ವಾಕ್‌ ಮಾಡೋರಿಗೆ ಸ್ಪೆಷಲ್‌ ಸ್ಟೋರಿ ಇದು ಮಿಸ್‌ ಮಾಡಬೇಡಿ ….!

ತುಮಕೂರು:

    ಸಾಮಾನ್ಯವಾಗಿ ವಾಕಿಂಗ್‌ ಮಾಡುವುದು ಈಗ ಎಲ್ಲರ ಹವ್ಯಾಸ. ಇನ್ನು ಕೆಲವು ವೈದ್ಯರು ಹೇಳಿದ್ದಾರೆ ಎಂದು ಕಾಟಾ ಚಾರಕ್ಕೂ ಮಾಡಬಹುದು. ಅದು ಏನೆ ಇರಲಿ ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿ ಹುಟ್ಟಿದೆ. ಹೈಜನಿಕ್‌ ಫುಡ್‌ ಮೇಲೆ ಆಸಸ್ತಿ ಹೆಚ್ಚಾಗಿದೆ. ಹೀಗಾಗಿ ಎಲ್ಲರೂ ಜಿಮ್‌, ಯೋಗಾ, ವಾಕಿಂಗ್‌ ಹೀಗೆ ತಮಗೆ ಇಷ್ಟದ ವ್ಯಾಯಮ ಮಾಡುತ್ತಲೆ ಇರುತ್ತಾರೆ.

    ಆರೋಗ್ಯಕರವಾಗಿರಲು ವಾಕಿಂಗ್ ಉತ್ತಮ ವ್ಯಾಯಾಮ. ನಿಯಮಿತವಾಗಿ ನಡೆಯುವವರು ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ವಾಕಿಂಗ್ ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಪ್ರತಿನಿತ್ಯ ನಡೆಯುವುದರಿಂದ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಪ್ರಮಾಣ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಇದರಿಂದ ಮಾನಸಿಕ ಆರೋಗ್ಯಕ್ಕೆ ಪರಿಣಾಮ ಕಾರಿಯಾದ ವ್ಯಾಯಾಮ. ಒತ್ತಡ, ಉದ್ವೇಗ ಮತ್ತು ಆತಂಕವನ್ನು ಕಡಿಮೆ ಮಾಡಲು ಇದು ಬೆಸ್ಟ್‌.

     ಸಂಶೋಧನೆಯ ಪ್ರಕಾರ ವಾಕ್‌ ಮಾಡಿದವ ವಯಸ್ಸು ವಾಕ್ ಮಾಡದವರಕ್ಕಿಂತಲೂ 15 ರಿಂದ 20 ವರ್ಷ ಹೆಚ್ಚಿರುತ್ತದೆ. ವಾಕಿಂಗ್ ಮಾಡಿದಾಗ ಅದರ ಎಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಲು ಕೆಲವು ಸಂಗತಿಗಳ ಮೇಲೆ ನಿಗಾ ಇಡಬೇಕಾಗುತ್ತದೆ. ವಾಕಿಂಗ್ ಮಾಡುವ ಸ್ಥಳ, ನೀವು ಹಾಕಿಕೊಳ್ಳುವ ಬಟ್ಟೆ, ನೀವು ಧರಿಸುವ ಶೂಗಳು ಬಗ್ಗೆ ನೀವು ಗಮನ ಹರಿಸುತ್ತೀರೋ ಹಾಗೇಯೇ ವಾಕಿಂಗ್‌ ವೇಗದ ಮೇಲೆ ಒಂದು ಕಣ್ಣು ನೆಟ್ಟಿರಬೇಕು. ವೇಟ್‌ ಲಾಸ್‌ ಮಾಡಿಕೊಳ್ಳಲು ಇಚ್ಛೆ ಹೊಂದಿರುವವರಿಗೆ ವಾಕಿಂಗ್‌ ಉತ್ತಮ ವ್ಯಾಯಮ. ತೂಕ ಕಡಿಮೆ ಮಾಡಿಕೊಳ್ಳಲು ಸರಿಯಾದ ನಡಿಗೆಯ ಮಾರ್ಗ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. 

