ಹಳೆಯ ಸಚಿವರಿಗೆ ಹೊಸ ಸ್ಥಾನ, ಹೊಸಬರಿಗೆ ಸಚಿವ ಸ್ಥಾನ : ಡಿಕೆ ಸಂಪುಟದಲ್ಲಿ ಸಾಧ್ಯತೆ

ಬೆಂಗಳೂರು: ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಇತ್ತ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದ ಒಂದಷ್ಟು ಮಂದಿ ಹಾಗೂ ಬಹಳಷ್ಟು ಹೊಸ ಮುಖಗಳು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಡಿ.ಕೆ. ಶಿವಕುಮಾರ್ ಮುಂದಿನ ಎರಡು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಜೂನ್ 3ರಂದು ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇತ್ತ ಹೊಸ ಸರ್ಕಾರ ರಚನೆಯ ಕ್ಷಣಗಣನೆ ಆರಂಭವಾಗುತ್ತಿದ್ದ ಹಾಗೇ ಅತ್ತ ಸಚಿವ ಸ್ಥಾನ ಆಕಾಂಕ್ಷಿಗಳಿAದ ಲಾಬಿ ಶುರುವಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿನ ಸುಮಾರು 13-14 ಸಚಿವರು ನೂತನ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಉಳಿದಂತೆ ಹೊಸ ಮುಖಗಳಿಗೆ ಮಣೆ ಹಾಕಲಿದ್ದಾರೆ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಹೀಗಾಗಿ ಹಳಬರು ಹಾಗೂ ಹೊಸಬರಿಂದ ಸಚಿವ ಸಂಪುಟದಲ್ಲಿ ಸ್ಥಾನ ಗಳಿಸಲು ಜೋರಾಗಿ ಕಸರತ್ತು ನಡೆಸುತ್ತಿದ್ದಾರೆ.

