
ಬೆಂಗಳೂರು: ಕರ್ನಾಟಕದಲ್ಲಿ ನಡೆಸಿದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIಖ) ಪೂರ್ಣಗೊಂಡಿದ್ದು, ಮೊದಲ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದಾರೆ. 1,07,96,339 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್, ರಾಜ್ಯದಲ್ಲಿ 5.54 ಕೋಟಿ ಮತದಾರರ ಪೈಕಿ 4.46 ಕೋಟಿ ಮತದಾರರ ಕರಡು ಪಟ್ಟಿಯಲ್ಲಿ ಸೇರಿಸಲಾಗಿದೆ. ಎಸ್ಡಿಡಿಓ ವಿಭಾಗದ (ಗೈರು, ಸ್ಥಳಾಂತರ, ಮೃತ, ನಕಲಿ ಮತದಾರರು) 1,07,96,339 ಮತದಾರರನ್ನು ಕರಡು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. 2.21 ಕೋಟಿ ಪುರುಷ ಮತದಾರರಿದ್ದರೆ 2.24 ಕೋಟಿ ಮಹಿಳಾ ಮತದಾರರಿದ್ದಾರೆ ಎಂದು ತಿಳಿಸಿದರು.
4.46 ಕೋಟಿ ಪೈಕಿ ಮ್ಯಾಪಿಂಗ್ ಆಗದ 23.45 ಲಕ್ಷ ಹಾಗೂ ಗಣತಿ ನಮೂನೆಯಲ್ಲಿ ಮಾಹಿತಿ ವ್ಯತ್ಯಾಸ ಕಂಡುಬAದ 20.35 ಲಕ್ಷ ಸೇರಿದಂತೆ 43.81 ಲಕ್ಷ ಮತದಾರರಿಗೆ ಇಂದಿನಿAದ ನೋಟಿಸ್ ನೀಡಲಾಗುತ್ತದೆ. ಏಳು ದಿನಗಳ ಕಾಲ ಸಮಯಾವಕಾಶ ನೀಡಲಿದ್ದು, ಮತಗಟ್ಟೆ ಅಥವಾ ಗ್ರಾಮ ಪಂಚಾಯಿತಿ ಕಾರ್ಯಾಲಯ ನೋಂದಣಾಧಿಕಾರಿ (ಇಆರ್ಓ) ಸಹಾಯಕ ಚುನಾವಣಾ ಅಧಿಕಾರಿ ಮುಂದೆ ನಿಗದಿತ ದಿನದಂದು ಹಾಜರಾಗಿ ಸೂಕ್ತ ದಾಖಲಾತಿ ಒದಗಿಸಿದರೆ ಮಾತ್ರ ಅ.27ರಂದು ಮತದಾರರ ಅಂತಿಮ ಪಟ್ಟಿಯಲ್ಲಿ ಹೆಸರು ಬರಲಿದೆ. ಹೀಗಾಗಿ ಆಕ್ಷೇಪಣೆ ಹಾಗೂ ಕ್ಲೇಮು ಸಲ್ಲಿಸಲು ಅ.22 ಕೊನೆ ದಿನವಾಗಲಿದೆ ಎಂದು ಮಾಹಿತಿ ನೀಡಿದರು.
