
ಪ್ರಜಾಪ್ರಗತಿ.ಕಾಂ
ಕುಣಿಗಲ್: ಅಕ್ಕನ ಮಗ ಹೇಮಂತ್ ಜೊತೆ ಹೆಂಡತಿ ಕಾವ್ಯ ಓಡಿ ಹೋದಳೆಂದು ಮನ ನೊಂದ ಗಂಡ, ಅರ್ಚಕ ತನ್ನ ಇಬ್ಬರು ಮಕ್ಕಳನ್ನು ಕೊಂದು, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ.
ಆಲ್ಕೆರೆ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಾಲಯದ ಅರ್ಚಕ ಶಿವಣ್ಣ (40) ತನ್ನ ಮಕ್ಕಳಾದ ಜೀವನ್ (10), ಪ್ರಾಣೇಶ್ (5) ಇಬ್ಬರನ್ನು ಉಸಿರುಗಟ್ಟಿಸಿ ಕೊಂದು, ತಾನು ಕೂಡ ಮನೆಯ ಮೇಲ್ಛಾವಣಿ ತೀರಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಕ್ಕಳು ಮಲಗಿದ್ದ ವೇಳೆ ಘಟನೆ: ತನ್ನ ಪತ್ನಿಯ ಅನೈತಿಕ ಸಂಬAಧದಿAದ ತೀವ್ರ ಬೇಸರಗೊಂಡಿದ್ದ ಶಿವಣ್ಣ ಆತ್ಮಹತ್ಯೆಗೆ ಯತ್ನಿಸಿದನು ಎನ್ನಲಾಗಿದೆ. ತಾನು ಸತ್ತರೆ ಮಕ್ಕಳು ತಬ್ಬಲಿ ಆಗುತ್ತಾರೆ ಎಂದು ಮೊದಲು ಮಲಗಿದ್ದ ಮಕ್ಕಳಿಗೆ ಉಸಿರು ಗಟ್ಟಿಸಿ ಸಾಯಿಸಿ, ಬಳಿಕ ಆತನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ಶಿವಣ್ಣನ ಹೆಂಡತಿ ಕಾವ್ಯಳನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಹೇಮಂತ್ ತಲೆ ಮರೆಸಿಕೊಂಡಿದ್ದಾನೆ.
ಮುಗಿಲು ಮುಟ್ಟಿದ ಆಕ್ರಂದÀನ: ಶಿವಣ್ಣ ಮತ್ತು ಆತನ ಮಕ್ಕಳ ಮೃತ ದೇಹವನ್ನು ನೋಡಿದ ಸಂಬAಧಿಕರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೆರೆದಿದ್ದ ಜನತೆಯ ಕಣ್ಣು ತೇವವಾಯಿತು. ಇಂತಹ ಘಟನೆ ಎಂದೂ ಸಹ ಗ್ರಾಮದಲ್ಲಿ ನಡೆದಿರಲಿಲ್ಲ ಎಂದು ಗ್ರಾಮಸ್ಥರು ನೊಂದು ನುಡಿದರು.
ಪತಿಗೆ ಸಾಯುವಂತೆ ಪತ್ನಿ ಕಿರುಕುಳ! : ಕಾವ್ಯ ತನ್ನ ಗಂಡ ಶಿವಣ್ಣನಿಗೆ ನೀನು ಸಾಯಿ, ನಾನು ಹೇಮಂತ್ ಇಬ್ಬರೂ ಚೆನ್ನಾಗಿ ಇರುತ್ತೇವೆ ಎಂದು ಪೀಡಿಸುತ್ತಿದ್ದಳು ಎನ್ನಲಾಗಿದ್ದು, ಈ ಸಂಬAಧ ಪ್ರಕಾಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಕಾವ್ಯ: ಅರ್ಚಕ ಶಿವಣ್ಣನನ್ನು 2016 ರಲ್ಲಿ ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ಕುರುಡಿಹಳ್ಳಿ ಗ್ರಾಮದ ಕಾವ್ಯ ಪ್ರೀತಿಸಿ ಮದುವೆಯಾಗಿದ್ದಳು. ಈ ದಂಪತಿಗೆ 10 ವರ್ಷದ ಜೀವನ್, 5 ವರ್ಷದ ಪ್ರಾಣೇಶ್ ಇಬ್ಬರು ಮಕ್ಕಳಿದ್ದರು. ಜೀವನ್ ಕುಣಿಗಲ್ ಪಟ್ಟಣದ ಜ್ಞಾನ ಭಾರತಿ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಾಣೇಶ್ ಅಂಚೇಪಾಳ್ಯದ ಸೇಂಟ್ ಜಾನ್ ಶಾಲೆಯಲ್ಲಿ ಎಲ್.ಕೆ.ಜಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಶಿವಣ್ಣ ಅವರಿಗೆ ಊರಿನಲ್ಲಿ ಅಡಕೆ, ತೆಂಗಿನ ತೋಟವಿದ್ದು ಜತೆಗೆ ಶಿವಣ್ಣ ಗ್ರಾಮದಲ್ಲಿನ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಅರ್ಚಕನಾಗಿ ಪೂಜೆ ಪುರÀಸ್ಕಾರ ಮಾಡುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದನು.
ಸ್ಥಳಕ್ಕೆ ಎಎಸ್ಪಿ ಭೇಟಿ: ಘಟನೆ ಸ್ಥಳಕ್ಕೆ ಎಎಸ್‌ಪಿ ಗೋಪಾಲ್, ಡಿವೈಎಸ್‌ಪಿ ಓಂಪ್ರಕಾಶ್, ಕುಣಿಗಲ್ ವೃತ್ತ ನಿರೀಕ್ಷಕ ಮಾದ್ಯನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.








