
ನವದೆಹಲಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬAಧಿಸಿದAತೆ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯದ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ, ಹೊಸ ಮತದಾರರ ನೋಂದಣಿಗೆ ಬಳಸುವ ಫಾರ್ಮ್-6ನಲ್ಲಿನ ಎಸ್‌ಐಆರ್ ಸಂಬAಧಿತ ಹೆಚ್ಚುವರಿ ಘೋಷಣೆಯನ್ನು ಆಯೋಗ ಹಿಂಪಡೆದಿದೆ.
ಸೆ.29ರ ರಾತ್ರಿ ಪೋರ್ಟಲ್‌ನಲ್ಲಿ ಈ ಬದಲಾವಣೆ ಜಾರಿಗೆ ಬಂದಿದೆ. ಆದರೆ ಇದು ಎಲ್ಲ ರಾಜ್ಯಗಳಿಗೂ ಏಕಕಾಲದಲ್ಲಿ ಅನ್ವಯಿಸುವುದಿಲ್ಲ. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಮಾತ್ರ ಹೆಚ್ಚುವರಿ ಘೋಷಣೆಯನ್ನು ತೆಗೆದುಹಾಕಲಾಗಿದೆ. SIಖ ಇನ್ನೂ ನಡೆಯುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅದು ಮುಂದುವರಿಯಲಿದೆ.
ಹೊಸ ಮತದಾರರು ಫಾರ್ಮ್-6 ಸಲ್ಲಿಸುವಾಗ ತಮ್ಮ ಹೆಸರು ಅಥವಾ ತಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯರ ಹೆಸರು ಹಿಂದಿನ ಮತಪಟ್ಟಿಯಲ್ಲಿ ಇತ್ತೇ ಎಂಬುದಕ್ಕೆ ಸಂಬAಧಿಸಿದ ಮಾಹಿತಿಯನ್ನು ನೀಡಬೇಕಾಗಿತ್ತು. ಈ ಹೆಚ್ಚುವರಿ ಅಂಶವನ್ನು ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಆನ್‌ಲೈನ್ ಫಾರ್ಮ್ನಲ್ಲಿ ಸೇರಿಸಲಾಗಿತ್ತು. ಇದರ ಉದ್ದೇಶ ಅರ್ಜಿದಾರರ ಹಿಂದಿನ ಮತದಾರರ ಪಟ್ಟಿಯ ಸಂಪರ್ಕವನ್ನು ಪರಿಶೀಲಿಸುವುದಾಗಿತ್ತು.
ಆದರೆ ಫಾರ್ಮ್-6 ಕಾನೂನಿನಡಿ ನಿಗದಿಪಡಿಸಿರುವ ನಮೂನೆಯಾಗಿರುವುದರಿಂದ, ಅದಕ್ಕೆ ಹೆಚ್ಚುವರಿ ಅಂಶ ಸೇರಿಸಲು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಬೇಕೇ ಎಂಬ ಪ್ರಶ್ನೆ ಉದ್ಭವಿಸಿತು.
ಇಬ್ಬರು ಆಯುಕ್ತರ ಆಕ್ಷೇಪ ತನಿಖಾ ವರದಿ ಪ್ರಕಾರ, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಫಾರ್ಮ್-6 ಬದಲಾವಣೆ ಸೇರಿದಂತೆ ಎಸ್‌ಐಆರ್‌ಗೆ ಸಂಬAಧಿಸಿದ ಹಲವು ಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಕಳೆದ ಸುಮಾರು 10 ತಿಂಗಳಲ್ಲಿ ಇಬ್ಬರೂ ಆಯುಕ್ತರು ವಿವಿಧ ನಿರ್ಧಾರಗಳು ಮತ್ತು ಪ್ರಕ್ರಿಯೆಗಳ ಕುರಿತು ಕನಿಷ್ಠ 14 ಬಾರಿ ಆಕ್ಷೇಪ ದಾಖಲಿಸಿದ್ದರು ಎಂದು ವರದಿ ಹೇಳಿದೆ. ಇದರಲ್ಲಿ ಫಾರ್ಮ್-6 ಬದಲಾವಣೆ, ಮತದಾರರ ಪಟ್ಟಿಯ ನಿರ್ವಹಣೆ, ಸಾಫ್ಟ್ವೇರ್ ವ್ಯವಸ್ಥೆ ಹಾಗೂ ಚುನಾವಣಾ ಮಾಹಿತಿಯ ಪ್ರವೇಶಕ್ಕೆ ಸಂಬAಧಿಸಿದ ವಿಷಯಗಳೂ ಸೇರಿವೆ.