43.81 ಲಕ್ಷ ಮತದಾರರಿಗೆ ಇಂದಿನಿAದಲೇ ನೋಟಿಸ್: ಕರಡುಪಟ್ಟಿಯಲ್ಲಿ ಹೆಸರಿದ್ದು, ಮ್ಯಾಪಿಂಗ್ ಆಗದ ಹಾಗೂ ಸೂಕ್ತ ದಾಖಲಾತಿ ಒದಗಿಸದೆ ನ್ಯೂನತೆ ಕಂಡುಬAದಿರುವ ಮತದಾರರ ಸಂಖ್ಯೆ ಒಟ್ಟು 43.81 ಲಕ್ಷವಿದ್ದು, ಇವರಿಗೆ ಇಂದಿನಿAದಲೇ ಇಆರ್ಒ ಅಥವಾ ಎಆರ್ಓ ಮೂಲಕ ಖುದ್ದು, ಬಿಎಲ್ಓಗಳು ನೋಟಿಸ್ ನೀಡಲಿದ್ದಾರೆ. ನೋಟಿಸ್ ಸ್ವೀಕರಿಸುವಾಗ ಕಡ್ಡಾಯವಾಗಿ ಮತದಾರರ ಫೋಟೊ ತೆಗೆದುಕೊಳ್ಳಬೇಕು. ಮತಗಟ್ಟೆ ಅಥವಾ ಗ್ರಾಮ ಪಂಚಾಯಿತಿ ಕಾರ್ಯಾಲಯದ ಹಾಜರಾತಿ ಪುಸ್ತಕದಲ್ಲಿ ಮತದಾರರ ಸಹಿ ಹಾಗೂ ಗ್ರೂಪ್ ಫೋಟೊ ತೆಗೆದು ಬಿಎಲ್ಓ ಆ?ಯಪ್ನಲ್ಲಿ ಅಪ್ಲೋಡ್ ಮಾಡಬೇಕೆಂದು ಸೂಚಿಸಲಾಗಿದೆ ಎಂದರು.
ನೋಟಿಸ್ನಲ್ಲಿ ಏನಿರುತ್ತದೆ: ಈ ನೋಟಿಸ್ನಲ್ಲಿ ವಿಚಾರಣೆ ದಿನಾಂಕ, ಸ್ಥಳ, ಸಮಯ ಇರುತ್ತದೆ. ಆ ದಿನ ಸಂಬAಧಿತ ಇಆರ್ಒ ಗ್ರಾಮ ಪಂಚಾಯಿತಿ ಕಾರ್ಯಾಲಯ ಅಥವಾ ಮತಗಟ್ಟೆಗೆ ಬರಲಿದ್ದಾರೆ. ಅಲ್ಲಿಗೆ ನೋಟಿಸ್ ಪಡೆದ ಮತದಾರ ನಿಗದಿತ ದಾಖಲೆಗಳೊಂದಿಗೆ ಖುದ್ದು ಹಾಜರಾಗಬೇಕು. ನಿಗದಿತ ದಾಖಲೆ ಸಲ್ಲಿಕೆ ಮಾಡಬೇಕು. ಈ ವೇಳೆ ಹಾಜರಿ ಪುಸ್ತಕದಲ್ಲಿ ಮತದಾರನ ಸಹಿ ಪಡೆಯಲಾಗುತ್ತದೆ. ಬಳಿಕ ಗ್ರೂಪ್ ಫೋಟೋ ಸಹ ತೆಗೆಯಲಾಗುತ್ತದೆ.
ಬಳಿಕ ಅದನ್ನು ಇಆರ್ಒ ಆಯಪ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಮತದಾರರು ಸಲ್ಲಿಸುವ ದಾಖಲೆಗಳನ್ನು ಇಆರ್ಒಗಳು ಜಿಲ್ಲಾ ಚುನಾವಣಾಧಿಕಾರಿಗೆ (ಡಿಇಒ) ಕಳುಹಿಸಲಿದ್ದಾರೆ. ಡಿಆರ್ಒ ಆ ದಾಖಲೆಗಳ ಅಸಲಿಯತ್ತು ಪರಿಶೀಲಿಸಿ ಮತ್ತೆ ಇಆರ್ಒಗೆ ಕಳುಹಿಸಲಿದ್ದಾರೆ. ಬಳಿಕ ಇಆರ್ಒ ಆ ಮತದಾರರನ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಿದ್ದಾರೆ.
ಒಂದು ವೇಳೆ ಮತದಾರರ ನೋಟಿಸ್ ಪಡೆದು ನಿಗದಿತ ದಿನಾಂಕ ವಿಚಾರಣೆಗೆ ಹಾಜರಾಗದ್ದರೆ, ಮತ್ತೊಂದು ದಿನಕ್ಕೆ ಮನವಿ ಮಾಡಿಕೊಳ್ಳಬಹುದು. ಇಆರ್ಒ ನೀಡುವ ಎರಡನೇ ದಿನಾಂಕದAದು ಮತದಾರರ ತಪ್ಪದೇ ಹಾಜರಾಗಬೇಕು. ಮೂರನೇ ಅವಕಾಶ ಇರುವುದಿಲ್ಲ. ಎರಡನೇ ಬಾರಿಯೂ ಗೈರಾದರೆ ಅಂತಹ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ರದ್ದಾಗಲಿದೆ.
