ಧರ್ಮಸ್ಥಳ ಕೇಸ್: ಹೈಕೋರ್ಟ್ನಲ್ಲಿ ರಿಟ್ ಅರ್ಜಿ

ಬೆಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬAಧಿಸಿದAತೆ ಹೊಸ ಬೆಳವಣಿಗೆಯೊಂದು ಹೊರಬಂದಿದ್ದು, ಬುರುಡೆ ಗ್ಯಾಂಗ್ ಸಂಚು ಕುರಿತು ಚಿನ್ನಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಹಲವು ಗಂಭೀರ ಆರೋಪಗಳು ಉಲ್ಲೇಖಗೊಂಡಿವೆ.ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಕೂಡ ಉಲ್ಲೇಖವಾಗಿದ್ದು, ಗಿರೀಶ್ ಮಟ್ಟಣ್ಣವರ್ ಅವರಿಂದ ಬಂದ ದೂರವಾಣಿ ಸಂಭಾಷಣೆ ಕುರಿತು ವಿವರಿಸಲಾಗಿದೆ ಎಂದು ಹೇಳಲಾಗಿದೆ.ಅದರಂತೆ ಅಧಿಕಾರಿಗಳ ಮುಂದೆ ನಿರ್ದಿಷ್ಟ ರೀತಿಯಲ್ಲಿ ಹೇಳಿಕೆ ನೀಡುವಂತೆ ಸೂಚನೆ ಬಂದಿತ್ತು ಎಂಬುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, ಈ ಪ್ರಕರಣದ ಹಿಂದೆ ಸುಮಾರು 200 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಅಂತಾರಾಜ್ಯ ಮಟ್ಟದ ಆರ್ಥಿಕ ಸಂಚು ನಡೆದಿದೆ ಎಂಬ ಸ್ಫೋಟಕ ಆರೋಪವೂ ಅರ್ಜಿಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.ಷಡ್ಯAತ್ರ ಯಶಸ್ವಿಯಾದರೆ 50 ಲಕ್ಷ ರೂಪಾಯಿ ನೀಡುವುದಾಗಿ ಆಮಿಷ ನೀಡಲಾಗಿತ್ತು ಎಂದು ಚಿನ್ನಯ್ಯ ಆರೋಪಿಸಿದ್ದಾನೆ ಎಂಬುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲಗೌಡ ಮತ್ತು ಜಯಂತ್ ಅವರ ಹೆಸರನ್ನೂ ಸಂಚಿನ ಪ್ರಮುಖರು ಎಂದು ಹೇಳಲಾಗಿದೆ. ಆದರೆ, ಈ ಕುರಿತು ಎಸ್‌ಐಟಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಜೂನ್ 29ಕ್ಕೆ ಮುಂದೂಡಿದೆ.

 

Recent Articles

spot_img

Related Stories

Share via
Copy link