
ಚಾಮರಾಜನಗರ: ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮಂತ್ರಿ ಮಂಡಲ ವಿಸ್ತರಣೆಯಾದರೆ ಕಾಂಗ್ರೆಸ್ ಸರ್ಕಾರ ಅಲುಗಾಡಿ ಭೂಕಂಪವೇ ಆಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂತ್ರಿ ಮಂಡಲ ವಿಸ್ತರಣೆಯಾದ ಕೂಡಲೇ ಕಾಂಗ್ರೆಸ್ ಒಳಗಿನ ವ್ಯತ್ಯಾಸಗಳು ಭುಗಿಲೇಳುತ್ತವೆ. ಆ ಭಯದಿಂದ ಪಕ್ಷದಲ್ಲಿ ಮಂತ್ರಿ ಮಂಡಲ ವಿಸ್ತರಣೆಯಾಗುತ್ತಿಲ್ಲ. ಅದೇನೇ ಇದ್ದರೂ ಸಂಪುಟ ವಿಸ್ತರಣೆಯಾಗಬೇಕು. ರಾಜ್ಯದಲ್ಲಿ ಬರಗಾಲ ಇದೆ, ಸಾಕಷ್ಟು ಸಮಸ್ಯೆಗಳಿವೆ. ಇದಕ್ಕೆಲ್ಲ ಮಂತ್ರಿ ಮಂಡಲ ವಿಸ್ತರಣೆಯಾ ದರೆ ಸೂಕ್ತ. ಆದ್ದರಿಂದ ನಾನು ಸಹ ಮಂತ್ರಿ ಮಂಡಲ ವಿಸ್ತರಣೆ ಮಾಡುವಂತೆ ಆಗ್ರಹ ಮಾಡುತ್ತೇನೆ ಎಂದರು.
ಬಾAಗ್ಲಾದೇಶಿಯರನ್ನು ಮತ್ತು ಮತದಾರ ಪಟ್ಟಿಯನ್ನು ಸ್ವಚ್ಛಗೊಳಿಸುವ ಉದ್ದೇಶ ದಿಂದ ಎಸ್‌ಐಆರ್ ಪ್ರಕ್ರಿಯೆ ಮಾಡಲಾಗು ತ್ತಿದೆ. ಆದರೆ ದುರುದ್ದೇಶದಿಂದ ಕಾಂಗ್ರೆಸ್ ನವರು ಮಸೀದಿ, ಸಮುದಾಯ ಭವನದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮಾಡಿಸುವ ಮೂಲ ಕ ಪ್ರಕ್ರಿಯೆಗೆ ಮೋಸಮಾಡುತ್ತಿದ್ದಾರೆ. ಇದೆಲ್ಲ ಕಾನೂನಾತ್ಮಕವಾಗಿ ನಡೆಯಬೇಕಿದೆ. ಈಗಾ ಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ. ಅವರು ಸಹ 36 ಅಧಿಕಾರಿಗೆ ನೋಟಿಸ್ ನೀಡಿದ್ದಾರೆ. ಇಂತಹ ವಿಚಾರಗ ಳು ಮತ್ತೆ ಮರುಕಳಿಸಬಾರದು. ನಾವು ಸಹ ಇಂತಹ ವಿಚಾರಗಳ ಬಗ್ಗೆ ಗಮನ ಹರಿಸಬೇ ಕು ಎಂದರು.
ಅಯೋಧ್ಯೆ ರಾಮ ಮಂದಿರದಲ್ಲಿ ಆರ್. ಎಸ್.ಎಸ್. ಮುಂಖAಡರ ವಿರುದ್ಧ ಕಳ್ಳತ ನದ ಆರೋಪ ಸಂಬAಧ ಪ್ರತಿಕ್ರಿಯಿಸಿ, ಈಗಾಗಲೇ ಎಸ್. ಐ.ಟಿ. ತನಿಖೆ ನಡೆಯು ತ್ತಿದೆ. ಅದು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗಲಿದೆ. ಯೋಗಿ ಆದಿತ್ಯ ನೇತೃತ್ವದ ಸರ್ಕಾ ರ ಯಾರನ್ನು ಕ್ಷಮಿಸುವುದಿಲ್ಲ. ಈಗ ತಾತ್ಕಾ ಲಿಕ ವರದಿ ಬಂದಿದೆ. ಇನ್ನೇನು ಫೈನಲ್ ವರದಿ ಬರಲಿದೆ. ಅದರ ಮೂಲಕ ಯಾರೇ ತಪ್ಪಿತಸ್ಥರು ಇದ್ದರೂ ಅವರಿಗೆ ಶಿಕ್ಷೆ ಆಗಲಿದೆ ಎಂದರು.
ಎAಎಲ್ಸಿ ಚುನಾವಣೆಯಲ್ಲಿ ಕ್ರಾಸ್ ಓಟಿಂಗ್ ಮಾಡಿದವರನ್ನು ಪತ್ತೆ ಹಚ್ಚುವುದು ಸುಲಭ ವಲ್ಲ. ಎಲೆಕ್ಷನ್ ಕಮಿಷನ್ ಮೂಲಕವೇ ಹೊರ ಬರಬೇಕು. ಇದೇನೂ ಒಳಗಡೆ ಹಾಗೆ ಉಳಿಯಲ್ಲ. ಯಾರು ಕ್ರಾಸ್ ಓಟಿಂಗ್ ಮಾಡಿಸಿದ್ದರು ಅವರೇ ಹೇಳುತ್ತಾರೆ, ಆ ಸಮಯ ಬರಲಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ ಸದ್ಯಕ್ಕೆ ಅಧ್ಯಕ್ಷರಾಗಿ ವಿಜಯೇಂದ್ರ ಅವರೇ ಇದ್ದಾರೆ. ಅದನ್ನು ಬಿಟ್ಟು ಬೇರೆ ಹೇಳಲು ಸಾಧ್ಯವಿಲ್ಲ. ಅದೆಲ್ಲ ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದರು.








