ಸರ್ಕಾರದಿಂದ ಎಸ್‌ಐಆರ್ ಹೈಜಾಕ್ : ವಿಪಕ್ಷ ನಾಯಕ ಆರ್.ಅಶೋಕ್

ಚಾಮರಾಜನಗರ : 20 ವರ್ಷಕ್ಕೆ ಒಂದು ಬಾರಿ ನಡೆಯುವ ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿ ನಡೆಯಬೇಕು. ಆದರೆ ಕಾಂಗ್ರೆಸ್ ನವರು ಇದನ್ನು ಹೈಜಾಕ್ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.

ಎಸ್ ಐಆರ್ ನಿಂದ ದೇಶದ ಜನರಿಗೆ ಅನುಕೂಲವಾಗಬೇಕೇ ಹೊರತು ಹೊರಗಿನ ಬಾಂಗ್ಲಾದವರಿಗಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾತರನ್ನು ಓಲೈಸಲು ಕೆಲಸ ಮಾಡುತ್ತಿದೆ. ಪಶ್ಚಿಮ ಬಂಗಾಳದ ದಿದಿ ಸರ್ಕಾರದ ಅವಧಿಯಲ್ಲಿ ಮೂರು ಸಾವಿರ ರೂ. ಪಡೆದು ಬಾಂಗ್ಲಾದವರಿಗೆ ರೇಷನ್ ಕಾರ್ಡ್ ಕೊಡಲಾಗಿತ್ತು. ಇದಕ್ಕೆಲ್ಲ ಕಾಂಗ್ರೆಸ್ ಕಾರಣ ಎಂದರು.

ದೇಶದಲ್ಲಿ ನಕ್ಸಲಿಸಂ ಬರಲು ಕಾಂಗ್ರೆಸ್ ಕಾರಣ. ಆದರೆ ಬಿಜೆಪಿಯಿಂದ ದೇಶದಲ್ಲಿ ನಕ್ಸಲಿಸಂ ಮುಕ್ತವಾಗಲು ಸಾಧ್ಯವಾಯಿತು.
ಕಾಂಗ್ರೆಸ್ ದೇಶದ್ರೋಹಿಗಳಿಗೆ ಮಣೆ ಹಾಕುತ್ತಿದೆ. ಎಸ್‌ಐಆರ್ ಮೂಲಕ ಬಾಂಗ್ಲಾದೇಶದವರಿಗೆ ಮಣೆಹಾಕಿದರೆ ಭಯೋತ್ಪಾದನೆ ಹೆಚ್ಚಾಗಲಿದೆ. ಒಟ್ಟಾರೆ ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಬಾಂಗ್ಲಾದವರನ್ನು ದೇಶದಲ್ಲಿ ಉಳಿಸಿಕೊಳ್ಳವ ಕೆಲಸ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ 30 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ. 20 ಲಕ್ಷ ಜನರಿಗೆ ವಿವಿಧ ಯೋಜನೆಯಡಿ ಬರುವ ಪಿಂಚಣಿಯನ್ನು ನಿಲ್ಲಿಸಿದೆ. ಸಿಎಂ ಡಿ.ಕೆ.ಶಿವಕುಮಾರ್ ಅವರು ಫೋಟೊ ಶೋಗೆ ಮಾತ್ರ ಸೀಮಿತರಾಗಿದ್ದಾರೆ. ಇದೊಂದು ಬೇಜವಾಬ್ದಾರಿ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಜನವರಿ ತಿಂಗಳಿAದ ಸರಿಯಾಗಿ ಗೃಹಲಕ್ಷಿ÷್ಮ ಹಣ ಕೊಟ್ಟಿಲ. ಇದರ ಐದು ಸಾವಿರ ಕೋಟಿ ಹಣವನ್ನು ನುಂಗಿ ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ರಾಜ್ಯದ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಾರ್ಟಿ ದೋಖಾ ಪಾರ್ಟಿಯಾಗಿದೆ. ಜನರಿಗೆ ಭರವಸೆ ನೀಡುವುದು ಒಂದು, ಅವರು ಮಾಡುತ್ತಿರುವುದು ಇನ್ನೊಂದು. ಈ ಸರ್ಕಾರದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಸಿದಿದೆ ಎಂದರು.

 

Recent Articles

spot_img

Related Stories

Share via
Copy link