
ಬೆಂಗಳೂರು: ಜಿಬಿಎ ವ್ಯಾಪ್ತಿಯ ಏಕೀಕೃತ ಘನತಾಜ್ಯ ನಿರ್ವಹಣೆ ಹಾಗೂ ಸಂಸ್ಕರಣೆಗಾಗಿ ಕಪುö್ಪ ಪಟ್ಟಿಗೆ ಸೇರಿರುವ ಕಂಪೆನಿಯೊAದಕ್ಕೆ ಕಾನೂನುಬಾಹಿರವಾಗಿ ಟೆಂಡರ್ ನೀಡುವ ಮೂಲಕ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಸೇರಿದ 39 ಸಾವಿರ ಕೋಟಿ ರೂಪಾಯಿ ಪೋಲು ಮಾಡಲು ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿಯು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅಧಿಕಾರಕ್ಕೆ ಇಳಿಯುವ ಕೆಲವೇ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಬೃಹತ್ ಮೊತ್ತದ ಟೆಂಡರ್‌ಗೆ ಅನುಮೋದನೆ ನೀಡಲಾಗಿದೆ. 30 ವರ್ಷಗಳ ಕಾಲ ಗುತ್ತಿಗೆ ನೀಡಲಾಗಿದ್ದು, ಇದರ ಮೊತ್ತ 39 ಸಾವಿರ ಕೋಟಿ ರೂ.ಗಳಾಗಿದೆ. ಇದರಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ನಾಯಕರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದು, ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಹಗರಣ ಕುರಿತು ಮಾತನಾಡಿದ ಅಶೋಕ್, ಪ್ರತಿದಿನ ನಗರದಲ್ಲಿ ಸುಮಾರು 6 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಗಾಗಿ ಹೊಸ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಸ ಸಂಸ್ಕರಣೆ ಹಾಗೂ ವಿಲೇವಾರಿಗಾಗಿ ಪ್ರತಿ ಟನ್‌ಗೆ ಪ್ರಸ್ತುತ ದರ 260 ದರವಿದೆ. ಹೊಸ ಪ್ರಸ್ತಾವನೆಯಲ್ಲಿ 2,400 ರೂಪಾಯಿ ವಿಧಿಸುವ ಮೂಲಕ 9 ಪಟ್ಟು ದರ ಹೆಚ್ಚಿಸಲಾಗಿದೆ. ಇದರಂತೆ 30 ವರ್ಷಕ್ಕೆ 39,437 ಕೋಟಿ ರೂ. ಮೊತ್ತ ಶುಲ್ಕ ರೂಪದಲ್ಲಿ ಟೆಂಡರ್ ಪಡೆದ ಕಂಪೆನಿಗೆ ಪಾವತಿಬೇಕಾಗುತ್ತದೆ. ಈಗಿನ ಮೊತ್ತಕ್ಕಿಂತ 33,320 ಕೋಟಿ ರೂ. ಹೆಚ್ಚಾಗಲಿದೆ. ಸಾವಿರಾರು ಕೋಟಿ ಸಾರ್ವಜನಿಕ ತೆರಿಗೆ ಹಣವನ್ನ ಶುಲ್ಕ ನೆಪದಲ್ಲಿ ಪಾವತಿಸಿ ಖಾಸಗಿ ಕಂಪೆನಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಅಲ್ಲದೆ, ಸುಮಾರು 10 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ. ಈ ಹಣದಲ್ಲಿ ಹಿಂದಿನ ಹಾಗೂ ಈಗಿನ ಸಿಎಂ ಸೇರಿದಂತೆ ಎಲ್ಲರ ಪಾಲಿದೆ ಎಂದು ಆರೋಪಿಸಿದ್ದಾರೆ.
