ಗಗನಕ್ಕೆ ಚಿಮ್ಮಿದ ವಿಕ್ರಮ್-1

ಶ್ರೀಹರಿಕೋಟಾ (ಆಂಧ್ರಪ್ರದೇಶ) : ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಸ್ಕೆöÊರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ, ದೇಶದ ಮೊದಲ ಖಾಸಗಿ ಆರ್ಬಿಟಲ್ ದರ್ಜೆಯ ರಾಕೆಟ್ ವಿಕ್ರಮ್-1 ಶನಿವಾರ ಮಧ್ಯಾಹ್ನ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿAದ ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿದೆ.
ಆಗಮನ್ ಎಂದು ಹೆಸರಿಡಲಾದ ಈ ಐತಿಹಾಸಿಕ ಮಿಷನ್, ಜಾಗತಿಕ ವಾಣಿಜ್ಯ ಉಪಗ್ರಹ ಉಡಾವಣಾ ಮಾರುಕಟ್ಟೆಗೆ ಭಾರತೀಯ ಖಾಸಗಿ ವಲಯದ ಅಧಿಕೃತ ಪ್ರವೇಶವನ್ನು ಸಾರಿದೆ. ಇದರೊಂದಿಗೆ, ಜಾಗತಿಕವಾಗಿ ಕಕ್ಷೆಯ ರಾಕೆಟ್‌ಗಳನ್ನು ಯಶಸ್ವಿಯಾಗಿ ನಿರ್ಮಿಸಿ ಉಡಾವಣೆ ಮಾಡಿದ ಕೆಲವೇ ಕೆಲವು ಗಣ್ಯ ಕಂಪನಿಗಳ ಸಾಲಿಗೆ ಸ್ಕೆöÊರೂಟ್ ಸೇರ್ಪಡೆಯಾಗಿದೆ.
ಕೊನೆ ಕ್ಷಣದ ರೋಮಾಂಚನ ತಾಂತ್ರಿಕ ಸವಾಲು
ನಿಗದಿತ ವೇಳಾಪಟ್ಟಿಯ ಪ್ರಕಾರ ರಾಕೆಟ್ ಇಂದು ಬೆಳಿಗ್ಗೆ 11:30 ಕ್ಕೆ ಉಡಾವಣೆಯಾಗಬೇಕಿತ್ತು. ಆದರೆ, ಉಡಾವಣೆಗೆ ಕೆಲವೇ ನಿಮಿಷಗಳ ಮುನ್ನ ಮಿಷನ್ ಕಂಟ್ರೋಲ್ ತಂಡವು ತಾಂತ್ರಿಕ ಕಾರಣಗಳಿಗಾಗಿ ಯೋಜಿತ ತಡೆ ವಿಧಿಸಿತು. ಇದರಿಂದಾಗಿ ಶ್ರೀಹರಿಕೋಟಾದ ಕಂಟ್ರೋಲ್ ರೂಂನಲ್ಲಿ ಕೆಲಕಾಲ ಆತಂಕ ಮತ್ತು ತಳಮಳದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಎಲ್ಲಾ ತಾಂತ್ರಿಕ ಸವಾಲುಗಳನ್ನು ಯಶಸ್ವಿಯಾಗಿ ನಿವಾರಿಸಿ, ಮಧ್ಯಾಹ್ನ 12:05:30 ರ ಸುಮಾರಿಗೆ ಮುಗಿಲನ್ನು ಸೀಳಿ ರಾಕೆಟ್ ನಭಕ್ಕೆ ಜಿಗಿಯುತ್ತಿದ್ದಂತೆ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಹರ್ಷೋದ್ಗಾರ ಮುಗಿಲುಮುಟ್ಟಿತು.
ವಿಕ್ರಮ್-1 ರಾಕೆಟ್‌ನ ತಾಂತ್ರಿಕ ವೈಶಿಷ್ಟ÷್ಯಗಳು
ಏಳು ಅಂತಸ್ತಿನ ಎತ್ತರ: ಸಂಪೂರ್ಣವಾಗಿ ಕಾರ್ಬನ್ ಕಾಂಪೋಸಿಟ್ ಸಂರಚನೆಯಿAದ ಮಾಡಲ್ಪಟ್ಟಿರುವ ಈ ರಾಕೆಟ್ ಸುಮಾರು 7 ಅಂತಸ್ತುಗಳಷ್ಟು ಎತ್ತರವಿದೆ.ಇದು ನಾಲ್ಕು ಹಂತಗಳ ರಾಕೆಟ್ ಆಗಿದ್ದು, ಮೂರು ಘನ ಇಂಧನ ಹಂತಗಳನ್ನು ಹೊಂದಿದೆ. ಕೊನೆಯ ಹಂತದಲ್ಲಿ ಕಕ್ಷೆ ಹೊಂದಾಣಿಕೆಗಾಗಿ ಸಂಸ್ಥೆಯೇ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದ ಆಧುನಿಕ 3ಆ-ಪ್ರಿಂಟೆಡ್ ದ್ರವ ಇಂಧನ ಎಂಜಿನ್ ಅನ್ನು ಬಳಸಲಾಗಿದೆ. ಭೂಮಿಯ ಕೆಳ ಕಕ್ಷೆಗೆ ಗರಿಷ್ಠ 350 ಕೆಜಿ ತೂಕದ ಸಣ್ಣ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಪ್ರಸ್ತುತ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ 60-ಡಿಗ್ರಿ ಇಳಿಜಾರಿನಲ್ಲಿ 450 ಕಿಲೋಮೀಟರ್ ಕಕ್ಷೆಯನ್ನು ಗುರಿಯಾಗಿಸಲಾಗಿದೆ.

Recent Articles

spot_img

Related Stories

Share via
Copy link