
ಮೈಸೂರು: ಕಾವೇರಿ ಕೊಳ್ಳದ ರೈತರು ಯಾರೂ ಕೂಡ ಬಿತ್ತನೆ ಮಾಡಬಾರದೆಂಬ ಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಗಮನಿಸುತ್ತಿದ್ದರೆ, ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಸಮಿತಿ ನೀಡಿರುವ ತೀರ್ಪು ರೈತರ ಪಾಲಿಗೆ ವಿಷವಾಗಿದೆ. ಈ ಭಾಗದ ರೈತರು, ದನ ಕರುಗಳಿಗೆ ಕುಡಿಯಲು ಕೂಡಾ ನೀರು ಸಿಗುತ್ತಿಲ್ಲ. ಅಂತಹ ಪರಿಸ್ಥಿತಿ ಬಂದಿದೆ. ಕಾವೇರಿ ವಾಟರ್ ಮ್ಯಾನೇಜ್‌ಮೆಂಟ್ ಟ್ರಿಬ್ಯುನಲ್ ಆದೇಶ ಮಾಡುವ ಮುನ್ನವೇ ಕಾವೇರಿ ನೀರು ಬಿಟ್ಟಿದ್ದಾರೆ. ಟ್ರಿಬ್ಯುನಲ್ ಮುಂದೆ ಸರಿಯಾದ ರೀತಿಯಲ್ಲಿ ವಾದ ಮಾಡದೇ ಇರುವುದಕ್ಕೆ ಇಂತಹ ತೀರ್ಪು ಬಂದಿದೆ. ರೈತರ ರಕ್ಷಣೆಗೆ ಮುಖ್ಯಮಂತ್ರಿಗಳೇ ಮುತುವರ್ಜಿವಹಿಸಬೇಕು ಎಂದು ಒತ್ತಾಯಿಸಿದರು.
ಶಿಲ್ಪಾ ಸಾಧನೆಗೆ ಮೆಚ್ಚುಗೆ: ಕಾಮನ್ ವೆಲ್ತ್ ಪ್ಯಾರಾ ಕ್ರೀಡಾಕೂಟದಲ್ಲಿ ಶಿಲ್ಪಾ ಸಾಧನೆ ಮೆಚ್ಚುವಂಥದ್ದು. ಕೆ.ಆರ್.ನಗರದ ಬಡ ಕುಟುಂಬದಿAದ ಬಂದಿರುವ ಅವರ ಸಾಧನೆಯ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದರು.
ಆಗಸ್ಟ್ 1ರಂದು ಪ್ರಧಾನಿ ಮೋದಿ ಮೈಸೂರಿಗೆ: ಆಗಸ್ಟ್ 1ರಂದು ಮಧ್ಯಾಹ್ನ 3:30ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಲಿದ್ದು, ನಾರಾಯಣ್ ಶಾಸ್ತಿç ರಸ್ತೆಯಲ್ಲಿರುವ ವಿವೇಕಾನಂದ ಸ್ಮಾರಕ ಉದ್ಘಾಟಿಸಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.