ಒಂದು ವೇಳೆ ಇಆರ್ಒ ಮೌಖಿಕ ಆದೇಶದ ಮೂಲಕ ಮತದಾರನ ಹೆಸರು ಡಿಲೀಟ್ ಮಾಡಿದರೆ, 15 ದಿನದೊಳಗೆ ಆ ಮತದಾರ ಡಿಇಒಗೆ ಮೇಲ್ಮನವಿ ಸಲ್ಲಿಸಬಹುದು. ಡಿಇಒ ಸಹ ಆ ಆದೇಶ ಎತ್ತಿ ಹಿಡಿದರೆ, 30 ದಿನದೊಳಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ(ಸಿಇಒ) ಮೇಲ್ಮನವಿ ಸಲ್ಲಿಸಬಹುದು. ಸಿಇಒ ಪರಿಶೀಲಿಸಿ ಅಂತಿಮ ಆದೇಶ ನೀಡಲಿದ್ದಾರೆ.
ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಗೈರು ಹಾಗೂ ಸ್ಥಳಾಂತರಗೊAಡವರು ಮತದಾರರ ನಿಗದಿತ ದಾಖಲೆಯೊಂದಿಗೆ ಹೊಸದಾಗಿ ಫಾರ್ಮ್ 6 ಅರ್ಜಿ ಸಲ್ಲಿಕೆ ಮಾಡಬೇಕು. ಅಲ್ಲದೆ, ಅ.1ರೊಳಗೆ 18 ವರ್ಷ ತುಂಬಿದ ಯುವಮತದಾರರು ಫಾರ್ಮ್ 6 ಅರ್ಜಿ ತುಂಬಿದರೆ ಆ.27ರಂದು ಪ್ರಕಟವಾಗುವ ಅಂತಿಮ ಮತದಾರರಪಟ್ಟಿಯಲ್ಲಿ ಸೇರ್ಪಡೆಗೊಳ್ಳಬಹುದು ಎಂದು ಅನ್ಬುಕುಮಾರ್ ತಿಳಿಸಿದರು.
43.80 ಲಕ್ಷ ನೋಟಿಸ್ ಪೈಕಿ ಬೆಂಗಳೂರಿನಲ್ಲಿ 24 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಬೆಂಗಳೂರು ಕೇಂದ್ರ-4.29 ಲಕ್ಷ, ಬೆಂಗಳೂರು ಉತ್ತರ 6.13 ಲಕ್ಷ ಬೆಂಗಳೂರು ನಗರ 9.46 ಹಾಘೂ ಬೆಂಗಳೂರು ದಕ್ಷಿಣ 4.17 ಲಕ್ಷ ಮಂದಿಗೆ ನೋಟಿಸ್ ತಲುಪಿಸಬೇಕಿದೆ. ಕಲಬುರಗಿ 1.05, ಲಕ್ಷ ಕೋಲಾರ 1.42 ಲಕ್ಷ, ದಕ್ಷಿಣ ಕನ್ನಡ 1.50, ಮೈಸೂರು 1.28, ಗದಗ 25976 ದಾವಣಗೆರೆ 7,088 ಲಕ್ಷ ನೋಟಿಸ್ ನೀಡಬೇಕಿದೆ. ಹೊಸದಾಗಿ ಹಾಗೂ ಮತದಾರರ ಚೀಟಿಯಲ್ಲಿನ ನ್ಯೂನತೆಗಳನ್ನ ಸರಿಪಡಿಸಲು ವಿವಿಧ ನಮೂನೆಯಡಿ 14.67 ಲಕ್ಷ ಮಂದಿ ಅರ್ಜಿ ಸಲ್ಲಿಸಲಾಗಿದೆ.








