ನನ್ನ ಹಾಗೂ ಜಮೀರ್ ಮಧ್ಯೆ ಯಾವ ಗಲಾಟೆ ನಡೆದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ನವದೆಹಲಿ: “ನನ್ನ ಹಾಗೂ ಜಮೀರ್ ಮಧ್ಯೆ ಯಾವ ಗಲಾಟೆ ನಡೆದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದರು.

ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಸಚಿವ ಜಮೀರ್ ಅಹ್ಮದ್ ಅವರು ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹರಿದಾಡುತ್ತಿದೆ, ಸಚಿವ ಸಂಪುಟ ಸಭೆಯಲ್ಲಿ ನಿಮ್ಮ ಮಧ್ಯೆ ಗಲಾಟೆ ನಡೆದಿದೆಯೇ ಎಂದು ಕೇಳಿದಾಗ, “ಈ ವಿಚಾರವಾಗಿ ಪತ್ರಿಕೆಗಳಲ್ಲಿ ಬರೆಯಲಾಗಿದೆ. ಅದು ಸುಳ್ಳು. ಪಾಪ, ಜಮೀರ್ ನನ್ನ ಜತೆ ಮಾತನಾಡಿಲ್ಲ, ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗಿಲ್ಲ. ನನ್ನ ಕುಟುಂಬದ ಕೆಲಸದ ಹಿನ್ನೆಲೆಯಲ್ಲಿ ಸಂಪುಟ ಸಭೆ ಮುಗಿಸಿಕೊಂಡು ನಾನು ಹೋದೆ. ಅದರ ಹೊರತಾಗಿ ಬೇರೆ ಯಾವ ವಿಚಾರವೂ ಇಲ್ಲ. ಹೈಕಮಾಂಡ್ ಯಾವ ತೀರ್ಮಾನ ನೀಡಿರುತ್ತದೋ ಅದರಂತೆ ಸಿಎಂ ಹಾಗೂ ಪಕ್ಷ ನಿರ್ಧಾರ ಕೈಗೊಂಡಿದೆ” ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ರಕ್ಷಣೆ, ನೆರವು ನೀಡುತ್ತಾ ಬಂದಿದೆ

ಅಲ್ಪಸಂಖ್ಯಾತ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೇಳಿದಾಗ, “ಪ್ರತಿ ಸಂದರ್ಭದಲ್ಲಿ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷದಷ್ಟು ಬೇರೆ ಯಾರೂ ರಕ್ಷಣೆ ಮಾಡಿಲ್ಲ. ಹಿಂದೆಯೂ ಬೇರೆಯವರು ಮಾಡಿಲ್ಲ, ಮುಂದೆಯೂ ಮಾಡಲು ಆಗುವುದಿಲ್ಲ. ಆ ಕ್ಷೇತ್ರದಲ್ಲಿ ಅವರ ಜನಸಂಖ್ಯೆ ಹೆಚ್ಚಾಗಿದೆ ನಿಜ. ಆದರೆ ಕಳೆದ 30-40 ವರ್ಷಗಳಿಂದ ಶಾಮನೂರು ಶಿವಶಂಕರಪ್ಪನವರು ಆ ಕ್ಷೇತ್ರವನ್ನು ಕಾಪಾಡಿಕೊಂಡು ಬಂದಿದ್ದಾರೆ. ಜಮೀರ್, ನಸೀರ್ ಹಾಗೂ ಜಬ್ಬಾರ್ ಅವರ ಒಪ್ಪಿದ ನಂತರವೇ ನಾವು ಟಿಕೆಟ್ ನೀಡಿದ್ದೇವೆ” ಎಂದು ತಿಳಿಸಿದರು.

ಫಲಿತಾಂಶ ಬರುವ ಮುಂಚೆಯೇ ಯಾಕೆ ಆತುರದ ಕ್ರಮ ಎಂದು ಕೇಳಿದಾಗ, “ಕೆಲವು ವರದಿಗಳ ಆಧಾರದ ಮೇಲೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡಿದ್ದಾರೆ” ಎಂದು ತಿಳಿಸಿದರು.

Recent Articles

spot_img

Related Stories

Share via
Copy link