ರಾಜ್ಯ ಸರ್ಕಾರದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್ಗಳ ಶುಲ್ಕವನ್ನು ಹೆಚ್ಚಳ ಮಾಡದೇ ಯಥಾಸ್ಥಿತಿಯನ್ನೇ ಮುಂದುವರೆಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.

ಸರ್ಕಾರದ ಇಂತಹ ನಿರ್ಧಾರದಿಂದಾಗಿ ಈ ಬಾರಿ ವೈದ್ಯಕೀಯ, ದಂತ ವೈದ್ಯಕೀಯ, ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್ಗಳ ಶುಲ್ಕ ಹಚ್ಚಳವಾಗುತ್ತದೆ ಎಂಬ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯವರೊAದಿಗೆ ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಶುಲ್ಕವನ್ನು ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆಯನ್ನು ನಾವು ಒಪ್ಪಿಕೊಂಡಿಲ್ಲ. ಈ ಹಿಂದೆ ಅಂದರೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿದ್ದ ಶುಲ್ಕವು ಯಥಾಸ್ಥಿತಿಯಲ್ಲೇ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಪೋಷಕರು ಮತ್ತು ವಿದ್ಯಾರ್ಥಿಗಳು ಶುಲ್ಕ ಹೆಚ್ಚಳವಾಗುತ್ತದೆ ಎಂಬ ಆತಂಕಕ್ಕೆ ಒಳಗಾಗಬಾರದು. ಈಗಾಗಲೇ ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಗೆ ನಡೆದಿದ್ದ ನೀಟ್ ಪ್ರವೇಶ ಪರೀಕ್ಷೆ ರದ್ದಾಗಿ ಮರುಪರೀಕ್ಷೆ ನಡೆಯಬೇಕಿರುವುದರಿಂದ ಒತ್ತಡಕ್ಕೆ ಒಳಗಾಗಿದ್ದಾರೆ. ಇಂತಹ ಸಮಯದಲ್ಲಿ ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ ಎಂಬ ತೀರ್ಮಾನ ಮಾಡಲಾಗಿದೆ ಎಂದರು.

ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಮಂಡಳಿಯವರು ಶುಲ್ಕ ಹೆಚ್ಚಳ ಮಾಡುವ ಪ್ರಸ್ತಾವನೆಗೆ ನಾವು ಅವಕಾಶವನ್ನೇ ಕೊಟ್ಟಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ರೀತಿಯ ಊಹಾಪೋಹಕ್ಕೆ ಕಿವಿಗೊಡಬಾರದು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಮನವಿ ಮಾಡಿದರು.

ಬೇರೆ ರಾಜ್ಯಗಳ ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಸಭೆ:

ಡೀಮ್ಡ್ ವಿವಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಯುಜಿಸಿ ಅಡಿ ಬರುತ್ತಾರೆ. ಎಂಸಿಸಿ ಮೂಲಕ ನೇರ ಕೌನ್ಸೆಲಿಂಗ್ ಮಾಡುತ್ತಾರೆ. ಈ ಸಂಬAಧ ಕೇಂದ್ರ ಸರ್ಕಾರ ಯನಿಫಾರ್ಮ್ ಕಾನೂನು ತರಬೇಕು. ಶುಲ್ಕ ಹೇಗಿರಬೇಕು, ಸೀಟು ಮ್ಯಾಟ್ರಿಕ್ಸ್ ಹೇಗಿರಬೇಕು ಎಂಬ ಬಗ್ಗೆ ಸಮಾನ ಕಾನೂನು ತರಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಶರಣಪ್ರಕಾಶ್ ಪಾಟೀಲ್ ಆಗ್ರಹಿಸಿದರು.

ನೀಟ್ ಸೋರಿಕೆಯಾದ ಕಾರಣ 23 ಲಕ್ಷ ಮಕ್ಕಳು ಕಷ್ಟ ಅನುಭವಿಸುವಂತಾಗಿದೆ. ಕಳೆದ ನಾಲ್ಕೆöÊದು ವರ್ಷದಿಂದ ಇದು ಪದೇ ಪದೆ ಆಗುತ್ತಿದೆ. ನಮ್ಮ ನಮ್ಮ ರಾಜ್ಯಗಳಿಗೆ ಪರೀಕ್ಷೆ ಮಾಡಲು ಅನುಮತಿ ನೀಡುವಂತೆ ಕೋರಿದ್ದೇವೆ. ಕೇಂದ್ರ ಸರ್ಕಾರನೂ ಈ ಬಗ್ಗೆ ವ್ಯವಸ್ಥೆ ಸರಿ ಮಾಡಬೇಕು. ನಾನೇ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರುಗಳ ಸಭೆ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯದ ಬೇಡಿಕೆ ಏನು ಇರಬೇಕು. ಏನು ಸೂಕ್ತ ಸಲಹೆ ನೀಡಬೇಕು. ಪಾರದರ್ಶಕವಾಗಿ ಹೇಗೆ ನಿರ್ಣಯ ಮಾಡಬೇಕು ಎಂಬುದನ್ನು ಶಿಫಾರಸು ಮಾಡಲು ಮುಂದಾಗಿದ್ದೇವೆ. ಒಂದು ಸೂಕ್ತ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದರು.

