
ಶಿವಮೊಗ್ಗ: ಆಗುಂಬೆ ಟನಲ್ ಸಾಧಕ ಭಾದಕಗಳ ಕುರಿತು ಮುಂದಿನವಾರ ಸಭೆ ನಡೆಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಗುಂಬೆ ಟನಲ್ ವಿಚಾರವಾಗಿ ಮುಂದಿನ ಶುಕ್ರವಾರ ಸಂಜೆ ಬೆಂಗಳೂರಿನ ಆರ್?ಓ ಅವರ ಕಚೇರಿಯಲ್ಲಿಯೇ ಯೋಜನೆ ಕುರಿತು ಮಾಹಿತಿ ಒದಗಿಸಲಿದ್ದಾರೆ. ಹಾಲಿ ಇರುವ ರಸ್ತೆ ಅಭಿವೃದ್ದಿಗೆ 420 ಕೋಟಿ ರೂ ಬಿಡುಗಡೆಯಾಗಿದೆ. ರಸ್ತೆ ಅಗಲಿಕರಣವಾಗಬೇಕಾದ್ರೆ ಅದಕ್ಕೆ ವನ್ಯಜೀವಿ ವಿಭಾಗದ ಅನುಮತಿ ಬೇಕಾಗುತ್ತದೆ. ಇದಕ್ಕಾಗಿ ನಾನು ದೆಹಲಿಗೆ ಹೋದಾಗ ಕೇಂದ್ರದ ಅರಣ್ಯ ಸಚಿವರನ್ನು ಭೇಟಿ ಮಾಡಿ, ರಸ್ತೆ ಅಗಲಿಕರಣಕ್ಕೆ ಅವರು ಅನುಮತಿ ಕೊಡಿಸುವುದಾದ್ರೆ, ನಾವು ಮುಂದುವರೆಯುತ್ತೇವೆ ಎಂದು ತಿಳಿಸಿದರು.
ಅದು ತುಂಬ ಕಠಿಣವಾದ ಕೆಲಸವಾಗಿದೆ. ಹಾಲಿ ರಾಜ್ಯದ ಆರ್‌ಓ ಅವರು ಕೇರಳ ಹಾಗೂ ನಮ್ಮ ರಾಜ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಕೇರಳದಲ್ಲಿ ಭೂ ಕುಸಿತವಾಗುತ್ತಿರುವ ಕಡೆ ಕೆಲಸ ಮಾಡುತ್ತಿದ್ದಾರೆ. ಒಂದು ಟನಲ್ ಮಾಡಬೇಕಾದ್ರೆ, ಅದಲ್ಲಿ ಒಂದು ವಾಹನ ಓಡಾಟ ಬೇಕಾದ್ರೆ, ಅದಕ್ಕೆ ನಿಯಮಬೇಕಾಗಿದೆ. ಈ ಕುರಿತು ಮುಂದಿನ ಶುಕ್ತವಾರದ ಸಭೆಯಲ್ಲಿ ತಿಳಿಯಲಿದೆ ಎಂದರು.
ನಮ್ಮ ಜಿಲ್ಲೆಯ ಆಥುನಿಕ ಭಗೀರಥರಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಇದ್ದಾರೆ. ಶಿವಮೊಗ್ಗ ಗ್ರಾಮಾಂತರದಲ್ಲಿ ತುಂಗಾ ಮತ್ತು ಹೊಸಹಳ್ಳಿ ಏತ ನೀರಾವರಿ ಯೋಜನೆ, ಗ್ರಾಮಾಂತರ ಭಾಗದಲ್ಲಿ 10 ನೀರಾವರಿ ಇಲಾಖೆಯಿಂದ ಏತ ನೀರಾವರಿ ಯೋಜನೆ ಮಾಡಿದ್ದೇವೆ. ಶಿಕಾರಿಪುರದಲ್ಲಿ ಹೊಸಹಳ್ಳಿಯಿಂದ ತುಂಗಾ ಭದ್ರಾದಿಂದ ನೀರು ತಂದು, ಉಡುಗಡೆ, ತಾಳಗುಂದ ಹೊಸೂರು ಹೋಬಳಿಗಳ ಭಾಗದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ಹೇಳಿದರು.
ಅದೇ ರೀತಿ ಹೊಸಹಳ್ಳಿ ಯೋಜನೆಯಿಂದ ಅಂಜನಾಪುರ ಜಲಾಶಯಗಳಿಗೆ ಪೈಪ್ ಲೈನ್?ಗಳಿಂದ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಸೊರಬ ತಾಲೂಕಿನ ಮೂಗೂರು, ಮೂಡಿ ಹಾಗೂ ಕಚವಿ ಏತ ನೀರಾವರಿ ಯೋಜನೆ ಮೋಟಾರು ಆನ್ ಮಾಡಿಸಲಾಗಿದೆ. ಬೈಂದೂರು ಕ್ಷೇತ್ರದಲ್ಲಿ ಸೌಕೂರು ಹಾಗೂ ಸಿದ್ದಪುರ ಏತ ನೀರಾವರಿ ಯೋಜನೆ ಇದೆ. 2,500 ಕೋಟಿ ರೂ.ಗಳ ಕಾಮಗಾರಿಯನ್ನು ಟೆಂಡರ್ ಕರೆದು, ಕಾಮಗಾರಿಗಳನ್ನು ಜಾರಿ ಮಾಡಿದ್ದು, ನಮ್ಮ ಸರ್ಕಾರ ಎಂದರು.
ಸಣ್ಣ ಹಾಗೂ ದೊಡ್ಡ ನೀರಾವರಿ ಇಲಾಖೆಯಿಂದ 62 ಕೋಟಿ ರೂ. ಹಣ ವಿದ್ಯುತ್ ಬಿಲ್ ಬಾಕಿ ಇತ್ತು. ಈ ಕುರಿತು ಸಚಿವ ರಾಮಲಿಂಗರೆಡ್ಡಿ ಅವರನ್ನು ಭೇಟಿ ಮಾಡಿ ಹಣ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಅವರು ಸ್ವಲ್ಪ ಹಣ ಕಟ್ಟಿದ್ದರಿಂದ ಪೈಪ್ ಲೈನ್?ಗಳ ಮೂಲಕ ಕೆರೆಗೆ ನೀರು ತುಂಬುತ್ತಿದೆ. ಈಗ ಶಿವಮೊಗ್ಗದ ಏತ ನೀರಾವರಿ ಯೋಜನೆಯ ಪಂಪ್ಗಳು ಆನ್ ಆಗಿವೆ. ಈಗ ಶಿಕಾರಿಪುರ ತಾಲೂಕಿನ ಶೇ. 50ರಷ್ಟು ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.