ಹಿಂದಿನ ಸಚಿವರಿಗೆ ಸ್ಥಾನ ಸಾಧ್ಯತೆ: ಡಿಕೆಶಿ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಸುಮಾರು 13-14 ಮಂದಿಗೆ ಸ್ಥಾನ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬAಧ ಕೆಲ ಹಿರಿಯ ಸಚಿವರುಗಳು, ಸಿದ್ದರಾಮಯ್ಯ ಆಪ್ತರು, ಹೈಕಮಾಂಡ್ ಕೋಟಾದ ಒಂದಷ್ಟು ಮಂದಿ ಡಿಕೆಶಿ ಕ್ಯಾಬಿನೆಟ್ ನಲ್ಲೂ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದಷ್ಟು ಮಂದಿ ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿ, ಸಿದ್ದರಾಮಯ್ಯ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಆದರೆ, ಉತ್ತಮ ಸಾಧನೆ ತೋರದ ಈ ಹಿಂದಿನ ಸಂಪುಟ ಸಚಿವರಿಗೆ ಸ್ಥಾನ ಕೈ ತಪುö್ಪವುದು ಬಹುತೇಕ ಖಚಿತ ಎಂಬುದು ಕಾಂಗ್ರೆಸ್ ಪಾಳೆಯದಲ್ಲೇ ಚರ್ಚೆಯಾಗುತ್ತಿದೆ. ಉತ್ತಮ ಸಾಧನೆ ಹಾಗೂ ಜಾತಿವಾರು, ಪ್ರಾದೇಶಿಕವಾರು ಅಂಶವನ್ಮು ಪರಿಗಣಿಸಿ ಕೆಲವೊಂದಿಷ್ಟು ಮಾಜಿಗಳಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮರುಸ್ಥಾನ ಪಡೆಯಬಹುದಾದ ಹೆಸರುಗಳು ಡಾ. ಜಿ. ಪರಮೇಶ್ವರ, ಕೃಷ್ಣ ಬೈರೇಗೌಡ, ಎಂ. ಬಿ. ಪಾಟೀಲ್, ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ಸಂತೋಷ್ ಲಾಡ್, ಎಂ. ಸಿ. ಸುಧಾಕರ್, ಪ್ರಿಯಾಂಕ್ ಖರ್ಗೆ, ಸಂತೋಷ ಲಾಡ್, ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್, ಹೆಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ, ರಾಮಲಿಂಗಾ ರೆಡ್ಡಿ ಸೇರಿ ಕೆಲವರಿಗೆ ಡಿಕೆಶಿ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಇದರಲ್ಲಿ ಕೆಲವರು ಹೈಕಮಾಂಡ್ ಕೋಟಾದಡಿ ಬಂದರೆ, ಇನ್ನೊಂದಷ್ಟು ಮಂದಿ ಸಿದ್ದರಾಮಯ್ಯ ಕೋಟಾದಡಿ ಬರುತ್ತಾರೆ. ಹೀಗಾಗಿ ಈ 13-14 ಮಂದಿ ಡಿಕೆಶಿ ಸಂಪುಟದಲ್ಲಿ ಮರುಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಚರ್ಚೆಯಾಗುತ್ತಿದೆ. ಹೊಸಬರಿಂದ ಭಾರಿ ಲಾಬಿ: ಇತ್ತ ಡಿಕೆಶಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆಯಲು ಹೊಸಬರು ಸಹ ಭಾರಿ ಲಾಬಿ ನಡೆಸುತ್ತಿದ್ದಾರೆ. ಒಂದಷ್ಟು ಮಂದಿ ಸಿದ್ದರಾಮಯ್ಯ ಕಡೆಯಿಂದ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದಷ್ಟು ಮಂದಿ ಡಿ.ಕೆ. ಶಿವಕುಮಾರ್ ಮೂಲಕ ಲಾಬಿ ನಡೆಸುತ್ತಿದ್ದಾರೆ. ಹೊಸಬರ ಪಟ್ಟಿ ದೊಡ್ಡದಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಹೊಸ ಮುಖಗಳಲ್ಲಿ ಬಹುತೇಕರು ಡಿ.ಕೆ. ಶಿವಕುಮಾರ್ ಬಣದವರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಕೆಶಿ ಕ್ಯಾಬಿನೆಟ್‌ನಲ್ಲಿ ಬಹುವಾಗಿ ಶಾಸಕರಾದ ಎನ್.ಎ. ಹ್ಯಾರಿಸ್, ಕುಣಿಗಲ್ ರಂಗನಾಥ್, ಮಾಗಡಿ ಬಾಲಕೃಷ್ಣ, ಟಿಬಿ ಜಯಚಂದ್ರ, ಕೆ. ಷಡಕ್ಷರಿ, ಗುಬ್ಬಿ ಶ್ರೀನಿವಾಸ್, ಹಿಟ್ನಾಳ್, ಅಶೋಕ್ ಪಟ್ಟಣ್, ತನ್ವೀರ್ ಸೇಠ್, ಯು.ಟಿ ಖಾದರ್, ಯತೀಂದ್ರ ಸಿದ್ದರಾಮಯ್ಯ, ನರೇಂದ್ರ ಸ್ವಾಮಿ, ರೂಪಾ ಶಶಿಧರ್, ಲಕ್ಷ÷್ಮಣ್ ಸವದಿ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಒಂದಷ್ಟು ಮಂದಿ ಡಿಕೆಶಿ ಕ್ಯಾಬಿನೆಟ್ ನ ಹೊಸ ಮುಖಗಳಾಗುವ ಸಾಧ್ಯತೆ ಹೆಚ್ಚಿದೆ ಎಂದು ಚರ್ಚೆ ನಡೆಯುತ್ತಿದೆ.

ಪವರ್ ಸೆಂಟರ್ ಆದ ಡಿಕೆಶಿ ಮನೆ: ಬುಧವಾರ (ಜೂನ್ 3) ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪದಗ್ರಹಣ ಮಾಡುತ್ತಿರುವ ಹಿನ್ನೆಲೆ ಅವರ ಮನೆ ಇದೀಗ ಪವರ್ ಸೆಂಟರ್ ಆಗಿ ಪರಿಣಮಿಸಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವರುಗಳು, ಶಾಸಕರು ಡಿಕೆಶಿಯ ಸದಾಶಿವನಗರ ನಿವಾಸಕ್ಕೆ ಆಗಮಿಸಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಆ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.

