ತುಂಗಭದ್ರಾ : 33 ಕ್ರೆಸ್ಟ್ಗೇಟ್‌ಗಳ ಅಳವಡಿಕೆ

ವಿಜಯನಗರ : ರೈತರ ಜೀವನಾಡಿಯಾದ ತುಂಗಭದ್ರಾ ಅಣೆಕಟ್ಟೆಯಲ್ಲಿ ೩೩ ನೂತನ ಕ್ರೆಸ್ಟ್ಗೇಟ್‌ಗಳ ಅಳವಡಿಕೆ ಕರ‍್ಯ ಪರ‍್ಣಗೊಂಡಿದೆ. ಇದರಿಂದ ಮುಂಬರುವ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾದರೆ ಜಲಾಶಯ ರ‍್ತಿಯಾಗಿ ಸುಮಾರು ೧೫ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಕುರಿತು ತುಂಗಭದ್ರಾ ಮಂಡಳಿಯ ಕರ‍್ಯರ‍್ಶಿ ಒ. ಆರ್. ಕೆ. ರೆಡ್ಡಿ ಮಾಹಿತಿ ನೀಡಿದ್ದು, ಪ್ರಮುಖ ಅಳವಡಿಕೆ ಕೆಲಸಗಳು ಪರ‍್ಣಗೊಂಡಿದ್ದು, ವೆಲ್ಡಿಂಗ್ ಹಾಗೂ ಪೇಂಟಿಂಗ್‌ನAತಹ ಅಂತಿಮ ಹಂತದ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಮೇ ಎರಡನೇ ವಾರದಲ್ಲಿ ಚೈನ್‌ಲಿಂಕ್ ಅಳವಡಿಕೆ ನಡೆಯಲಿದ್ದು, ಮೇ ಅಂತ್ಯದೊಳಗೆ ಜಲಾಶಯವನ್ನು ಸಂಪರ‍್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಸಿದ್ಧಗೊಳಿಸಲಾಗುವುದು ಎಂದು ಹೇಳಿದರು.

೨೦೨೪ರ ಆಗಸ್ಟ್ ೧೦ ರಂದು ಜಲಾಶಯದ ೧೯ನೇ ಕ್ರೆಸ್ಟ್ಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ನದಿಗೆ ಹರಿದುಹೋಗಿದ್ದ ಹಿನ್ನೆಲೆ, ಎಲ್ಲಾ ೩೩ ಗೇಟ್‌ಗಳನ್ನು ನವೀಕರಿಸುವ ಮಹತ್ವದ ಯೋಜನೆ ಕೈಗೊಳ್ಳಲಾಗಿತ್ತು. ೨೦೨೫ ಡಿಸೆಂಬರ್ ೨೪ ರಿಂದ ಆರಂಭವಾದ ಈ ಕರ‍್ಯವನ್ನು ತಜ್ಞರು, ಅಧಿಕಾರಿಗಳು ಹಾಗೂ ಕರ‍್ಮಿಕರು ಸವಾಲುಗಳ ನಡುವೆ ನಿರಂತರ ೧೨೧ ದಿನಗಳ ಕಾಲ ಶ್ರಮಿಸಿ ಯಶಸ್ವಿಯಾಗಿ ಪರ‍್ಣಗೊಳಿಸಿದ್ದಾರೆ ಎಂದು ತಿಳಿಸಿದರು.

ಇದೀಗ ಎಲ್ಲಾ ೩೩ ಕ್ರೆಸ್ಟ್ಗೇಟ್‌ಗಳ ಅಳವಡಿಕೆ ಪರ‍್ಣಗೊಂಡ ಹಿನ್ನೆಲೆಯಲ್ಲಿ ಟಿ.ಬಿ ಬರ‍್ಡ್ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕರ‍್ಯರ‍್ಶಿ ಒ.ಆರ್.ಕೆ. ರೆಡ್ಡಿ, ನೀರಾವರಿ ಇಲಾಖೆಯ ಎಸ್‌ಇ ನಾರಾಯಣ ನಾಯ್ಕ ಹಾಗೂ ಇಇ ಚಂದ್ರಶೇಖರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕರ‍್ಯವನ್ನು ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದರು.

೨೦೨೪ರ ಆಗಸ್ಟ್ನಲ್ಲಿ ಜಲಾಶಯ ಗರಿಷ್ಠ ಮಟ್ಟವಾದ ೧,೬೩೩ ಅಡಿಗೆ ತಲುಪಿದ ಸಂರ‍್ಭದಲ್ಲಿ ಗೇಟ್ ದುರಂತ ಸಂಭವಿಸಿತ್ತು. ತಕ್ಷಣವೇ ತಾತ್ಕಾಲಿಕ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ನೀರಿನ ನಷ್ಟವನ್ನು ನಿಯಂತ್ರಿಸಲಾಗಿತ್ತು. ಇದೀಗ ಶಾಶ್ವತ ಪರಿಹಾರವಾಗಿ ಎಲ್ಲಾ ಗೇಟ್‌ಗಳನ್ನು ನವೀಕರಿಸಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

Recent Articles

spot_img

Related Stories

Share via
Copy link