ಎಸ್‌ಎಸ್‌ಎಲ್‌ಸಿ ಫಲಿತಾಂಶ ಕೆಎಸ್‌ಇಇಬಿ ಅಧಿಕೃತ ಮಾಹಿತಿ : ಮಧ್ಯಾಹ್ನ 12 ಕ್ಕೆ ಅಂಕಪಟ್ಟಿ ಲಭ್ಯ

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1 ರ ಫಲಿತಾಂಶ ಗುರುವಾರ (ಏಪ್ರಿಲ್ 23) ಪ್ರಕಟವಾಗಲಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಕುರಿತು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಏಪ್ರಿಲ್ 23ರ ಮಧ್ಯಾಹ್ನ 12.00 ಗಂಟೆಗೆ ಸರಿಯಾಗಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಸಂಬAಧಪಟ್ಟ ಶಾಲೆಗಳಿಗೂ ಸಹ ಇದೇ ಸಮಯದಲ್ಲಿ ಫಲಿತಾಂಶದ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು.

ಫಲಿತಾಂಶ ಚೆಕ್ ಮಾಡುವುದು ಹೇಗೆ? : ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಈ ಕೆಳಗಿನ ವಿಧಾನಗಳ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಅಧಿಕೃತ ವೆಬ್‌ಸೈಟ್:https://karresults.nic.in ಲಿಂಕ್‌ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದು.
ಮೊಬೈಲ್ ಆಪ್: ‘KarnatakaOne Mobile App’ ಮೂಲಕವೂ ರಿಸಲ್ಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ವಾಟ್ಸಾಪ್ ಸಂದೇಶ : ವಿದ್ಯಾರ್ಥಿಗಳು ಮಂಡಳಿಯಲ್ಲಿ ನೋಂದಾಯಿಸಿರುವ ತಮ್ಮ ಮೊಬೈಲ್ ಸಂಖ್ಯೆಗೆ ನೇರವಾಗಿ ವಾಟ್ಸಾಪ್ ಮತ್ತು ಎಸ್.ಎಂ.ಎಸ್ ಮೂಲಕ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗುವುದು.

ಈ ವರ್ಷದ ವಿಶೇಷತೆ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ! : ಈ ವರ್ಷ ಮಂಡಳಿಯು ಪ್ರಥಮ ಬಾರಿಗೆ ವಿಶೇಷ ಹೆಜ್ಜೆಯೊಂದನ್ನು ಇಟ್ಟಿದ್ದು, ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಯನ್ನು ಫಲಿತಾಂಶ ಪ್ರಕಟವಾದ ತಕ್ಷಣವೇ ‘ಡಿಜಿಲಾಕರ್’ನಲ್ಲಿ ಲಭ್ಯವಾಗುವಂತೆ ಮಾಡಿದೆ.

ಮಧ್ಯಾಹ್ನ 12 ಕ್ಕೆ ಅಂಕಪಟ್ಟಿ ಲಭ್ಯ : ವಿದ್ಯಾರ್ಥಿಗಳು ಮಧ್ಯಾಹ್ನ 12 ಗಂಟೆಯ ನಂತರ https://www.digilocker.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ವಿಡಿಯೋ ಮಾರ್ಗದರ್ಶನ : ಡಿಜಿಲಾಕರ್‌ನಿಂದ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆ ಗೊತ್ತಿಲ್ಲದ ವಿದ್ಯಾರ್ಥಿಗಳಿಗಾಗಿ ಮಂಡಳಿಯು ವಿಡಿಯೋ ಲಿಂಕ್ ಒಂದನ್ನು ಹಂಚಿಕೊAಡಿದೆ. ವಿದ್ಯಾರ್ಥಿಗಳು https://tinyurl.com/mw84wmh9 ಲಿಂಕ್ ಬಳಸಿ ಡೌನ್‌ಲೋಡ್ ಪ್ರಕ್ರಿಯೆಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link