ಬಿಡದಿ ಟೌನ್‌ಶಿಪ್ ವಿರುದ್ಧ ಪಾದಯಾತ್ರೆಗೆ ನಿರ್ಧಾರ : ಜೆಡಿಎಸ್ ನಾಯಕರೊಂದಿಗೆ ಮಾತುಕತೆ ಮಾಡುತ್ತೇವೆ : ಬಿವೈವಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಬಿಡದಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಫ್ರೀಡಂ ಪಾರ್ಕ್ನಲ್ಲಿ ಮಾತನಾಡಿದ ಅವರು, ಸಿಎಂ ಧೋರಣೆ ಗಮನಿಸಿದರೆ ಅವರು ರೈತರ ಪರವಾಗಿ ನಿಲುವು ತೆಗೆದುಕೊಳ್ಳುತ್ತಿಲ್ಲ. ಬೆಳಗ್ಗೆ ಬಿಡದಿ ಭೂ ಸ್ವಾಧೀನ ಬಗ್ಗೆ ನೋಟಿಫಿಕೇಷನ್ ಹೊರಡಿಸ್ತಾರೆ, ಸಂಜೆ ಕಮಿಟಿ ಮಾಡ್ತೇನೆ ಅಂತಾರೆ. ರಿಯಲ್ ಎಸ್ಟೇಟ್ ಮಾಡಲು ಹೊರಟಿದ್ದಾರೆ. ಬಿಡದಿ ಪಾದಯಾತ್ರೆ ಈಗ ತೀರ್ಮಾನ ಆಗಿದೆ. ಈ ಸಂಬAಧ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ಮಾಡುತ್ತೇವೆ ಎಂದರು.

ಪಾದಯಾತ್ರೆಗೆ ದಿನಾಂಕ ನಿಗದಿ ಮಾಡುತ್ತೇವೆ. ಈ ಸರ್ಕಾರದ ನಡೆ ಗಮನಿಸಿದರೆ ಟೌನ್ ಶಿಪ್ ಕೈಬಿಡುವಂತೆ ಕಾಣುತ್ತಿಲ್ಲ. ರೈತರ ಪರ ನಮ್ಮ ಹೋರಾಟ ಆರಂಭವಾಗಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಪಾದಯಾತ್ರೆ ಯಾವಾಗ ಮಾಡಬೇಕು ಅಂತ ತೀರ್ಮಾನ ಮಾಡ್ತೇವೆ ಎಂದರು.

ಏರ್ಪೋರ್ಟ್ ಬಗ್ಗೆ ಕೂಡ ಮಾತಾಡಿದ್ದೇನೆ. ಏರ್ಪೋರ್ಟ್ ಅನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ. ತುಮಕೂರಿಗೆ ತೆಗೆದುಕೊಂಡು ಹೋಗೋದ್ರಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕಕ್ಕೂ ಅನುಕೂಲ ಆಗಲಿದೆ. ಇವೆಲ್ಲಾ ವಿಚಾರ ತೆಗೆದುಕೊಂಡು ಬಿಜೆಪಿ ಪಾದಯಾತ್ರೆ ಮಾಡಲಿದೆ ಎಂದು ತಿಳಿಸಿದರು.

ವಿಜಯೇಂದ್ರ ಬಿಡದಿ ವಿಚಾರದಲ್ಲಿ ಫೇಲ್ಯೂರ್ ಎಂಬ ಆರೋಪದ ವಿಚಾರವಾಗಿ ಮಾತನಾಡಿ, ಕೆಲಸಕ್ಕೆ ಬಾರದವರು ಈ ರೀತಿ ಬಿಂಬಿಸ್ತಿದ್ದಾರೆ. ಡಿಕೆಶಿ, ಸಿದ್ದರಾಮಯ್ಯ ಯಾರೇ ಇದ್ರೂ, ಹೆದರದೆ ಹೋರಾಟ ಮಾಡಿದ್ದೇವೆ. ಡಿಕೆಸು ಅವರ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಡಾ.ಮಂಜುನಾಥ್ ಕಣಕ್ಕಿಳಿಸಿದ್ದೆವು. ಹೀಗೆ ರಾಜ್ಯಾಧ್ಯಕ್ಷನಾಗಿ ಅನೇಕ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿರುಗೇಟು ನೀಡಿದರು.

ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ ನಾಯಕರು ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು ಕೊಟ್ಟಿದ್ದ ರೈತ ಮಹಿಳೆಯರೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪ್ಲೆಕಾರ್ಡ್ಗಳನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಎಸ್‌ಪಿ ಕಛೇರಿಗೆ ನಾನೆ ಮುತ್ತಿಗೆ ಹಾಕುವೆ :

ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, “ಇದು ಕಾಂಗ್ರೆಸ್ ಪಕ್ಷಕ್ಕೆ ಚಿನ್ನದ ಮೊಟ್ಟೆ ಇಡುವ ಯೋಜನೆ. ರೈತರ ವಿರೋಧ ಇದ್ದರೂ ಯೋಜನೆ ಮಾಡುತ್ತಿದ್ದಾರೆ. ಇದರಲ್ಲಿ ಸ್ವಹಿತಾಸಕ್ತಿ ಇದೆ. ಇದರಿಂದ ಲಕ್ಷಾಂತರ ಜನರಿಗೆ ತೊಂದರೆ ಆಗುತ್ತಿದೆ. ಡಿ.ಕೆ.ಶಿವಕುಮಾರ್ ಹಠಮಾರಿತನದಿಂದ ಯೋಜನೆ ನಡೆಯುತ್ತಿದೆ. 20-30 ಸೀಟ್ ಇದರಿಂದ ಕಾಂಗ್ರೆಸ್‌ಗೆ ಕೈ ಬಿಟ್ಟು ಹೋಗುತ್ತದೆ ಎಂಬ ಗುಪ್ತಚರ ವರದಿ ಅವರಿಗೆ ತಲುಪಿದೆ. ವೈಯಕ್ತಿಕ ಟಾರ್ಗೆಟ್ ಮಾಡಿ ಡಿ.ಕೆ.ಶಿವಕುಮಾರ್ ಯಾಮಾರಿಸುತ್ತಿದ್ದಾರೆ. ಯೋಜನೆಯಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ. ನಾವು ರೈತರ ಪರವಾಗಿ ನಿಂತಿದ್ದು, ಬಿಜೆಪಿ ಸರ್ಕಾರ ಬಂದರೆ ಯೋಜನೆ ಕೈ ಬಿಡುತ್ತೇವೆ. ರೈತರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೋ ಅದನ್ನು ಕೈ ಬಿಡದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ. ಎಸ್‌ಪಿಗೆ ಕಚೇರಿಗೆ ಮುತ್ತಿಗೆ ಹಾಕಲು ನಾನೇ ಹೋಗುತ್ತೇನೆ. ಇದರಲ್ಲಿ ಅನಾವಶ್ಯಕವಾಗಿ ಕುಮಾರಸ್ವಾಮಿಯವರನ್ನು ಎಳೆಯುವುದು ಸರಿಯಲ್ಲ” ಎಂದು ಎಚ್ಚರಿಕೆ ನೀಡಿದರು.

Recent Articles

spot_img

Related Stories

Share via
Copy link