ಡಿಕೆಶಿಗೆ ಶುಭಾಶಯ ಕೋರಿ, ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ನಾಯಕರು ಬೇಡಿಕೆ ಇಡುತ್ತಿದ್ದಾರೆ. ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೆ. ಹೆಚ್. ಮುನಿಯಪ್ಪ, ಅಶೋಕ್ ಪಟ್ಟಣ್, ಮಂಕಾಳ ವೈದ್ಯ, ಎಂ.ಬಿ. ಪಾಟೀಲ್, ರೂಪಾ ಶಶಿಧರ್?, ಮಧು ಬಂಗಾರಪ್ಪ, ತನ್ವೀರ್ ಸೇಠ್, ದಿನೇಶ್ ಗುಂಡೂರಾವ್ ಸೇರಿ ಹಲವರು ಡಿಕೆಶಿ ಮನೆಗೆ ತೆರಳಿ ಶುಭಾಶಯ ಕೋರುತ್ತಿದ್ದಾರೆ.

ಡಿಸಿಎಂ ಹುದ್ದೆಗಳಿಗೆ ಪೈಪೋಟಿ: ಇತ್ತ ಡಿಕೆಶಿ ಕ್ಯಾಬಿನೆಟ್ ನಲ್ಲಿ ಸಂಭಾವ್ಯ ಡಿಸಿಎಂ ಹುದ್ದೆಗಳಿಗೆ ಪೈಪೋಟಿ ಆರಂಭವಾಗಿದೆ. ಡಿಕೆಶಿ ಸಂಪುಟದಲ್ಲಿ ಎರಡು ಡಿಸಿಎಂ ಸ್ಥಾನಗಳು ಇರಲಿವೆ ಎಂಬ ಮಾತುಗಳು ಹರಿದಾಡುತ್ತಿವೆ. ಇನ್ನೊಂದಷ್ಟು ಮೂಲಗಳಿಂದ ನಾಲ್ಕು ಡಿಸಿಎಂ ಹುದ್ದೆಗಳಿರುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಾಗಿ ಡಿಸಿಎಂ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಒಂದಷ್ಟು ಮಂದಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ಡಿಸಿಎಂ ಹುದ್ದೆಗಾಗಿ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಜಿ. ಪರಮೇಶ್ವರ್, ಜಮೀರ್ ಅಹಮದ್ ಖಾನ್ ಹೆಸರುಗಳು ಚರ್ಚೆಯಾಗುತ್ತಿವೆ. ಈ ಪೈಕಿ ಒಂದಷ್ಟು ಮಂದಿ ಹೈ ಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಅಸ್ಪಷ್ಟವಾಗಿದೆ.