ಫಾರ್ಮ್-6 1960 ಅಡಿಯಲ್ಲಿ ನಿಗದಿಪಡಿಸಿರುವುದರಿಂದ, ನಿಯಮಗಳಿಗೆ ತಿದ್ದುಪಡಿ ಮಾಡದೆ ಅದರಲ್ಲಿ ಹೆಚ್ಚುವರಿ ಅಂಶ ಸೇರಿಸುವುದು ಸರಿಯಲ್ಲ ಎಂಬ ಆಕ್ಷೇಪ ಇಬ್ಬರು ಆಯುಕ್ತರಿಂದ ವ್ಯಕ್ತವಾಗಿತ್ತು ಎಂದು ವರದಿಯಾಗಿದೆ.
ಸೆ.26ರ ಸಭೆ ಬಳಿಕ ನಿರ್ಧಾರ
ಈ ಬೆಳವಣಿಗೆಗಳ ನಡುವೆ ಸೆ.26ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಸಭೆ ನಡೆಸಿದರು.
ಸಭೆಯ ಬಳಿಕ ಆಯೋಗವು ಎಸ್‌ಐಆರ್ ಸಂಬAಧಿತ ಹೆಚ್ಚುವರಿ ಘೋಷಣೆಯು ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ಅವಧಿಗೆ ಮಾತ್ರ ಅನ್ವಯಿಸಬೇಕು ಎಂದು ನಿರ್ಧರಿಸಿತು. ಎಸ್‌ಐಆರ್ ಪೂರ್ಣಗೊಂಡ ಬಳಿಕ ಸಾಮಾನ್ಯ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಅದನ್ನು ಮುಂದುವರಿಸಬಾರದು ಎಂಬ ನಿರ್ಧಾರ ಕೈಗೊಳ್ಳಲಾಯಿತು. ಇದರ ಪರಿಣಾಮವಾಗಿ ಸೆ.29ರ ರಾತ್ರಿ SIಖ ಪೂರ್ಣಗೊಂಡಿರುವ ರಾಜ್ಯಗಳ ಇಅIಓಇಖಿ ಪೋರ್ಟಲ್‌ನಿಂದ ಹೆಚ್ಚುವರಿ ಘೋಷಣೆ ತೆಗೆದುಹಾಕಲಾಯಿತು.
ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳುವ ಅರ್ಜಿದಾರರು ಇನ್ನು ಮುಂದೆ, 1960 ಅಡಿಯಲ್ಲಿ ನಿಗದಿಪಡಿಸಿರುವ ಸಾಮಾನ್ಯ ಫಾರ್ಮ್-6ಸಲ್ಲಿಸಬೇಕು. ಹಿಂದಿನ ಮತಪಟ್ಟಿಯಲ್ಲಿ ತಮ್ಮ ಅಥವಾ ಕುಟುಂಬದ ಹಿರಿಯರ ಹೆಸರು ಇದ್ದುದಕ್ಕೆ ಸಂಬAಧಿಸಿದ ಹೆಚ್ಚುವರಿ ವಿವರವನ್ನು ನೀಡಬೇಕಾಗಿಲ್ಲ.
ಆದರೆ ಪ್ರಕ್ರಿಯೆ ಇನ್ನೂ ನಡೆಯುತ್ತಿರುವ ರಾಜ್ಯಗಳಲ್ಲಿ SIಖಗೆ ಸಂಬAಧಿಸಿದ ಹೆಚ್ಚುವರಿ ಘೋಷಣೆ ಮುಂದುವರಿಯುತ್ತದೆ. ಅನ್‌ಮ್ಯಾಪ್ಡ್ ಮತದಾರರಿಗೆ ಮನೆ ಬಾಗಿಲಲ್ಲೇ ಪರಿಶೀಲನೆ
ಕೆಲವು ಮತದಾರರ ದಾಖಲೆಗಳು ಹಿಂದಿನ ಮತಪಟ್ಟಿಯೊಂದಿಗೆ ಹೊಂದಿಕೆಯಾಗದಿದ್ದರೆ ಅವರನ್ನು ಅನ್‌ಮ್ಯಾಪ್ಡ್ ಅಥವಾ ಲಾಜಿಕಲ್ ಡಿಸ್ಕೆçಪನ್ಸಿ ಪ್ರಕರಣವೆಂದು ಗುರುತಿಸಲಾಗುತ್ತದೆ.ಇಂತಹ ಪ್ರಕರಣಗಳಲ್ಲಿ ಮತದಾರರು ಕಚೇರಿಗೆ ಪದೇಪದೇ ಅಲೆದಾಡಬೇಕಾಗದಂತೆ ಬೂತ್ ಮಟ್ಟದ ಅಧಿಕಾರಿ ಮನೆಗೆ ತೆರಳಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ.








