100 ಅಡಿ ದಾಟಿದ ಕೆಆರ್‌ಎಸ್ ನೀರಿನ ಮಟ್ಟ ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ : ಕಬಿನಿ ಜಲಾಶಯ ಭರ್ತಿ, ನದಿಗೆ ಹರಿದ ನೀರು

ಮೈಸೂರು: ಕೇರಳಂನ ವಯನಾಡು ಹಾಗೂ ಕೊಡಗಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ ಅಧಿಕ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 100 ಅಡಿ ದಾಟಿದೆ. ಮತ್ತೊಂದೆಡೆ ಕಬಿನಿ ಜಲಾಶಯ ಭರ್ತಿಯಾಗಿರುವುದರಿಂದ ಅಧಿಕ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಜುಲೈ ತಿಂಗಳ ಕೊನೆಯಲ್ಲಿ ಕೇರಳದ ವಯನಾಡು ಮತ್ತು ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕಬಿನಿ, ಕೆಆರ್‌ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗಿದೆ. ಕಳೆದ 10 ದಿನಗಳ ಹಿಂದೆ ಕೆಆರ್‌ಎಸ್ ಡ್ಯಾಂನಲ್ಲಿ 82 ಅಡಿ ಇದ್ದ ನೀರಿನ ಮಟ್ಟ ಇದೀಗ 100 ಅಡಿ ದಾಟಿದೆ.

ಕೊಡಗಿನ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 12 ಸಾವಿರಕ್ಕೂ ಹೆಚ್ಚು ನೀರನ್ನು ಹೊರ ಬಿಡಲಾಗುತ್ತಿದೆ. ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಆಗಿದ್ದು. ಇಂದು (ಸೋಮವಾರ) ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿದೆ. ಹೀಗೆ ಮಳೆಯಾದರೆ ಇನ್ನು 15 ದಿನಗಳಲ್ಲಿ ಕೆಆರ್?ಎಸ್ ಜಲಾಶಯ ಭರ್ತಿಯಾಗಲಿದೆ.

ಸೇತುವೆ ಮುಳುಗಡೆ: ಕಬಿನಿ ಜಲಾಶಯದಿಂದ 27,000 ಕ್ಯೂಸೆಕ್‌ಗಿಂತ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಇದರ ಪರಿಣಾಮ ಕಬಿನಿ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆಯಾಗಿದೆ. ಇದರಿಂದ ಹ್ಯಾಂಡ್ ಪೋಸ್ಟ್, ಎನ್.ಬೇಗೂರು ಮುಖ್ಯ ರಸ್ತೆ, ಬಿದರಹಳ್ಳಿ, ಭೀಮನಕೊಲ್ಲಿಯ ಶ್ರೀ ಮಾದೇಶ್ವರ ದೇವಸ್ಥಾನಕ್ಕೆ ರಸ್ತೆ ಕಲ್ಪಿಸುವ ಮುಖ್ಯ ರಸ್ತೆ ಸೇರಿದಂತೆ ಸುಮಾರು 25 ಗ್ರಾಮಗಳಿಗೆ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.

ಇದರಿAದ ಕಬಿನಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ರಂಗಯ್ಯ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ಹೆಚ್ಚಿನ ನೀರನ್ನು ಬಿಡಲಾಗಿದ್ದು, ಜನರು ನದಿ ಪಾತ್ರಕ್ಕೆ ಹೋಗದಂತೆ ಹಾಗೂ ಜಾನುವಾರುಗಳನ್ನು ನದಿ ಪಾತ್ರಕ್ಕೆ ಬಿಡದಂತೆ ಮನವಿ ಮಾಡಿದ್ದಾರೆ.

ಬಾಕ್ಸ್

ಕಾವೇರಿ ನೀರು ಹಂಚಿಕೆ ಬಿಕ್ಕಟ್ಟಿನ ನಡುವೆ ಆಶಾದಾಯಕ ಬೆಳವಣಿಗೆ

ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ತಲೆದೋರಿರುವ ಬೆನ್ನಲ್ಲೇ ಆಶಾದಾಯಕ ಬೆಳವಣಿಗೆ ಎನ್ನುವಂತೆ ಅತ್ತ ಕೇರಳಂ ಭಾಗದಲ್ಲಿ ಸುರಿಯುತ್ತಿರುವ ಮಳೆ ಕಾವೇರಿ ಕೊಳ್ಳದ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಿಸಿದೆ. ಮೂರು ದಿನಗಳಿಂದ ಕೇರಳಂ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣರಾಜ ಸಾಗರ (ಕೆಆರ್‌ಎಸ್), ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳ ನೀರಿನ ಒಳಹರಿವಿನಲ್ಲಿ ಏರಿಕೆ ಕಂಡುಬAದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪಗಳ ಮೇಲ್ವಿಚರಣಾ ಸಂಸ್ಥೆ ಹಂಚಿಕೊAಡಿರುವ ಮಾಹಿತಿಯ ಪ್ರಕಾರ ಆಗಸ್ಟ್ 1ರಂದು ಕಾವೇರಿ ಜಲಾನಯನ ಪ್ರದೇಶದಲ್ಲಿ ಒಟ್ಟು 36,293 ಕ್ಯೂಸೆಕ್ ನೀರಿನ ಒಳಹರಿವು, ಹಾಗೂ 2065 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯ 49.45 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 18.73 (38%) ನೀರು ಸಂಗ್ರಹವಾಗಿದೆ. 13,522 ಕ್ಯೂಸೆಕ್ ನೀರಿನ ಒಳಹರಿವು 1,565 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.

Recent Articles

spot_img

Related Stories

Share via
Copy link