ಸಚಿವಾಕಾಂಕ್ಷಿ ಶಾಸಕ ಆಶೋಕ್ ಪಟ್ಟಣ್ ಡಿಕೆಶಿ ಭೇಟಿಯಾಗಿ ಮಾತನಾಡುತ್ತಾ, ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಯಂಗ್ ಸ್ಟರ್ ಸಿಎಂ ಆಗ್ತಿದ್ದಾರೆ. ಒಳ್ಳೆಯ ಆಡಳಿತ ಕೊಡ್ತಾರೆ. ನಾವೆಲ್ಲಾ ಒಳ್ಳೆಯ ಸ್ನೇಹಿತರು, ಕ್ಯಾಬಿನೆಟ್ ಸೇರಿಸಿಕೊಳ್ತಾರೆ. ಸೇರಿಸಿಕೊಳ್ಳದಿದ್ರು ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇತ್ತ ಹಿರಿಯರ ಬೆನ್ನಲ್ಲೇ ಹೊಸ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದಾರೆ. ಡಿಕೆಶಿ ನಿವಾಸದ ಬಳಿ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಈ ಬಾರಿಯ ಸಂಪುಟ ರಚನೆಯಲ್ಲಿ ಮೊದಲ, ಎರಡನೇ ಬಾರಿ ಗೆದ್ದ ಐವರಿಗೆ ಅವಕಾಶ ಕೊಡಬೇಕು. ಮೊದಲ ಬಾರಿಗೆ ಗೆದ್ದವರಿಗೆ ಅವಕಾಶ ಮಾಡಿ. ಯುವಕರಿಗೂ ಆದ್ಯತೆ ಕೊಟ್ಟಂತಾಗುತ್ತೆ. ನಮ್ಮ ತಂದೆ ಧ್ರುವನಾರಾಯಣ್ ನಿಷ್ಠಾವಂತ ಕಾರ್ಯಕರ್ತ. ಪಕ್ಷಕ್ಕಾಗಿ ಜೀವ ಅರ್ಪಣೆ ಮಾಡಿದ್ದಾರೆ. ಅವರಿದ್ದಿದ್ರೆ ಸಚಿವ ಸ್ಥಾನಕ್ಕೆ ಅರ್ಹವಾದ ವ್ಯಕ್ತಿ. ಇದನ್ನು ಡಿಕೆಶಿಯವ್ರೇ ವಿಧಾನಸೌಧದಲ್ಲಿ ಸದನದ ಒಳಗೆ ಹೇಳಿದ್ದಾರೆ. ಹಾಗಾಗಿ ಹೊಸಬರಿಗೆ ಅವಕಾಶ ಕೊಡಿ ಎಂದು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಡಿಕೆಶಿ ಭೇಟಿಯಾದ ಬಳಿಕ ಮಾತನಾಡಿ, ನೂತನ ಸಿಎಂಗೆ ಅಭಿನಂದನೆ ತಿಳಿಸಿದ್ದೇನೆ. ಸಚಿವ ಸಂಪುಟದಲ್ಲಿ ಸೇರಲು ಯಾರಿಗೆ ಭರವಸೆ ಇರಲ್ಲ. ನನಗೆ ಭರವಸೆ ಇದೆ. ಹೈಕಮಾಂಡ್ ಏನು ಹೇಳುತ್ತದೆಯೋ, ಅದಕ್ಕೆ ನಾವು ಯೆಸ್ ಅಂತೀವಿ. ಯಾರು ಸಚಿವ ಸಂಪುಟದಲ್ಲಿ ಇರ್ತಾರೆ ಅನ್ನೋದು ಲಿಸ್ಟ್ ಬಂದಾಗಲೇ ಗೊತ್ತಾಗೋದು ಎಂದು ತಿಳಿಸಿದರು.

ಕೆಲವರಿಗೆ ಸಂಪುಟ ಕೈ ತಪುö್ಪವ ಆತಂಕ : ಇನ್ನು ಒಂದಷ್ಟು ಮಂದಿ ಸಚಿವ ಸಂಪುಟ ಕೈ ತಪುö್ಪವ ಆತಂಕದಲ್ಲಿದ್ದಾರೆ. ಡಿಕೆಶಿ ಕ್ಯಾಬಿನೆಟ್ ನಲ್ಲಿ ಈ ಮುಂಚೆ ಇದ್ದ ಕೆಲ ಸಚಿವರುಗಳಿಗೆ ಅವಕಾಶ ಕೈ ತಪುö್ಪವ ಸಾಧ್ಯತೆ ಹೆಚ್ಚಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ವಲಯದಲ್ಲಿ ರಹೀಂ ಖಾನ್, ಆರ್ ಬಿ ತಿಮ್ಮಾಪುರ, ಕೆ ವೆಂಕಟೇಶ್, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ಲಕ್ಷಿ÷್ಮÃ ಹೆಬ್ಬಾಳ್ಕರ್, ಬೋಸರಾಜ್ ಅವರನ್ನು ಕೈಬಿಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದಿನ ಕ್ಯಾಬಿನೆಟ್ ನಲ್ಲಿದ್ದ ಒಂದಷ್ಟು ಸಚಿವರುಗಳ ಸಾಧನೆ ಅಷ್ಟು ತೃಪ್ತಿಕರವಿಲ್ಲ. ಜೊತೆಗೆ ಸಕ್ರಿಯರಾಗಿರದ ಮಾಜಿಗಳನ್ನು ಕೈ ಬಿಡುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಒಂದಷ್ಟು ಮಂದಿಗೆ ಡಿಕೆಶಿ ಕ್ಯಾಬಿನೆಟ್ ನಲ್ಲಿ ಮರು ಸ್ಥಾನ ನೀಡುವುದು ಅನುಮಾನ ಎಂದು ಬಲ್ಲ ಮೂಲಗಳೇ ಖಚಿತಪಡಿಸಿವೆ.

Recent Articles

spot_img

Related Stories

Share via
Copy link