ ಹಾದು ಹೋದರೂ ವ್ಯವಸ್ಥಿತ ಸರ್ವೀಸ್ ರಸ್ತೆ ಇಲ್ಲದೆ ಸೊರಗುತ್ತಿರುವ ಧಾರುಣ ದೃಶ್ಯಗಳು ಈ ರಸ್ತೆಯಲ್ಲಿ ತೆರಳುವವರಿಗೆ ಅನಾವರಣಗೊಳ್ಳುತ್ತವೆ.
ಟೋಲ್ ಪ್ಲಾಜಾಗಳು ನಿರ್ಮಾಣಗೊಂಡ ನಂತರ ರಾಷ್ಟಿಯ ಹೆದ್ದಾರಿ ಮತ್ತು ಅದಕ್ಕೆ ಹೊಂದಿಕೊಡ ಸರ್ವೀಸ್ ರಸ್ತೆಗಳೂ ಸಹ ಸುವ್ಯವಸ್ಥಿತ ರೀತಿಯಲ್ಲಿಯೇ ಇರಬೇಕು. ಇದು ಹೆದ್ದಾರಿ ಪ್ರಾಧಿಕಾರದ ನಿಯಮ ಕೂಡ. ಆದರೆ ತುಮಕೂರು ಊಲಕ ಹಾದು ಹೋಗುವ ಹೆದ್ದಾರಿ ರಸ್ತೆಗಳು ಮತ್ತು ಸರ್ವೀಸ್ ರಸ್ತೆಗಳ ಸ್ಥಿತಿ ನೋಡಿದರೆ ನಿಯಮಗಳ ಉಲ್ಲಂಘನೆ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಂದ ಹಣ ಪೀಕುವುದಷ್ಟೇ ಕೆಲಸವಾಗಿದ್ದು, ರಸ್ತೆ ಅಭಿವೃದ್ಧಿ ಹಾಗೂ ವಾಹನ ಸಂಚಾರರಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಮರೀಚಿಕೆಯಾಗಿದೆ.

2024ರ ಅವಧಿಯಲ್ಲಿ ಶಿರಾ ರಸ್ತೆ ಎಸ್.ಮಾಲ್ ಬಳಿ ಅಮಾನಿಕೆರೆ ಕೋಡಿಯ ಸಮೀಪ ಸೇತುವೆ ದುರಸ್ತಿ ಕಾರಣದಿಂದ ಶಿರಾ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಾಹನಗಳು ಸತ್ಯಮಂಗಲ ಬೈಪಾಸ್ -ಹನುಮಂತಪುರ ಮಾರ್ಗವಾಗಿ ಸಂಚರಿಸಿದವು ವಾಹನಗಳ ದಟ್ಟಣೆಯಿಂದಾಗಿ ಈ ಮಾರ್ಗ ಮತ್ತಷ್ಟು ಅದ್ವಾನಗೊಂಡಿತು. ಮಳೆಗಾಲದಲ್ಲಿ ಸರ್ವೀಸ್ ರಸ್ತೆಗಳಲ್ಲಿ ನೀರು ತುಂಬಿ ವಾಹನಗಳ ಓಡಾಟಕ್ಕೂ ತೊಂದರೆ ಉಂಟಾಗಿತ್ತು. ಶಿರಾ ರಸ್ತೆ ಸಂಚಾರಕ್ಕೆ ಮುಕ್ತವಾದ ನಂತರ ಸತ್ಯಮಂಗಲ ಬೈಪಾಸ್ ರಸ್ತೆಯನ್ನು ಅಭಿವೃದ್ಧಿಪಡಿಸುವ ಬೆಳವಣಿಗೆಗಳು ಕಂಡುಬAದವಾದರೂ ಈತನಕ ಈ ರಸ್ತೆಗಳಿಗೆ ಮುಕ್ತಿ ಸಿಕ್ಕಿಲ್ಲ.
