ಎನ್‌ಡಿಎಗೆ ಕರಾಳ ದಿನ : ಪ್ರಿಯಾಂಕ ಗಾಂಧಿ ಮಹಿಳಾ ಮೀಸಲು ಹೆಸರಲ್ಲಿ ಅಧಿಕಾರ ಹಿಡಿಯುವ ಸಂಚು ವಿಫಲ: ಕಾಂಗ್ರೆಸ್ ಆರೋಪ

 


ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಸೋಲು ಕಂಡ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಎನ್‌ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವದ ದೊಡ್ಡ ಗೆಲುವು, ಎನ್‌ಡಿಎಗೆ ಕರಾಳ ದಿನ ಎಂದು ಅವರು ಕಿಡಿಕಾರಿದ್ದಾರೆ.
ದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಶುಕ್ರವಾರ ನಡೆದದ್ದು ಪ್ರಜಾಪ್ರಭುತ್ವದ ಗೆಲುವು. ಇದು ಪ್ರತಿಪಕ್ಷಗಳ ಏಕತೆಯ ಫಲಿತಾಂಶ ಎಂದು ಹೇಳಿದರು. ಕೇಂದ್ರದ ಆಡಳಿತ ಪಕ್ಷವು ಅಧಿಕಾರದಲ್ಲೇ ಉಳಿಯಲು ಸಂಚು ರೂಪಿಸಿತ್ತು ಎಂದು ಆರೋಪಿಸಿದ ಅವರು, ಶಾಶ್ವತವಾಗಿ ಅಧಿಕಾರದಲ್ಲಿರಲು ದೊಡ್ಡ ಮಟ್ಟದ ಯೋಜನೆ ರೂಪಿಸಲಾಗಿತ್ತು ಎಂದು ಆರೋಪಿಸಿದರು.
ಮಹಿಳಾ ಮೀಸಲು ವಿಚಾರವು ಕೇವಲ ಮಹಿಳೆಯರ ಹಕ್ಕಿನ ವಿಷಯವಲ್ಲ, ಆಡಳಿತದ ಏಕಪಕ್ಷೀಯ ನಡೆಗೆ ಅವಕಾಶ ಕಲ್ಪಿಸುವ ಪ್ರಯತ್ನವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಮಸೂದೆ ಅಂಗೀಕರಿಸಿದರೂ ಜಯ, ಆಗದಿದ್ದರೂ ಜಯ ಎಂಬ ಲೆಕ್ಕಾಚಾರ ಆಡಳಿತ ಪಕ್ಷಕ್ಕಿತ್ತು. ಆದರೆ ಅದು ಸುಲಭವಲ್ಲ ಎಂದು ಟೀಕಿಸಿದರು.
ಎನ್‌ಡಿಎಗೆ ಇದು ದೊಡ್ಡ ಹೊಡೆತವಾಗಿದ್ದು, ಆಡಳಿತದಲ್ಲಿರುವವರ ಮುಖದಲ್ಲೇ ಅದರ ಪರಿಣಾಮ ಕಂಡುಬರುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಇದು ಸಂವಿಧಾನದ ಗೆಲುವು ಹಾಗೂ ಪ್ರತಿಪಕ್ಷಗಳ ಏಕತೆಯ ಪ್ರತೀಕ? ಎಂದು ಬಣ್ಣಿಸಿದರು.
ಪ್ರತಿಪಕ್ಷಗಳು ಮಹಿಳಾ ಮೀಸಲಾತಿಗೆ ವಿರೋಧಿಯಲ್ಲ, ಆದರೆ ಸರ್ಕಾರದ ಉದ್ದೇಶವೇ ಅನುಮಾನಾಸ್ಪದ ಎಂದು ಅವರು ಹೇಳಿದರು. ಇದು ಮಹಿಳಾ ಮೀಸಲಾತಿ ಬಗ್ಗೆ ಅಲ್ಲ ಎಂಬುದು ಈಗ ಸ್ಪಷ್ಟವಾಗಿದೆ? ಎಂದು ಹೇಳಿದರು.
ಹಿಂದಿನ ಘಟನೆಗಳನ್ನು ಉಲ್ಲೇಖಿಸಿದ ಅವರು, ಉನ್ನಾವೋ, ಹತ್ರಾಸ್ ಪ್ರಕರಣಗಳು, ಮಣಿಪುರದಲ್ಲಿ ಮಹಿಳೆಯರ ಬಗ್ಗೆ ಯಾರು ಮಾತನಾಡಿದರು ಎಂದು ಪ್ರಶ್ನಿಸಿದರು.
ಸರ್ಕಾರವು ೨೦೨೩ರ ಮಸೂದೆಯನ್ನು ಮತ್ತೆ ತರಬೇಕೆಂದು ಆಗ್ರಹಿಸಿದ ಅವರು, ನಿಜವಾಗಿಯೂ ಮಹಿಳೆಯರಿಗಾಗಿ ಕೆಲಸ ಮಾಡಬೇಕೆಂದರೆ ೨೦೨೩ರ ಮಸೂದೆಯನ್ನು ಮತ್ತೆ ತರುವುದು. ಅದಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಪ್ರತಿಪಕ್ಷಗಳ ಏಕತೆ ಮುಂದುವರಿದರೆ ಸರ್ಕಾರದ ವಿರುದ್ಧ ಮತ್ತಷ್ಟು ಬಲಿಷ್ಠ ಹೋರಾಟ ಸಾಧ್ಯವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಹಿಳೆಯರಿಗೆ ೧೮೦ ಸ್ಥಾನ ನೀಡಲು ವಿಪಕ್ಷ ಆಗ್ರಹ