ಟೆಂಡರ್‌ನಲ್ಲಿ ಗೋಲ್‌ಮಾಲ್: ಸಮಗ್ರ ಘನತಾಜ್ಯ ನಿರ್ವಹಣೆಗಾಗಿ ಬೆಂಗಳೂರು ದಕ್ಷಿಣ ಹಾಗೂ ಉತ್ತರ ಎಂಬAತೆ ಎರಡು ಪ್ಯಾಕೇಜ್ ಮಾಡಿ, ಎರಡು ಬಾರಿ ಟೆಂಡರ್ ಕರೆದರೂ ಯಾವ ಕಂಪೆನಿಗಳು ಆಸಕ್ತಿ ತೋರಿರಲಿಲ್ಲ. ಮೂರನೇ ಬಾರಿ ಟೆಂಡರ್ ಆಹ್ವಾನ ಕುರಿಂತೆ ಪತ್ರಿಕಾ ಪ್ರಕಟಣೆ ಹೊರಡಿಸದೆ ರಾಮ್ಕಿ ಕಂಪೆನಿಗೆ ಕಾನೂನುಬಾಹಿರವಾಗಿ ಟೆಂಡರ್ ನೀಡಲಾಗಿದೆ. ಪ್ರತಿ ವರ್ಷ ಶೇ.5ರಷ್ಟು ಹೆಚ್ಚುವರಿ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಿದೆ. ಇದು ಗುತ್ತಿಗೆಯ 30 ವರ್ಷಕ್ಕೆ ಹೋಲಿಸಿದಾಗ ಶೇ.430ರಷ್ಟು ಶುಲ್ಕ ಹೆಚ್ಚಳವಾಗಲಿದೆ. ಟೆಂಡರ್ ಜಾರಿಯಾದರೆ ಬೆಂಗಳೂರಿಗೆ ದೊಡ್ಡ ಆರ್ಥಿಕ ಸಂಕಷ್ಟವಾಗಲಿದೆ. ಹೀಗಾಗಿ ಟೆಂಡರ್ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೃಹತ್ ಮೊತ್ತದ ಟೆಂಡರ್‌ಗೆ ಅನುಮೋದನೆ ಮೂಲಕ ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ದುಡ್ಡು ಹೋಗಿದೆ. ಹಳೇ ಸಿಎಂ, ಹೊಸ ಸಿಎಂಗೂ ದುಡ್ಡು ಹೋಗಿದೆ. ಇವರ ಸರ್ಕಾರ ಇರುವುದೇ ಒಂದು ವರ್ಷ 11 ತಿಂಗಳು. ಆದರೆ 30 ವರ್ಷಕ್ಕೆ ಟೆಂಡರ್ ಹೇಗೆ ಕರೆಯುತ್ತಾರೆ. ಕಿಕ್ ಬ್ಯಾಕ್ ಸಿಗದೆ ಟೆಂಡರ್ ಕೊಡುತ್ತಾರೆಯೇ ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಟೆಂಡರ್ ಕುರಿತಂತೆ ಹಣಕಾಸು ಇಲಾಖೆ ಆತಂಕ ವ್ಯಕ್ತಪಡಿಸಿದ್ದು, ದುಬಾರಿ ಮೊತ್ತದ ಟೆಂಡರ್ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದೆ. ಮುಂದೆ ದೊಡ್ಡಮಟ್ಟದ ತೊಂದರೆ ಆಗುತ್ತೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ ಎಂದು ಆಶೋಕ್ ತಿಳಿಸಿದರು.
950% ಅಧಿಕ ಶುಲ್ಕ
ಸದ್ಯ ಪ್ರತಿ ಟನ್‌ಗೆ ಟಿಪ್ಪಿಂಗ್ ಶುಲ್ಕವಾಗಿ 260 ರೂ. ನೀಡಲಾಗುತ್ತಿದೆ. ಹೊಸ ಟೆಂಡರ್‌ನAತೆ 2,400 ರೂ. ನೀಡುತ್ತಿದ್ದು, 950% ಅಧಿಕವಾಗಿದೆ. ಹಳೆ ವೆಚ್ಚದಲ್ಲೇ ಮುಂದುವರಿಸಿದರೆ 30 ವರ್ಷಕ್ಕೆ 6,117 ಕೋಟಿ ರೂ. ಆಗುತ್ತದೆ. ಹೊಸ ಟೆಂಡರ್‌ನಿAದ ಈ ಖರ್ಚು 39,437 ಕೋಟಿ ರೂ. ಆಗುತ್ತಿದ್ದು, ಹೆಚ್ಚುವರಿಯಾಗಿ 33,320 ಕೋಟಿ ರೂ. ವೆಚ್ಚವಾಗುತ್ತದೆ. ಟೆಂಡರ್ ಪ್ರಕಾರ, ದಕ್ಷಿಣದ ಪ್ಯಾಕೇಜ್‌ನಲ್ಲಿ 19.43% ಹಾಗೂ ಉತ್ತರದ ಪ್ಯಾಕೇಜ್‌ನಲ್ಲಿ 19.25% ಅಧಿಕ ಮೊತ್ತ ನಮೂದಾಗಿದೆ. ಎರಡೂ ಪ್ಯಾಕೇಜ್ ಸೇರಿ ಒಟ್ಟಾಗಿ 19.33% ಹೆಚ್ಚಿದೆ ಎಂದರು.
