ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಪ್ರತಿಭಟನೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಶನಿವಾರ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟ£ನಡೆಸಿದೆ. ನೂರಾರು ಜನರು, ಹೆಚ್ಚಾಗಿ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅವರಲ್ಲಿ ಹಲವರು ಕಾಕ್ರೋಚ್ ಮುಖವಾಡಗಳನ್ನು ಧರಿಸಿ ಹೂವುಗಳನ್ನು ಹಿಡಿದು ಬಂದಿದ್ದು ಗಮನ ಸೆಳೆಯಿತು. ಶಾಲಾ ವಿದ್ಯಾರ್ಥಿಗಳು ಸಹ ತಮ್ಮ ಪೋಷಕರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಮತ್ತು ಸ್ಥಾಪಕ ಅಭಿಜೀತ್ ದಿಪ್ಕೆ ಪಾಲ್ಗೊಂಡಿರುವ ವಿಚಾರ ಅಚ್ಚರಿಯನ್ನುಂಟು ಮಾಡಿದೆ.

ಭಾರಿ ಭದ್ರತಾ ವ್ಯವಸ್ಥೆಗಳ ನಡುವೆ, ನೀಟ್ 2026 ಪತ್ರಿಕೆ ಸೋರಿಕೆ ಮತ್ತು ಸಿಬಿಎಸ್‌ಇಯ ಆನ್-ಸ್ಕಿçÃನ್ ಮಾರ್ಕಿಂಗ್ (ಒಎಸ್‌ಎಂ) ವ್ಯವಸ್ಥೆಯಲ್ಲಿನ ಲೋಪಗಳ ವಿರುದ್ಧ ಸಿಜೆಪಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಪ್ರಾರಂಭಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

ಪ್ರತಿಭಟನಾಕಾರರು ಧರ್ಮೇಂದ್ರ ಪ್ರಧಾನ್ ಇಸ್ತಿಫಾ ದೋ – ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿ ಎಂಬ ಘೋಷಣೆಗಳನ್ನು ಕೂಗುತ್ತಾ ತಮ್ಮ ಬೇಡಿಕೆಯನ್ನು ಮುಂದಿಟ್ಟರು. ನಾವು ‘ಮೇಕ್ ಇನ್ ಇಂಡಿಯಾ’ ಕೇಳಿದೆವು, ನೀವು ನಮಗೆ
‘ಲೀಕ್ ಇನ್ ಇಂಡಿಯಾ’ ಕೊಟ್ಟಿದ್ದೀರಿ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಇಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಲು ಅಮೆರಿಕದ ಬೋಸ್ಟನ್‌ನಿಂದ ನವದೆಹಲಿಗೆ ಬಂದಿದ್ದಾರೆ.ಈ ನಡುವೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದಿಪ್ಕೆ ಭಾರತಕ್ಕೆ ಆಗಮಿಸಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದಿಪ್ಕೆ ಇಂದು ಬೆಳಗ್ಗೆ ಅಮೆರಿಕದಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಎಕ್ಸ್ ಪೋಸ್ಟ್ ಮಾಡುವ ಮೂಲಕ ಅವರು ತಮ್ಮ ಆಗಮನವನ್ನು ಘೋಷಿಸಿದ್ದಾರೆ. ಅದರಲ್ಲಿ ಅವರು ತಮ್ಮ ಬೆಂಬಲಿಗರನ್ನು ಜಂತರ್ ಮಂತರ್‌ನಲ್ಲಿ ಸೇರುವಂತೆ ಕೇಳಿಕೊಂಡಿದ್ದಾರೆ. ಪುಸ್ತಕ ಮತ್ತು ನಮ್ಮ ತ್ರಿವರ್ಣ ಧ್ವಜವನ್ನು ಒಯ್ಯಲು ಮರೆಯಬೇಡಿ! ಪೊಲೀಸರಿಗೆ ಕರುಣೆ ಮತ್ತು ಕೃತಜ್ಞತೆಯ ಸಂಕೇತವಾಗಿ ಹೂವುಗಳನ್ನು ಅರ್ಪಿಸಿ. ನಾವು ಈ ಆಂದೋಲನವನ್ನು ಪ್ರೀತಿ ಮತ್ತು ಶಾಂತಿಯಿAದ ಮುನ್ನಡೆಸಬೇಕು ಎಂದು ದಿಪ್ಕೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ತಿಂಗಳು ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳನ್ನು ಜಿರಳೆ ಮತ್ತು ಪರಾವಲಂಬಿಗಳು ಎಂದು ಉಲ್ಲೇಖಿಸಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಪಟ್ಟಿದ್ದರು. ಈ ಹೇಳಿಕೆ ವಿರುದ್ಧ ವಿಡಂಬನಾತ್ಮಕ ಪ್ರತಿಕ್ರಿಯೆಯಾಗಿ ಮೂಲತಃ ಪ್ರಾರಂಭಿಸಲಾದ ಡಿಜಿಟಲ್ ಸಂಘಟನೆಯು ಅಂದಿನಿAದ ಸಂಘಟಿತ ಅಭಿಯಾನದ ರೂಪವನ್ನು ಪಡೆದುಕೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 22 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಇದು ದೇಶದ ಯಾವುದೇ ರಾಜಕೀಯ ಪಕ್ಷಕ್ಕಿಂತ ಅತಿದೊಡ್ಡ ಫಾಲೋವರ್ಸ್ ಹೊಂದಿರುವ ಸಂಖ್ಯೆಗಿAತ ಹೆಚ್ಚಾಗಿದೆ.