ಎಂಬಿಬಿಎಸ್ ಶುಲ್ಕ ವಿವರ:

ಸರ್ಕಾರಿ ಕಾಲೇಜು – 55,000 ರೂ.

ಕೆಪಿಸಿಎಫ್ ಸರ್ಕಾರಿ ಕೋಟಾ – 1,41,621 ರೂ.

ಕೆಆರ್‌ಎಲ್‌ಎಂಪಿಸಿಎ ಸರ್ಕಾರಿ ಕೋಟಾ – 1,41,621 ರೂ.

ಎಎಂಪಿಸಿಕೆ ಸರ್ಕಾರಿ ಕೋಟಾ – 1,41,621 ರೂ.

ಖಾಸಗಿ ವಿಶ್ವವಿದ್ಯಾನಿಲಯ:

ಸರ್ಕಾರಿ ಕೋಟಾ 1,41,621 ರೂ.

ಕೆಪಿಸಿಎಫ್ ಖಾಸಗಿ ಕೋಟಾ – 11,88,167 ರೂ.

ಕೆಆರ್‌ಎಲ್‌ಎಂಪಿಸಿಎ ಖಾಸಗಿ ಕೋಟಾ – 11,88,167 ರೂ.

ಎಎಂಪಿಸಿಕೆ ಖಾಸಗಿ ಕೋಟಾ – 11,88,167 ರೂ.

ದಂತ ವೈದ್ಯಕೀಯ:

ಸರ್ಕಾರಿ ಕಾಲೇಜುಗಳ ಕೋಟಾ – 40,000 ರೂ.

ಕೆಪಿಸಿಎಫ್ ಸರ್ಕಾರಿ ಕೋಟಾ – 83,358 ರೂ.

ಕೆಆರ್‌ಎಲ್‌ಎಂಪಿಸಿಎ ಸರ್ಕಾರಿ ಕೋಟಾ – 83,358 ರೂ.

ಎಎಂಪಿಸಿಕೆ ಸರ್ಕಾರಿ ಕೋಟಾ – 83,358 ರೂ.

ಖಾಸಗಿ ಕೋಟ:

ಕೆಪಿಸಿಎಫ್ ಖಾಸಗಿ ಕೋಟಾ – 7,32,625 ರೂ.

ಕೆಆರ್‌ಎಲ್‌ಎಂಪಿಸಿಎ ಖಾಸಗಿ ಕೋಟಾ – 7,32,625 ರೂ.

ಎಎಂಪಿಸಿಕೆ ಖಾಸಗಿ ಕೋಟಾ – 7,32,625 ರೂ.ಕಳೆದ ಸಾಲಿನಲ್ಲಿ ನಿಗದಿಪಡಿಸಿದ್ದ ಶುಲ್ಕವನ್ನೇ ಈ ಸಾಲಿನಲ್ಲೂ ಮುಂದುವರೆಸಲಾಗುವುದು. ಈ ನಿಯಮವು ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳೆರಡಕ್ಕೂ ಅನ್ವಯಿಸುತ್ತದೆ. ಈ ನಿರ್ಧಾರದಿಂದಾಗಿ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ತಪ್ಪಿದಂತಾಗಿದೆ. ಡೆಂಟಲ್?ಗೆ ಶುಲ್ಕ ಏರಿಕೆ ಮಾಡುವಂತೆ ಕೋರಿದ್ದರು. ಆದರೆ, ನಾವು ಅದನ್ನು ನಿರಾಕರಿಸಿದ್ದೇವೆ. ವೈದ್ಯಕೀಯ ಕಾಲೇಜುಗಳು ಒಪ್ಪಿಕೊಂಡಿದ್ದಾರೆ. ನೀಟ್ ಪೇಪರ್ ಲೀಕ್‌ನಿಂದ ಮಕ್ಕಳು ಆತಂಕದಲ್ಲಿದ್ದಾರೆ. ಹಾಗಾಗಿ ಅವರಿಗೆ ಹೊರೆ ಆಗುವುದು ಬೇಡ ಅಂತ ಈ ತೀರ್ಮಾನ ಮಾಡಲಾಗಿದೆ. ಕಳೆದ ವರ್ಷನೂ ಶುಲ್ಕ ಏರಿಕೆ ಮಾಡಲಾಗಿಲ್ಲ.

ಡಾ.ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವರು

Recent Articles

spot_img

Related Stories

Share via
Copy link