ಅಂತರಸನಹಳ್ಳಿ ಸೇತುವೆಯಿಂದ ಬಟವಾಡಿಯ ತನಕ ಹೆದ್ದಾರಿಯ ಎರಡೂ ಸರ್ವೀಸ್ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಅಂತರಸನಹಳ್ಳಿ ಸೇತುವೆಯ ಕೆಳಗೆ ಯಾವಾಗಲೂ ಕೊಳಚೆ ನೀರು ಹರಿಯುತ್ತಿರುತ್ತದೆ. ಇಲ್ಲಿ ಆಗಾಗ್ಗೆ ದುರ್ನಾತ ಬರುತ್ತದೆ. ಬಲಭಾಗದಲ್ಲಿ ಸ್ವಲ್ಪ ಮುಂದೆ ಬಂದರೆ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆ ದುರಸ್ತಿಗಾಗಿ ಆ ಭಾಗ ಬಂದ್ ಆಗಿದೆ. ತಿಂಗಳುಗಳು ಉರುಳಿದರೂ ರಸ್ತೆ ಕಾಮಗಾರಿ ಮುಗಿದಿಲ್ಲ. ಎಡಭಾಗದ ಸರ್ವೀಸ್ ರಸ್ತೆಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ.
ಸತ್ಯಮಂಗಲ ಸೇತುವೆ ಕೆಳಗೆ ಮಳೆಬಂದಾಗ ನೀರು ನಿಲ್ಲುತ್ತದೆ. ಈ ಭಾಗ ಗುಂಡಿಗೊಟರುಗಳಿದ ಕೂಡಿದೆ. ಸರ್ವೀಸ್ ರಸ್ತೆ ಕಾಮಗಾರಿಗಾಗಿ ರಸ್ತೆ ಅಗೆದು ಮೂರು ತಿಂಗಳ ಮೇಲಾಗಿದೆ. ರಸ್ತೆಯ ಮೇಲೆ ಜಲ್ಲಿ ಕಲ್ಲುಗಳು ವಾಹನಗಳಿಗೆ ಬಡಿದು ಸಂಚಾರವೇ ಇಲ್ಲಿ ದುಸ್ತರವಾಗಿದೆ. ಅಗ್ನಿಬನ್ನಿರಾಯ ನಗರದತ್ತ ಹೋಗುವ ಮಾರ್ಗದಲ್ಲಿ ಹೆದ್ದಾರಿಯಿಂದ ಸರ್ವೀಸ್ ರಸ್ತೆ ಸಂಪರ್ಕಿಸುವ ಒಂದು ಸಣ್ಣ ದಾರಿ ಇದ್ದು, ಮುಖ್ಯ ರಸ್ತೆಯಲ್ಲಿಯೇ ಬರುವ ವಾಹನಗಳು ಇಲ್ಲಿ ಸ್ವಲ್ಪ ಎಡವಟ್ಟಾದರೂ ಅಪಘಾತ ತಪ್ಪದು.

ಸಿಟ್ರಿಯಾ ಹೋಟೆಲ್ ಮುಂಭಾಗದ ರಸ್ತೆಗಳಂತೂ ಸದಾ ಅಪಾಯದ ಎಚ್ಚರಿಕೆಯನ್ನೇ ನೀಡುತ್ತಿವೆ. ಹೋಟೆಲ್ ಮುಂಭಾಗದ ಸರ್ವೀಸ್ ರಸ್ತೆ ಬಳಿ ವಾಹನ ರಿಪೇರಿ ಶಾಪ್ ಮತ್ತಿತರ ಅಂಗಡಿಗಳಿವೆ. ಬಟವಾಡಿ ಕಡೆಯಿಂದ ಬರುವ ವಾಹನಗಳು ಇಲ್ಲಿ ನಿಧಾನವಾಗಿ ಚಲಿಸಬೇಕು. ಸರ್ವೀಸ್ ರಸ್ತೆಗೆ ತಿರುಗುವಾಗ ಇಲ್ಲಿ ಪದೆ ಪದೆ ಅಪಘಾತಗಳು ಸಂಭವಿಸುತ್ತವೆ. ಕಳೆದ ನಾಲ್ಕು ದಿನಗಳ ಹಿಂದೆ ಕಾರೊಂದು ತಿರುವಿನಲ್ಲಿ ಚಾಲನೆ ನಿಯಂತ್ರಣ ತಪ್ಪಿ ಕಾಮಗಾರಿ ಸ್ಥಳದ ಗುಂಡಿಯೊಳಗೆ ಬಿದ್ದಿದೆ. ಅದೃಷ್ಟವಶಾತ್ ಅದರೊಳಗೆ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಸಿಟ್ರಿಯಾ ಹೋಟೆಲ್‌ಗೆ ಹೊಂದಿಕೊAಡಿರುವ ಮುಖ್ಯ ರಸ್ತೆ ಮತ್ತು ಸರ್ವೀಸ್ ರಸ್ತೆ ಎರಡರಲ್ಲೂ ಅಪಘಾತಗಳು ಸಂಭವಿಸುತ್ತಲೇ ಇವೆ. ಕಳೆದ ವರ್ಷ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟ. ಹೊರರಾಜ್ಯದ ಈ ವ್ಯಕ್ತಿ ಸ್ಥಳೀಯ ಸಾಮಿಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಟೊಮೆಟೋ ತುಂಬಿದ ಗೂಡ್ಸ್ ವಾಹನವೊಂದು ಇದೇ ರಸ್ತೆಯಲ್ಲಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಟೊಮೆಟೋ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೆ.ಎಸ್.ಆರ್.ಟಿ.ಸಿ. ವಾಹನವೂ ಇಲ್ಲಿ ಅಪಘಾತಕ್ಕೆ ಒಳಗಾಗಿತ್ತು. ಸತ್ಯಮಂಗಲ ಸೇತುವೆಯಿಂದ ಎಡಭಾಗದ ಸರ್ವೀಸ್ ರಸ್ತೆಯಲ್ಲಿ ಬರುವಾಗ ನಾಲ್ಕೆöÊದು ಕಡೆಗಳಲ್ಲಿ ಹೆದ್ದಾರಿ ಸಂಪರ್ಕಿಸುವ ರಸ್ತೆಗಳು ಸಿಗುತ್ತವೆ. ಈ ಸರ್ವೀಸ್ ರಸ್ತೆಗಳು ಅಲ್ಲಲ್ಲೇ ಕಾಮಗಾರಿ ನಡೆದು ಅರ್ಧಕ್ಕೆ ಸ್ಥಗಿತಗೊಂಡಿವೆ. ಒಂದೆರಡು ಕಡೆ ನೀರು ಹರಿಯುವ ಹಳ್ಳ ಇದ್ದು, ಈ ಸೇತುವೆ ಒಳಗೊಂಡAತೆ ಸರ್ವೀಸ್ ರಸ್ತೆ ನಿರ್ಮಾಣವಾಗಬೇಕು. ಆದರೆ, ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳು, ಸವಾರರು ಜೀವ ಭಯದಲ್ಲಿಯೇ ಓಡಾಡಬೇಕು.
ಸಂಚಾರ ಉಲ್ಲಂಘನೆ: ವಾಹನಗಳ ಮುಖಾಮುಖಿ
ಹನುಮಂತಪುರ ಸೇತುವೆ ಬಳಿಯಿಂದ ಎಡಭಾಗಕ್ಕೆ ತಿರುಗಿದರೆ ರಸ್ತೆ ಕಾಮಗಾರಿ ಹಲವು ತಿಂಗಳಿನಿAದ ಅಪೂರ್ಣಗೊಂಡಿದೆ. ಈಭಾಗದ ರಸ್ತೆಯಲ್ಲಿ ಚಲಿಸಿಬರುವ ವಾಹನಗಳು ಸ್ವಲ್ಪ ಮುಂದೆ ಸಾಗಿದರೆ ಹೆದ್ದಾರಿ ಸಂಪರ್ಕ ಪಡೆಯುತ್ತವೆ. ಆದರೆ ಹೀಗೆ ರಭಸವಾಗಿ ಬರುವ ವಾಹನಗಳ ಎದುರಿಗೆ ದ್ವಿಚಕ್ರ ವಾಹನಗಳೂ ಸೇರಿದಂತೆ ನಾಲ್ಕು ಚಕ್ರದ ವಾಹನಗಳು ಎದುರಿಗೆ ಅಡ್ಡ ಬರುತ್ತವೆ. ಇದೇ ಪರಿಸ್ಥಿತಿ ಬಲಭಾಗದ ಸರ್ವೀಸ್ ರಸ್ತೆಯಲ್ಲೂ ಇದೆ. ಹೆದ್ದಾರಿ ರಸ್ತೆಯಾಗಿರುವುದರಿಂದ ವಾಹನಗಳ ರಭಸದ ಓಡಾಟ ಇಲ್ಲಿ ಅಧಿಕವಾಗಿದ್ದು, ಸಂಚಾರದಲ್ಲಿ –ಚಾಲನೆಯಲ್ಲಿ ಸ್ವಲ್ಪ ನಿಯಂತ್ರಣ ತಪ್ಪಿದರೂ ಅಪಘಾತಗಳ ಸರಮಾಲೆಯೇ ಉಂಟಾಗುತ್ತದೆ. ಎದುರು -ಬದರು ಬರುವ ವಾಹನಗಳ ನಿಯಂತ್ರಣವೂ ಅಷ್ಟೇ ಮುಖ್ಯ.