ಮೊದಲೆರಡು ಬಾರಿ ಟೆಂಡರ್ ಕರೆದು ವಿಫಲವಾಗಿ ಮೂರನೇ ಬಾರಿಗೆ ದೆಹಲಿಯ ಎಂಎಸ್‌ಡಬ್ಲು÷್ಯ ಸೊಲ್ಯೂಶನ್ಸ್ ಲಿಮಿಟೆಡ್ ಅಥವಾ ರಾಮ್‌ಕಿ ಕಂಪನಿಗೆ (ಮಾತೃ ಸಂಸ್ಥೆ) ನೀಡಲಾಗಿದೆ. ಟೆಂಡರ್ ಪರಿಶೀಲನೆಯನ್ನು ಅಧಿಕಾರಿಗಳ ತಂಡಕ್ಕೆ ನೀಡಿದ್ದರೂ ಅದನ್ನು ಸರಿಯಾಗಿ ಪರಿಶೀಲಿಸಿಲ್ಲ. ಈ ಟೆಂಡರ್ ಪ್ರಕಾರ, ಒಂದು ಟನ್ ಸಂಸ್ಕರಣೆಯ ಖರ್ಚು 430% ಹೆಚ್ಚಲಿದೆ. ಈಗ ಟನ್‌ಗೆ 2,151 ರೂ. ಆಗಿದ್ದರೆ, 30 ವರ್ಷದ ನಂತರ 9,297 ರೂ. ಆಗುತ್ತದೆ. ಕಾನೂನು ಪ್ರಕಾರ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಿದ್ದರೂ, ಅದನ್ನು ಮಾಡದೆ ಅಕ್ರಮ ಎಸಗಲಾಗಿದೆ.
ಆರ್ಥಿಕ ಇಲಾಖೆಯಿಂದ ಎಚ್ಚರಿಕೆ
ಎರಡೂ ಪ್ಯಾಕೇಜ್‌ಗಳನ್ನು ಒಂದೇ ಕಂಪನಿಗೆ ನೀಡಿರುವುದು, 30 ವರ್ಷಗಳ ದೀರ್ಘ ಅವಧಿ, 5% ಹೆಚ್ಚಳ ಮೊದಲಾದ ಅಂಶಗಳ ಬಗ್ಗೆ ಹಣಕಾಸು ಇಲಾಖೆ ತಕರಾರರು ಎತ್ತಿದೆ. ಅವಧಿಯನ್ನು 10 ವರ್ಷಕ್ಕೆ ಇಳಿಸಿ, ಹೆಚ್ಚಿನ ಮೊತ್ತವನ್ನು 2.5% ಇಳಿಸಬೇಕು, ಇಲ್ಲವಾದರೆ ಜಿಬಿಎಗೆ ಮುಂದೆ ಹೊರೆಯಾಗುತ್ತದೆ ಎಂದು ಸಲಹೆ ನೀಡಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮುಖ್ಯಮಂತ್ರಿಗೆ ಪತ್ರ ಬರೆದು, ಇದರಲ್ಲಿನ ಲೋಪಗಳನ್ನು ಎತ್ತಿ ತೋರಿಸಿದ್ದಾರೆ. ರಾಮ್‌ಕಿ ಕಂಪನಿ ವಂಚನೆ ಮಾಡಿದೆ, ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಿಶ್ವಬ್ಯಾಂಕ್ ಹೇಳಿದ್ದು, ಇದನ್ನು ಕಪುö್ಪಪಟ್ಟಿಗೆ ಸೇರಿಸಲಾಗಿದೆ. 2016 ರಲ್ಲಿ ಬಿಬಿಎಂಪಿಯಿAದಲೇ ರಾಮ್‌ಕಿ ಕಂಪನಿಯ ಗುತ್ತಿಗೆ ರದ್ದು ಮಾಡಲಾಗಿತ್ತು. ಇಷ್ಟಿದ್ದರೂ ಇದೇ ಕಂಪನಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಟೆಂಡರ್ ನೀಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.








