ರಾಮನ ದೇಣಿಗೆ ಕದ್ದಿದ್ದಾರಾ..? : ಆರ್‌ಎಸ್‌ಎಸ್‌ನವರು ಕ್ಷಮೆ ಕೇಳಿಲಿ: ಸಚಿವ

ಬೆಂಗಳೂರು: ಪಾಕಿಸ್ತಾನ ಜೊತೆ ಸಂಬAಧ ಬೆಳೆಸಬೇಕು ಎಂಬುದು ಆರ್‌ಎಸ್‌ಎಸ್‌ನ ಅಭಿಪ್ರಾಯ. ಹಾಗಾದ್ರೆ ನರೇಂದ್ರ ಮೋದಿ ವಿದೇಶಾಂಗ ನೀತಿಯನ್ನು ಆರ್‌ಎಸ್‌ಎಸ್‌ಗೆ ಕೊಟ್ಟಿದ್ದಾರಾ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಮ ಮಂದಿರ ದೇಣಿಗೆ ಅಕ್ರಮದ ವಿಚಾರಕ್ಕೆ ಆರ್‌ಎಸ್‌ಎಸ್‌ನಿಂದ ವಿಷಾದ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗಾದರೆ ಕದ್ದಿದ್ದಾರೆ ಅಂತ ವಿಷಾದ ವ್ಯಕ್ತಪಡಿಸಿದ್ದಾರಾ? ಮೊದಲು ಅವರು ನಮ್ಮಿಂದ ತಪ್ಪಾಗಿದೆ ಅಂತ ಒಪ್ಪಿಕೊಳ್ಳಬೇಕು. ತಪುö್ಪ ಒಪ್ಪಿಕೊಂಡು ಸಾರ್ವಜನಿಕರಲ್ಲಿ ಕ್ಷಮೆ ಕೇಳಬೇಕು. ಸುಮ್ಮನೆ ಪ್ರೆಸ್ ನೋಟ್ ಕೊಡೋದು ಅಲ್ಲ ಎಂದು ಕಿಡಿಕಾರಿದ್ದಾರೆ.

ಎಲ್ಲಾ ವಿಹೆಚ್‌ಪಿ ಪದಾಧಿಕಾರಿಗಳು, ಕಾರ್ಯಕರ್ತರು ಅಕ್ರಮ ಮಾಡಿದ್ದಾರೆ. ಆರ್‌ಎಸ್‌ಎಸ್‌ದು ಅಧಿಕೃತ ಅಂಗ ಸಂಸ್ಥೆ ವಿಹೆಚ್‌ಪಿ. ಇದನ್ನು ಹುಟ್ಟುಹಾಕಿದ್ದೇ ಆರ್‌ಎಸ್‌ಎಸ್. ಅಧಿಕೃತವಾಗಿ ಆರ್‌ಎಸ್‌ಎಸ್-ವಿಹೆಚ್‌ಪಿಗೆ ನಂಟಿದೆ. ಅವರೆಲ್ಲ ಸಂಬAಧಿಕರೇ ಆಗಿದ್ದಾರೆ. ವಿಷಾದ ವ್ಯಕ್ತಪಡಿಸೋದಲ್ಲ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು.

ಮಿಕ್ಕಿದೆಲ್ಲ ಪಬ್ಲಿಕ್‌ನಲ್ಲಿ ಮಾಡ್ತೀರಾ. ಮೋಹನ್ ಭಾಗವತ್ ನಾವು ಮುಚ್ಚಿಮರೆ ಮಾಡಲ್ಲ ಅಂದಿದ್ದಾರೆ. ಹಾಗಾದ್ರೆ ಇದನ್ನ ಯಾಕೆ ಮುಚ್ಚುಮರೆ ಮಾಡಿದ್ರಿ. ಸಾರ್ವಜನಿಕವಾಗಿ ಬಂದು ಸಾರಿ ಕೇಳಿ. ಭಕ್ತರ ಭಾವನೆಗೆ ನೋವಾಗಿದೆ ಎಂದಿದ್ದಾರೆ.

 

Recent Articles

spot_img

Related Stories

Share via
Copy link