    ವಾಕಿಂಗ್‌ ಮಾಡುವಾಗ ಎಲ್ಲೂ ನಿಲ್ಲದೆ. ಕುಳಿತು ಕೊಳ್ಳದೆ ನಿರಂತರವಾಗಿ ಒಂದೇ ವೇಗದಲ್ಲಿ ನಡೆಯುತ್ತಲೇ ಸಾಗಬೇಕು. ಇದರಿಂದ ದೇಹಕ್ಕೆ ಅನುಕೂಲ. ಇನ್ನು ವೈದ್ಯರು ಸಹ ಇದೇ ಸಲಹೆಯನ್ನು ನೀಡುತ್ತಾರೆ. ಇನ್ನು ನೀವು ವಾಕ್‌ ಮಾಡಿದರ ಪ್ರಯೋಜನ ಸಿಕ್ಕಿದೆಯಾ ಎಂದು ಹೇಗೆ ತಿಳಿದುಕೊಳ್ಳುವುದು ಎಂಬುದು ಸಹ ದೊಡ್ಡ ಪ್ರಶ್ನೆ. ಸಾಮಾನ್ಯವಾಗಿ ಜನರು ವಾಕ್ ಮಾಡಿದಾಗನ ಬೆವರುತ್ತಾರೆ. ಹಣೆ ಹಾಗೂ ಬೆನ್ನಿನ ಭಾಗದಲ್ಲಿ ಬೆವರು ಕಾಣಿಸಿಕೊಂಡರೆ, ವಾಕಿಂಗ್ ಲಾಭ ನೀವು ಪಡೆಯುತ್ತೀದ್ದೀರಿ ಎಂದು ಅರ್ಥ.

    ಸಾಮಾನ್ಯವಾಗಿ ವಾಕಿಂಗ್ ಮಾಡುವಾಗ ಎಲ್ಲರೂ ಗಂಟೆಗೆ ನಾಲ್ಕು ಕಿಲೋಮಿಟರ್ ವೇಗದಲ್ಲಿ ನಡೆಯುತ್ತಾರೆ. ಇದರಿಂದ ನೀವು ತೂಕ ಇಳಿಸಿ ಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇದರಲ್ಲಿ ವೇಗ ಕಡಿಮೆ ಇರುತ್ತದೆ. ಕ್ರಮೇಣ ವಾಕಿಂಗ್ ಮಾಡುವಾಗ ಸ್ಪೀಡ್‌ ಹೆಚ್ಚಿಸಿಕೊಂಡರೆ ನೀವು ಇದರ ಲಾಭವನ್ನು ಪಡೆಯಬಹುದು. ಪ್ರತಿ ಗಂಟೆಗೆ 4.5 ಕಿಲೋಮೀಟರ್‌ ನಿಂದ 6 ಕಿಲೋ ಮೀಟರ್‌ ವೇಗದಲ್ಲಿ ನಡೆದರೆ, ತೂಕ ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ ಇದರಿಂದ ನೀವು ಗರಿಷ್ಠ ಪ್ರಯೋಜನ ಪಡೆಯಬಹುದು. 

    ಸ್ಥೂಲಕಾಯತೆಯನ್ನು ಕಡಿಮೆ ಮಾಡಲು, ನೀವು ಪುಸ್ತಕದ ಚೀಲ ಅಥವಾ ಇತರ ಯಾವುದೇ ತೂಕವನ್ನು ನಿಮ್ಮ ಬೆನ್ನಿನ ಮೇಲೆ ಹೊತ್ತುಕೊಂಡರೆ, ನೀವು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೀರಿ.

    ವಾಕ್‌ ಮಾಡುವಾಗ ದೇಹದಲ್ಲಿ ಕ್ಯಾಲೋರಿಗಳು ಕಡಿಮೆ ಆಗುತ್ತದೆ. ಇದಕ್ಕೆ ಬರ್ನ್‌ ಎಫೆಕ್ಟ್ ಎಂದು ಕರೆಯುತ್ತಾರೆ. ಜಾಗಿಂಗ್‌, ವೇಗದ ನಡಿಗೆ, ಕ್ರೀಡೆ ಅಂತಹ ಯಾವುದೇ ಚಟುವಟಿಕೆ ಮಾಡಿದಾಗ ದೇಹವು ಹಲವಾರು ಗಂಟೆಗಳ ಕಾಲ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap