
ಮೈಸೂರು: ಮೊದಲ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರವೇ ಹರಿದು ಬಂತು. ನಾಡ ಅಧಿದೇವತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಂಬ ನೀಡಿದ್ದ ಹಸಿರು ರೇಷ್ಮೆ ಸೀರೆಯಲ್ಲಿ ಚಾಮುಂಡಿ ತಾಯಿಗೆ ಲಕ್ಷಿ÷್ಮÃ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿAದಲೇ ಭಕ್ತರು ತಾಯಿಯ ದರ್ಶನ ಪಡೆದರು.
ಆಷಾಢ ಮಾಸದಲ್ಲಿ ಶಕ್ತಿ ದೇವತೆಯನ್ನು ಆರಾಧನೆ ಮಾಡಿದರೆ ಕಷ್ಟಗಳು ಪರಿಹಾರವಾಗಿ ಇಷ್ಟಾರ್ಥಗಳು ವೃದ್ಧಿಯಾಗುತ್ತವೆ ಎಂಬ ನಂಬಿಕೆಯಿAದ ಜನರು ಕುಟುಂಬ ಸಮೇತವಾಗಿ ಶಕ್ತಿ ದೇವತೆಯನ್ನು ಆರಾಧನೆ ಮಾಡುವುದು ಪ್ರತೀತಿ. ಈ ಹಿನ್ನೆಲೆಯಲ್ಲಿ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ವಿವಿಧ ರೀತಿಯ ಹೂವಿನ ಅಲಂಕಾರವನ್ನು ದೇವಾಲಯದ ಮುಂಭಾಗದ ದ್ವಾರದಲ್ಲಿ ಗರ್ಭಗುಡಿ ಸೇರಿದಂತೆ ದೇವಾಲಯದ ಆವರಣದಲ್ಲಿ ವಿವಿಧ ರೀತಿಯ ಹೂವು ಮತ್ತು ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು.
ನಾಲ್ಕು ವಾರವೂ ಲಕ್ಷಿ÷್ಮÃ ಅಲಂಕಾರ:
ಆಷಾಢ ಮಾಸದ ನಾಲ್ಕು ವಾರಗಳು. ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಲಕ್ಷಿ÷್ಮÃ ಅಲಂಕಾರವನ್ನು ಮೂಲ ಚಾಮುಂಡಿ ತಾಯಿ ಹಾಗೂ ಉತ್ಸವ ಮೂರ್ತಿಗೆ ಭಕ್ತರು ನೀಡುವ ಆ ಅಪ್ಪಟ ರೇಷ್ಮೆ ಸೀರೆಯಲ್ಲಿ ಅಲಂಕಾರ ಮಾಡಲಾಗುತ್ತದೆ. ಜೊತೆಗೆ ಆಷಾಢ ಶುಕ್ರವಾರದಂದು ಬೆಳಗಿನ ಜಾವ 3:30ರಿಂದಲೇ ಮೂಲ ಮೂರ್ತಿಯ ಗರ್ಭಗುಡಿಯಲ್ಲಿ ನಾಡ ಅಧಿದೇವತೆಗೆ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಗಳು ನಡೆದ ಬಳಿಕ ಅಲಂಕಾರ ಹಾಗೂ ಮಹಾಮಂಗಳಾರತಿಯ ನಂತರ ಮುಂಜಾನೆ 5:30ಕ್ಕೆ ಭಕ್ತರ ದರ್ಶನಕ್ಕೆ ತೆರೆಯಲಾಗುವುದು. ನಂತರ ಬೆಳಗ್ಗೆ 10 ಗಂಟೆಯವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.
ಸಿಎಂ ಕುಟುಂಬದಿAದ ಹಸಿರು ರೇಷ್ಮೆ ಸೀರೆ: ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿ ತಾಯಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್? ನಾಡ ಅಧಿದೇವತೆಗೆ ದುಬಾರಿ ಬೆಲೆಯ ಹಸಿರು ರೇಷ್ಮೆ ಸೀರೆಯನ್ನು ನೀಡಿದ್ದು, ಮುಂಜಾನೆಯ ವಿವಿಧ ಪೂಜಾ ಕೈಂಕರ್ಯಗಳ ನಂತರ ದೇವಿಗೆ ಸಿಎಂ ಕುಟುಂಬ ನೀಡಿರುವ ರೇಷ್ಮೆ ಸೀರೆಯನ್ನು ಅಲಂಕಾರ ಮಾಡಲಾಯಿತು ಎಂದು ದೇವಸ್ಥಾನದ ಮೂಲಗಳು ಖಚಿತಪಡಿಸಿವೆ.
ಇದೇ ರೀತಿ ಈ ಹಿಂದೆ ಡಿ.ಕೆ. ಶಿವಕುಮಾರ್ ಸಂಕಷ್ಟದ ಸಮಯದಲ್ಲಿ ಜೈಲಿನಿಂದ ಹೊರಬಂದ ಸಂದರ್ಭದಲ್ಲಿ ಚಾಮುಂಡಿ ಬೆಟ್ಟಕ್ಕೆ ಬೆಳ್ಳಿ ಆನೆಗಳ ಮೂರ್ತಿ ನೀಡಿ ಹರಕೆ ತೀರಿಸಿದ್ದರು. ಅದೇ ರೀತಿ ಚಾಮುಂಡಿ ತಾಯಿಯ ಪರಮಭಕ್ತರಾದ ಅವರು ಇಂದು ಮೊದಲ ಆಷಾಢ ಶುಕ್ರವಾರಕ್ಕೆ ಚಾಮುಂಡಿ ತಾಯಿಗೆ ರೇಷ್ಮೆ ಸೀರೆ ಅರ್ಪಿಸುವುದು ವಿಶೇಷವಾಗಿದೆ.
ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳು ಇಲ್ಲದ ಕಾರಣ ಕುಟುಂಬ ಸಮೇತರಾಗಿ ಶಕ್ತಿದೇವತೆ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ. ಆದ್ದರಿಂದ ಕುಟುಂಬ ಸಮೇತರಾಗಿ ಶಕ್ತಿದೇವತೆ ದರ್ಶನ ಪಡೆಯಿರಿ. ಆಷಾಢ ಶುಕ್ರವಾರದ ನಾಲ್ಕು ವಾರಗಳು ಚಾಮುಂಡಿ ತಾಯಿಗೆ ಲಕ್ಷಿ ಅಲಂಕಾರ ಇರುವುದು ವಿಶೇಷ.
ಶಶಿಶೇಖರ್ ದೀಕ್ಷಿತ್, ಪ್ರಧಾನ ಅರ್ಚಕರು.