ಕೇಂದ್ರ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು ಕಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮಹಿಳಾ ಮೀಸಲಾತಿ ತರುವ ನಿಜವಾದ ಕಾಳಜಿ ಇದ್ದರೆ ಹಾಲಿ ಇರುವ ೫೪೩ ಸ್ಥಾನಗಳ ಪೈಕಿ ೧೮೦ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಿ ಎಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.
ಲೋಕಸಭಾ ಸ್ಥಾನಗಳಲ್ಲಿ ೮೧೫ಕ್ಕೆ ಹೆಚ್ಚಿಸಿ ಆ ಬಳಿಕ ಮಹಿಳಾ ಮೀಸಲಾತಿಯನ್ನು ಶೇಕಡಾ ೩೩ ರಷ್ಟು ನೀಡುವ ಬದಲು ಹೀಗಿರುವ ಲೋಕಸಭಾ ಸಂಖ್ಯೆಯಲ್ಲಿ ಮಹಿಳಾ ಮೀಸಲಾತಿ ನೀಡಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಾರಿಗೆ ತನ್ನಿ ಎಂದು ವಿರೋಧ ಪಕ್ಷಗಳ ಹಲವು ಸದಸ್ಯರು ಆಗ್ರಹಿಸಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ನಾರಿಶಕ್ತಿ ವಂದನ್ ಅಧಿನಿಯಮ ಮೂರನೇ ಎರಡಷ್ಟು ಬಹುಮತ ಪಡೆಯಲು ಸಾಧ್ಯವಾಗದೆ ಸೋಲು ಕಂಡಿದೆ, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮೊದಲ ಸೋಲಾಗಿದೆ.
ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ೨೯೮ ಸದಸ್ಯರು ಅದರ ಪರವಾಗಿ ಮತ ಚಲಾಯಿಸಿದರೆ, ೨೩೦ ಸಂಸದರು ಅದರ ವಿರುದ್ಧ ಮತ ಚಲಾಯಿಸಿದರು. ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮೊದಲ ಬಾರಿಗೆ ವಿಫಲವಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊAಡಿರುವ ಶಿವಸೇನೆಯ ಮಾಜಿ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ೨೦೨೯ ರಲ್ಲಿ ನಡೆಯಲಿರುವ ಮುಂದಿನ ಸಾರ್ವತ್ರಿಕ ಚುನಾವಣೆಗೆ ಲೋಕಸಭೆಯಲ್ಲಿನ ಪ್ರಸ್ತುತ ೫೪೩ ಸ್ಥಾನಗಳಲ್ಲಿ ೧೮೦ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ.
ಹಾಲಿ ಇರುವ ೫೪೩ ರಲ್ಲಿ ೧೮೦ ಸ್ಥಾನಗಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಿದ್ಟು ಚುನಾವಣೆ ನಡೆಸಿ ಎಂದು ಸವಾಲು ಹಾಕಿದ್ದಾರೆ. ೧೦೬ ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಹಾಲಿ ಲೋಕಸಭಾ ಸ್ಥಾನಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತನ್ನಿ ಎಂದು ಆಗ್ರಹಿಸಿದ್ದಾರೆ.

Recent Articles

spot_img

Related Stories

Share via
Copy link