
ಗುಬ್ಬಿ: ಗುಬ್ಬಿ ಪಟ್ಟಣದ ಎಂ ಜಿ ರಸ್ತೆಯಲ್ಲಿರುವ 1910 ರಲ್ಲಿ ಸ್ಥಾಪನೆಯಾಗಿ 115 ವರ್ಷ ಕಂಡಿರುವ ಫ್ರೆಂಡ್ಸ್ ಯೂನಿಯನ್ ಕ್ಲಬ್ ನ ಶತಮಾನೋತ್ಸವ ಭವನದ ಕಟ್ಟಡಕ್ಕೆ ಬಾನುವಾರ ಬೆಳಿಗ್ಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಸಮೀತಿಯ ಅಧ್ಯಕ್ಷ ಕೆ ಆರ್ ವೆಂಕಟೇಶ್, ಕ್ಲಬ್ ನ ಅಧ್ಯಕ್ಷ ಕೆ ವಿ ನಟರಾಜ್, ಉಪಾಧ್ಯಕ್ಷರಾದ, ಡಿ ಎಸ್ ರೇಣುಕಾ ಪ್ರಸಾದ್, ಪತ್ರೆ ದಿನೇಶ್, ಕಾರ್ಯದರ್ಶಿ ರಾಜೇಶ್ ಗುಬ್ಬಿ,ಸಹ ಕಾರ್ಯದರ್ಶಿ ಕೆ ಬಿ ಕೃಷ್ಣಪ್ಪ, ಖಜಾಂಚಿ, ಕೆ ಆರ್ ಹನುಮಂತಯ್ಯ ನಿರ್ದೇಶಕರುಗಳಾದ ನರಸಿಂಹಮೂರ್ತಿ, ಚರಣ್, ಮಧು, ಜಿ ಚನ್ನಬಸವಯ್ಯ,ಮುಖಂಡರಾದ ಜಿ ಎನ್ ಬೆಟ್ಟಸ್ವಾಮಿ, ಜಿ ಆರ್ ಶಿವಕುಮಾರ್, ಹಿರಿಯ ಕ್ರೀಡಾಪಟು ಬೆಳ್ಳಾವಯ್ಯ ಜಿ ಡಿ ಸುರೇಶ್ ಗೌಡ, ವಕೀಲರಾದ ಬಿ ಎಸ್ ಸುರೇಶ್, ಎಂ ಡಿ ಸುರೇಶ್, ಕೆ ಆರ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ತುಮಕೂರು ಜಿಲ್ಲೆಯಲ್ಲೇ ಅತೀ ಪುರಾತನವಾದ ಈ ಕ್ಲಬ್ ನಲ್ಲಿ ಈಗಾಗಲೇ ಒಳಾಂಗಣ ಶಟಲ್ ಕಾಕ್ ಕ್ರೀಡಾಂಗಣವಿದ್ದು ಈಗ ನಿರ್ಮಾಣವಾಗುವ ಕಟ್ಟಡದಲ್ಲಿ ಸಭಾಂಗಣ ರೆಸ್ಟೋರೆಂಟ್, ಸುಸಜ್ಜಿತ ಎ ಸಿ ಕೊಠಡಿಗಳು, ಹಾಗೂ ಪಾರ್ಟಿ ಹಾಲ್ ನಿರ್ಮಾಣವಾಗುತ್ತಿದ್ದು ಇದರ ಜೊತೆಗೆ ಈಜು ಕೊಳವು ನಿರ್ಮಾಣ ವಾಗುತ್ತಿದೆ,