ಪ್ರತಿಭಟನೆಗೆ ಅನುಮತಿ ಕೋರಿಲ್ಲ ಎಂದ ಪೊಲೀಸರು: ಸಿಜೆಪಿ ಪ್ರತಿಭಟನೆ ನಡೆಸಲು ಪೊಲೀಸರಿಂದ ಅನುಮತಿ ಪಡೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ಆದರೆ, ಭದ್ರತಾ ದೃಷ್ಟಿಯಿಂದ ರಾಷ್ಟç ರಾಜಧಾನಿಯಲ್ಲಿ 1,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಉದ್ದೇಶಿತ ಪ್ರತಿಭಟನೆಗೆ ಸಂಬAಧಿಸಿದAತೆ ಸಿಜೆಪಿಯಿಂದ ಯಾವುದೇ ವಿನಂತಿಯನ್ನು ಸ್ವೀಕರಿಸಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಸಂಬAಧ ಸಿಜೆಪಿ ಅನುಮತಿ ಕೋರಿದರೆ ಆ ವಿನಂತಿಯನ್ನು ಪರಿಶೀಲಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತಾವಿತ ಪ್ರತಿಭಟನೆಯ ಬಗ್ಗೆ ಪ್ರಾಥಮಿಕವಾಗಿ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಮತ್ತು ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಸಂದೇಶಗಳ ಮೂಲಕ ತಿಳಿದುಕೊಂಡಿದ್ದೇವೆ ಮತ್ತು ಸಂಘಟನೆಯಿAದ ಇನ್ನೂ ಯಾವುದೇ ಔಪಚಾರಿಕ ಸಂವಹನವನ್ನು ಸ್ವೀಕರಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಸ್ತಾವಿತ ಸಭೆಯ ದೃಷ್ಟಿಯಿಂದ ಪರಿಸ್ಥಿತಿಯನ್ನು ಸೂಕ್ಷ÷್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಪ್ರಾಥಮಿಕ ಭದ್ರತಾ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಬೆಂಬಲಿಗರಿಗೆ ಈ ಎಲ್ಲ ಸಲಹೆಗಳನ್ನು ನೀಡಿದ ಸಿಜೆಪಿ: ಈ ನಡುವೆ ಸಿಜೆಪಿ ಪ್ರತಿಭಟನೆ ಹೇಗೆ ನಡೆಯಬೇಕು ಎಂಬುದನ್ನು ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ನಿರ್ದೇಶನ ನೀಡಿದೆ. ಪ್ರತಿಭಟನೆಗೆ ತ್ರಿವರ್ಣ ಧ್ವಜವನ್ನು ಒಯ್ಯಿರಿ, ಎಲ್ಲವನ್ನೂ ರೆಕಾರ್ಡ್ ಮಾಡಿ, ಸನ್‌ಸ್ಕಿçÃನ್ ಹಚ್ಚಿಕೊಳ್ಳಿ, ಹಸಿವಿನಿಂದ ಕಾಣಿಸಿಕೊಳ್ಳಬೇಡಿ ಎಂದು ತನ್ನ ಬೆಂಬಲಿಗರಿಗೆ ಎಕ್ಸ್ ಪೋಸ್ಟ್ ಮೂಲಕ ಸಲಹೆ ನೀಡಿದೆ.

