
ದಾವಣಗೆರೆ: ಪೋಕ್ಸೋ ಪ್ರಕರಣಕ್ಕೆ ಸಂಬAಧಿಸಿದAತೆ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ 410 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಚಾರ್ಜ್ಶೀಟ್ನಲ್ಲಿ ಮಠದ ಹಾಸ್ಟೆಲ್ನಲ್ಲಿದ್ದ ನಾಲ್ವರು ಸಂತ್ರಸ್ತ ಬಾಲಕರು ಮತ್ತು ದೂರುದಾರ ಸಂತ್ರಸ್ತ ಬಾಲಕನ ತಾಯಿಯ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಚಾರ್ಜ್ಶೀಟ್ನಲ್ಲಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ: ಸ್ವಾಮೀಜಿ ಮಠದಲ್ಲಿ 2022ರಿಂದ 2025ರವರೆಗೆ ಬಾಲಕರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೆತ್ತಲಾಗಿ ಸಂತ್ರಸ್ತ ಬಾಲಕರಿಂದ ಎಣ್ಣೆ ಹಚ್ಚಿಸಿಕೊಂಡು ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದರು ಎಂಬುದಾಗಿ ಸಂತ್ರಸ್ತರು ಹೇಳಿರುವ ವಿಚಾರಗಳನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಜೂ.18ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ: ಮತ್ತೊಂದೆಡೆ, ನಿನ್ನೆ(ಗುರುವಾರ) ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಜೂ.18ಕ್ಕೆ ಆದೇಶವನ್ನು ಕಾಯ್ದಿರಿಸಿದರು. ಸಂತ್ರಸ್ತರ ಪರ ಸರ್ಕಾರಿ ಅಭಿಯೋಜಕರಾದ ಬಸವರಾಜ್ ವಾದ ಮಂಡಿಸಿದರು. ವಚನಾನಂದ ಸ್ವಾಮೀಜಿ ಪರ ವಕೀಲ ಎಸ್.ವಿ.ಪಾಟೀಲ್ ವಾದಿಸಿದರು.
ಸ್ವಾಮೀಜಿ ಪರ ವಕೀಲ ಎಸ್.ವಿ.ಪಾಟೀಲ್ ಮಾತನಾಡಿ, ವಚನಾನಂದ ಸ್ವಾಮೀಜಿ ಹಾಗೂ ಟ್ರಸ್ಟಿಗಳ ನಡುವೆ ವಿವಾದ ನಡೆದಾಗ ಈ ಪೋಕ್ಸೋ ಪ್ರಕರಣ ಮೇ 7ರಂದು ದಾಖಲಾಗುತ್ತದೆ. ಮೇ 8ಕ್ಕೆ ಹರಿಹರ ಗ್ರಾಮಾಂತರ ಠಾಣೆಗೆ ಪ್ರಕರಣ ವರ್ಗಾವಣೆ ಆಗುತ್ತದೆ. ಈ ಪೋಕ್ಸೋ ಪ್ರಕರಣ ಷಡ್ಯಂತ್ರ ಮಾಡಿ ದಾಖಲು ಮಾಡಿದ್ದಾರೆ ಎಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದೆವು. ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆಗ ಹರಿಹರ ಠಾಣೆಯ ಪೊಲೀಸರು ಸ್ವಾಮೀಜಿಯನ್ನು ಕರೆಸಿ ತನಿಖೆ ಮಾಡಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ” ಎಂದರು.
“ತನಿಖಾಧಿಕಾರಿ ವಚನಾನಂದ ಸ್ವಾಮೀಜಿ ಅವರಿಗೆ ನೀಡಿರುವ ನಿರೀಕ್ಷಣಾ ಜಾಮೀನು ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಸರ್ಕಾರಿ ಅಭಿಯೋಜಕರು ಕೂಡ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳಿಗೆ ನಾವು ಸ್ವಾಮೀಜಿ ಪರವಾಗಿ ತಕರಾರು ಅರ್ಜಿ ಸಲ್ಲಿಸಿದ್ದೆವು. ಗುರುವಾರ ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸ್ವಾಮೀಜಿ ಅವರ ಜಾಮೀನು ರದ್ದು ಮಾಡಬೇಕೆಂದು ಅವರು ವಾದ ಮಂಡಿಸಿದರು. ನಾವೂ ಕೂಡ ಸ್ವಾಮೀಜಿ ಪರ ವಾದ ಮಂಡಿಸಿದ್ದೇವೆ. ಈ ಪ್ರಕರಣದಲ್ಲಿ ಯಾವುದೇ ಬಲವಾದ ಸಮರ್ಥ ವಾದ, ಬಲವಾದ ಕಾರಣಗಳಿಲ್ಲ ಎಂದು ಎರಡು ಅರ್ಜಿಗಳನ್ನು ರದ್ದು ಮಾಡಬೇಕೆಂದು ವಾದ ಮಾಡಿದ್ದೇವೆ. ಸಂತ್ರಸ್ತ ಮಕ್ಕಳು, ದೂರು ಸಲ್ಲಿಸಿದವರೂ ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯವು ವಾದ ಆಲಿಸಿ ಈ ಆದೇಶವನ್ನು ಜೂನ್ 18ಕ್ಕೆ ಕಾಯ್ದಿರಿಸಿದೆ” ಎಂದು ತಿಳಿಸಿದರು.
ಸಂತ್ರಸ್ತರ ಪರ ವಕೀಲ ರಮೇಶ್ ಕಲಾಲ್ ಮಾತನಾಡಿ, “ನಿರೀಕ್ಷಣಾ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಾಗಿದೆ. ಸಂಪೂರ್ಣ ವಿಚಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಕೇಸ್ ವಾಪಸ್?? ತೆಗೆದುಕೊಳ್ಳಿ ಎಂದು ಸಂತ್ರಸ್ಥರಿಗೆ ಬೆದರಿಕೆ ಹಾಕಲಾಗಿದೆ. ಎಲ್ಲಾ ಅಂಶಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ನ್ಯಾಯಾಲಯ ಜೂನ್ 18ಕ್ಕೆ ಆದೇಶ ಕಾಯ್ದಿರಿಸಿದೆ. ಸ್ವಾಮೀಜಿಗೆ ಬೇಲ್ ನೀಡುವ ಸಂದರ್ಭದಲ್ಲಿ ಕೆಲವೊಂದು ಅಂಶಗಳು ಉಲ್ಲಂಘನೆಯಾಗಿವೆ. ಬೇಲ್ ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ” ಎಂದರು.