ಈ ಮೂಲಕ ಜಂತರ್ ಮಂತರ್‌ನಲ್ಲಿ ನಡೆಯುವ ಇಂದಿನ ಪ್ರತಿಭಟನೆಯಲ್ಲಿ ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೂನ್ 6ರ ಬೆಳಗ್ಗೆ 9 ಗಂಟೆಗೆ ಮಿಲ್ತೇ ಹೈ ಕಲ್ ಫೆಲೋ ಕಾಕ್ರೋಚ್? ಧರ್ಮೇಂದ್ರ ಪ್ರಧಾನ್ ಕಾ ಇಸ್ತೀಫಾ ಲೇ ಕರ್ ರಹೇಂಗೆ! ಈ ಸಣ್ಣ ಹಾಸ್ಯವನ್ನು ಕ್ರಾಂತಿಯನ್ನಾಗಿ ಪರಿವರ್ತಿಸುವ ಸಮಯ. ಶಾಂತಿಯುತ ಮತ್ತು ಅತ್ಯಂತ ಪ್ರೀತಿಯ ಭಿನ್ನಾಭಿಪ್ರಾಯದೊಂದಿಗೆ ದೆಹಲಿಯ ಬೀದಿಗಳಲ್ಲಿ ಗುಂಪುಗೂಡಲು ಸಿದ್ಧರಾಗಿ. ಆದರೆ, ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನೆನಪಿಡಿ. ಎಲ್ಲರ ಕಣ್ಣುಗಳು ನಮ್ಮ ಮೇಲಿವೆ ಎಂದು ಘಿ ಪೋಸ್ಟ್ನಲ್ಲಿ ಅಎP ಬರೆದುಕೊಂಡಿದೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಭಾರತಕ್ಕೆ ಮರಳುವ ಮೊದಲು, ಸಿಜೆಪಿ ಶನಿವಾರ ಬೆಳಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದೆ.

ಶಾಂತಿ – ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಸಿಜೆಪಿ ಕರೆ
ಬೆಂಬಲಿಗರು, ಕಾರ್ಯಕರ್ತರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಸಿಜೆಪಿ ಮನವಿ ಮಾಡಿಕೊಂಡಿದೆ. ಈ ಪ್ರತಿಭಟನೆಯನ್ನು ಶಾಂತಿಯುತ ಮತ್ತು ಸಾಂವಿಧಾನಿಕ ರೀತಿಯಲ್ಲಿ ನಡೆಸಬೇಕೆಂದು ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿದೆ. ಯಾವುದೇ ವ್ಯಕ್ತಿ ಏನಾದರೂ ತಪುö್ಪ ಮಾಡಲು ಪ್ರಯತ್ನಿಸಿದರೆ, ಅದನ್ನು ತಕ್ಷಣವೇ ರೆಕಾರ್ಡ್ ಮಾಡಿ ಅಥವಾ ಪೊಲೀಸರಿಗೆ ತಿಳಿಸಿ, ಎಲ್ಲಾ ಸಂದರ್ಭಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಿಜೆಪಿ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ಮನವಿ ಮಾಡಿಕೊಂಡಿದೆ.

 

Recent Articles

spot_img

Related Stories

Share via
Copy link